ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನ್‌ ಬಳಸಿದ ಫೋನ್‌ ಮೂಲ ಪತ್ತೆ!

ಬಾಣಸವಾಡಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಿಕ ಮಣಿವಣ್ಣನ್ ಮೇಲೆ ಆರೋಪ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

businessman who delivered the mobile phone to Darshan friend Rowdy in Jail at Bengaluru grg

ಬೆಂಗಳೂರು(ಅ.26):  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ಪರಿಚಯವಿರುವ ರೌಡಿಗೆ ಬಟ್ಟೆಯಲ್ಲಿ ಅಡಗಿಸಿ ಮೊಬೈಲ್ ತಂದುಕೊಟ್ಟಿದ್ದ ಟ್ರಾವೆಲ್ಸ್ ಏಜೆನ್ಸಿ ಮಾಲಿಕನೊಬ್ಬನಿಗೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರ ತನಿಖೆ ಬಿಸಿ ತಟ್ಟಿದೆ. ಬಾಣಸವಾಡಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಿಕ ಮಣಿವಣ್ಣನ್ ಮೇಲೆ ಆರೋಪ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಧರ್ಮನ ವಿಚಾರಣೆ ವೇಳೆ ಮಣಿ ಪಾತ್ರದ ಬಗ್ಗೆ ಸುಳಿವು ಸಿಕ್ಕಿತು. ಬಳಿಕ ಆತನ ಮೊಬೈಲ್ ಕರೆಗಳ ತಪಾಸಣೆ ನಡೆಸಿದಾಗ ಜೈಲಿಗೆ ಅಕ್ರಮವಾಗಿ ಮೊಬೈಲ್ ಪೂರೈಕೆ ಬಗ್ಗೆ ಮತ್ತಷ್ಟು ಸಂಗತಿ ತಿಳಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿ ಧರ್ಮನ ಮೊಬೈಲ್‌ನಲ್ಲಿ ವಾಟ್ಸ್ ಆಪ್ ವಿಡಿಯೋಕಾಲ್ ನಲ್ಲಿ ನಟ ದರ್ಶನ್ ಮಾತನಾಡಿದ್ದ ವಿಡಿಯೋ ತುಣುಕು ಬಹಿರಂಗವಾಗಿ ವಿವಾದವಾಗಿತ್ತು. 

ದಾಸನ​ ಬೆನ್ನುನೋವು ಜೈಲು ಅಧಿಕಾರಿಗಳಿಗೆ ತಲೆನೋವು; ದರ್ಶನ್ ಇನ್ ಡೇಂಜರ್!

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಮೊಬೈಲ್ ಮೂಲ ಕೆದಕಿದಾಗ ಮಣಿ ಜಾಲ ಪತ್ತೆಯಾಗಿದೆ. ಹಲವು ವರ್ಷಗಳಿಂದ ರೌಡಿ ಧರ್ಮನ ಜತೆ ಬಾಸಣವಾಡಿಯಲ್ಲಿ ಟ್ರಾವೆಲ್ಸ್ ಏಜೆನ್ಸಿ ಹೊಂದಿರುವ ಮಣಿಗೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲಿ ಆತನಿಗೆ ತಮ್ಮ ಏಜೆನ್ಸಿ ಕೆಲಸಗಾರ ಯಾದವ್ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಬಳಿಕ ಅದನ್ನು ಬಟ್ಟೆಯಲ್ಲಿ ಅಡಗಿಸಿ ಮಣಿ ಕೊಟ್ಟಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಮೊಬೈಲ್ ಅನ್ನು ಮೆಜೆಸ್ಟಿಕ್ ಸಮೀಪ ಆತ ಖರೀದಿಸಿದ್ದ. ಈ ಮೊಬೈಲ್ ಕೊಳ್ಳುವ ಮುನ್ನ ಅದರ ಫೋಟೋವನ್ನು ಧರ್ಮನಿಗೆ ವಾಟ್ಸ್ ಆಪ್ ಮಾಡಿದ್ದ. ಬಳಿಕ ಆತ ಇಷ್ಟಪಟ್ಟ ಸ್ಯಾಮ್ ಸಂಗ್ ಮೊಬೈಲ್ ಅನ್ನೇ ಖರೀದಿಸಿ ಮಣಿ ಜೈಲಿಗೆ ಸಾಗಿಸಿದ್ದ ಎಂದು ಮೂಲಗಳು ಹೇಳಿವೆ.

ದರ್ಶನ್ ಬೆನ್ನುನೋವು: ಕೋರ್ಟ್‌ಗೆ ವರದಿ ಸಲ್ಲಿಕೆ 

ಬಳ್ಳಾರಿ:  ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೀವ್ರ ಬೆನ್ನುನೋವಿನಿಂದ ಹಿನ್ನೆಲೆಯಲ್ಲಿ ಬಳಲುತ್ತಿರುವ ಮೆಡಿಕಲ್ ಕಾಲೇಜಿನಲ್ಲಿ (ಬಿಮ್ಸ್) ಶಸ್ತ್ರಚಿಕಿತ್ಸೆ ಮಾಡಲು ಅಗತ್ಯ ಸೌಲಭ್ಯವಿದೆಯೇ?, ಇಲ್ಲವೇ ಎಂಬ ಕುರಿತು ಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. 

ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

ನಟ ದರ್ಶನ್ ಗೆ ತೀವ್ರ ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅ. 22ರಂದು ಬಿಮ್ಸ್‌ ಆಸ್ಪತ್ರೆಯಲ್ಲಿ ಎಂಆರ್‌ಐಸ್ಕ್ಯಾನಿಂಗ್ ಮಾಡಲಾಗಿತ್ತು. ಬಳಿಕ ವೈದ್ಯರು ನೀಡಿದ ವರದಿಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ ಕುರಿತು ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಜೈಲು ನಿಮಯಗಳ ಬಳಿಕ ಕೋರ್ಟ್‌ಗೆ ವರದಿ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. 

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ರನ್ನು ಶುಕ್ರವಾರ ಅವರ ಕುಟುಂಬಸ್ಥರು, ಆಪ್ತರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕುಟುಂಬ ಸದಸ್ಯ ಸುಶಾಂತ್ ನಾಯ್ಡು, ಆಪ್ತ ಧನ್ವಿ‌ರ್ ಭೇಟಿ ನೀಡಿ ಕೆಲಕಾಲ ಮಾತನಾಡಿದರು. ಇದೇ ವೇಳೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ನಟ ದರ್ಶನ್ ಸ್ಕ್ಯಾನಿಂಗ್ ವರದಿಯ ಪ್ರತಿಯನ್ನು ಕುಟುಂಬಸ್ಥರು ಜೈಲಧಿಕಾರಿಗಳಿಂದ ಪಡೆದಿದ್ದಾರೆ.

Latest Videos
Follow Us:
Download App:
  • android
  • ios