ಅಣ್ಣನ ಕೊಲೆಗೆ ರಿವೇಂಜ್ ತೀರಿಸಿಕೊಂಡ ತಮ್ಮ: ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದಾಗ ಮರ್ಡರ್!
ಗದಗ ನಗರದ ಮುಳಗುಂದ ನಾಕಾ ಬಳಿಯ ಎಸ್ ಬಿ ಬೇಕರಿ ಎದುರು ಮಹಿಳೆಯ ಕೊಲೆ ನಡೆದಿದ್ದು ಗದಗ ಬೆಟಗೇರಿ ಜನರು ಬೆಚ್ಚಿಬೀಳುವಂತಾಗಿದೆ. ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ
ಗದಗ (ಅ.3): ಗದಗ ನಗರದ ಮುಳಗುಂದ ನಾಕಾ ಬಳಿಯ ಎಸ್ ಬಿ ಬೇಕರಿ ಎದುರು ಮಹಿಳೆಯ ಕೊಲೆ ನಡೆದಿದ್ದು ಗದಗ ಬೆಟಗೇರಿ ಜನರು ಬೆಚ್ಚಿಬೀಳುವಂತಾಗಿದೆ. ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ. ಹಳೆ ದ್ವೇಷದ ಹಿನ್ನೆಲೆ ಚೇತನ್ ಕುಮಾರ್ ಲೋಕಣ್ಣವರ್ ಹಾಗೂ ರೋಹನ್ ಕುಮಾರ್ ಲೋಕಣ್ಣವರ್ ಹತ್ಯೆ ಮಾಡಿದ್ದಾರೆ ಅಂತಾ ಎಸ್ ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ. ಕೊರ್ಟ್ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ 3:30 ರ ಸುಮಾರು ನಗರದ ಎಸ್ ಬಿ ಬೇಕರಿ ಬಳಿ ಬಂದಾಕೆಯ ಕತ್ತು ಸೀಳಿ ಕೊಲೆ ನಡೆದಿದೆ. ಶೋಭಾ ಮಗುವಿಗಾಗಿ ಬೇಕರಿ ತಿನಿಸು ಖರೀದಿಸಲು ಬೇಕರಿಗೆ ಬಂದಿದ್ದರು ಈ ವೇಳೆ ಅಲ್ಲೇ ಕಾದು ಕೂತಿದ್ದ ಇಬ್ವರು ಚಾಕುವಿನಿಂದ ಕತ್ತು ಸೀಳಿಸಿದ್ದಾರೆ. ಪ್ರತಿರೋಧ ಒಡ್ಡಿದಾಗ ಕೈಗೆ ಚೂರಿ ಏಟು ಬಿದ್ದ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಹಣ್ಣನ ಹತ್ಯೆಗೆ ಪ್ರತಿಕಾರವಾಗಿ ನಡೆದ ಹತ್ಯೆ..!
ಗದಗ ನಗರದ ಗಂಗಿಮಡಿಯಲ್ಲಿ 2020 ರಲ್ಲಿ ರಮೇಶ್ ಕುಮಾರ್ ಲೋಕಣ್ಣವರ್ ಎಂಬಾತನ ಕೊಲೆ ನಡೆದಿದ್ದು.. ಕೊಲೆ ಕೇಸ್ ವಿಚಾರವಾಗಿ ಶೋಭಾ ಅಲಿಯಾಸ್ ಮಿನಾಜ್ ಹಾಗೂ ಗಂಡ ವಾಸೀಂ ಬೇಪಾರಿ ಈ ಕೊಲೆಯಲ್ಲಿ ಭಾಗಿಯಾಗಿದ್ರು ಕಳೆದ ಕೆಲ ದಿನಗಳ ಹಿಂದೆ ಬೇಲ್ ಮೇಲೆ ಇಬ್ಬರು ಆಚೆ ಬಂದಿದ್ರು. ಬೇಲ್ ಆದನಂತ್ರ ಇಬ್ಬರು ಹುಬ್ಬಳ್ಳಿಯಲ್ಲಿ ವಾಸವಿದ್ರು.
ಕೋರ್ಟ್ ಕಲಾಪ ಇದ್ದಾಗ ಗದಗ ನಗರಕ್ಕೆ ಭೇಟಿ ಕೊಡ್ತಿದ್ರು. ಇಂದು ಕೇಸ್ ವಿಚಾರಕ್ಕೆ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಶೋಭಾ ಬಂದಿದ್ರು ಎನ್ನಲಾಗಿದೆ. ಇದೇ ವೇಳೆಗೆ ಕಾಯುತ್ತಿದ್ದ ಚೇತನ್ ಕುಮಾರ್, ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ. 2020 ರಮೇಶ್ ಕೊಲೆ ಹಿನ್ನೆಲೆ ಜೊತೆಗೆ ಕೇಸ್ ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.
ಹಳೆ ದ್ವೇಷ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ: ಹಳೆ ವೈಷ್ಯಮ್ಯದಿಂದಾಗಿ ಯುವಕರ ಗುಂಪು ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಚ್ ಸಮೀಪದ ಸರೋವರ ಡಾಬಾ ಬಳಿ ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ಲಕ್ಷ್ಮೇಸಾಗರದ ನಿವಾಸಿ ಎಲ್ಸಿ .ಸ್ವಾಮಿ ಪುತ್ರ ಧನಂಜಯ ಅಲಿಯಾಸ್ ಧನು(22) ಮೃತ ಯುವಕ. ಅದೇ ಗ್ರಾಮದ ರೋಹಿತ್, ದರ್ಶನ್, ಸುನೀಲ್, ರಾಘು, ರಮೇಶ್ ಹತ್ಯೆಗೈದಿರುವ ಆರೋಪಿಗಳು.
ಕಳೆದ ಒಂದು ವರ್ಷದ ಹಿಂದೆ ಕ್ಷುಲಕ್ಕೆ ವಿಚಾರಕ್ಕೆ ಧನಂಜಯ(ಧನು) ಹಾಗೂ ರೋಹಿತ್ ನಡುವೆ ಜಗಳ ಉಂಟಾಗಿತ್ತು. ಈ ವೇಳೆ ಧನಂಜಯ ಕೊಲೆ ಆರೋಪಿ ರೋಹಿತನ ಸೋದರ ಮಾವನ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಪ್ರಯತ್ನದ(307) ಪ್ರಕರಣದಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ. ಇದನ್ನೇ ಮನಸ್ಸಿನಲಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದ ರೋಹಿತ್ ಆಗಾಗ್ಗೆ ಧನಂಜಯ ಜತೆ ಜಗಳವಾಡಿ ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಸಮಯ ಸಾಧಿಸಿ ಸ್ನೇಹಿತರೊಂದಿಗೆ ಕೊಲೆ ಮಾಡಿರುವುದಾಗಿ ಮೃತನ ತಂದೆ ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕಿತಾ ಭಂಡಾರಿ ಹತ್ಯೆ ಮರಣೋತ್ತರ ವರದಿ ಲಭ್ಯ, ಬಿಜೆಪಿ ನಾಯಕನಿಗೆ ಮತ್ತಷ್ಟು ಸಂಕಷ್ಟ
ಮೃತ ಧನಂಜಯ ಗುರುವಾರ ರಾತ್ರಿ 10.15 ರ ಸಮಯದಲ್ಲಿ ನೀಲನಹಳ್ಳಿ ಗೇಟ್ ಸಮೀಪದ ಸರೋವರ ಹೊಟೇಲ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಊಟ ಮುಗಿಸಿಕೊಂಡು ಹೊರಬರುವುದನ್ನೇ ಕಾಯುತ್ತಿದ್ದ ಆರೋಪಿಗಳು ಹೊಟೇಲ್ ಹಿಂಬದಿಗೆ ಯುವಕನನ್ನು ಎಳೆದುಕೊಂಡು ಮಾರಾಕಾಸ್ತ್ರಗಳಿಂದ ಎದೆ, ಕಾಲು, ಭುಜದ ಭಾಗಗಳಿಗೆ ಹಲ್ಲೆ ನಡೆಸಿ ಬಳಿಕ ಕತ್ತು ಸೀಳಿದ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿದ್ಯಾರ್ಥಿ ಶುಲ್ಕ ಹೆಚ್ಚಳ ಬೇಡ ಎಂದಿದ್ದಕ್ಕೆ ಕಿವಿ ತಮಟೆ ಕಿತ್ತುಹೋಗುವಂತೆ ಹೊಡೆದ ಮುಖ್ಯ ಶಿಕ್ಷಕ!
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕನನ್ನು ತಕ್ಷಣ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸುವಾಗ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.