Asianet Suvarna News Asianet Suvarna News

ವಿದ್ಯಾರ್ಥಿ ಶುಲ್ಕ ಹೆಚ್ಚಳ ಬೇಡ ಎಂದಿದ್ದಕ್ಕೆ ಕಿವಿ ತಮಟೆ ಕಿತ್ತುಹೋಗುವಂತೆ ಹೊಡೆದ ಮುಖ್ಯ ಶಿಕ್ಷಕ!

ವಿದ್ಯಾರ್ಥಿ ಶುಲ್ಕ ದುರ್ಬಳಕೆ ವಿಚಾರಕ್ಕೆ ಜಗಳ; ಸಹ ಶಿಕ್ಷಕನ ಕಿವಿ ಪರದೆ ಕಿತ್ತು ಹೋಗುವಂತೆ ಥಳಿಸಿದ ಮುಖ್ಯ ಶಿಕ್ಷಕ! ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಿಟ್ಟದಾಳ್ ಗ್ರಾಮದ ಕಲ್ಪತರು ಸಂಯುಕ್ತ ಪದವಿಪೂರ್ವ ಕಾಲೇಜುನಲ್ಲಿ ನಡೆದಿರುವ ಘಟನೆ ಇದು.

Student fee  issue The head teacher was beaten on ear destroyed chitradurga
Author
First Published Oct 2, 2022, 1:03 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.2) : ಶಿಕ್ಷಕರೆಂದರೆ ಪ್ರಜ್ಞಾವಂತ ಸಮಾಜದ ನಿರ್ಮಾತೃಗಳು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿದೆ. ಆದ್ರೆ ಇಲ್ಲಿಬ್ಬರು ಶಿಕ್ಷಕರು ಮಕ್ಕಳೆದುರು ರೌಡಿಗಳಂತೆ ಪರಸ್ಪರ ಹೊಡೆದಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ. ವಿದ್ಯಾರ್ಥಿ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ನೋಡಿದರೆ ಇವರು ಯಾವ ರೌಡಿಗಳಿಗೂ ಕಡಿಮೆ ಇಲ್ಲ ಅನಿಸಿಬಿಡುತ್ತದೆ. ಅಷ್ಟೊಂದು ಭೀಕರ. 

ದಾವಣಗೆರೆ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಗೂಸಾ

 ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಸಹಶಿಕ್ಷಕನನ್ನ ನೋಡಿ. ಹೇಗೆ ಹೊಡೆದಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡು ಆತ ಚಿಕಿತ್ಸೆ ಪಡೆಯುತ್ತಿದ್ರೆ, ಇತ್ತ ನನ್ನ ತಪ್ಪಿಗೆ ಕ್ಷಮೆಯಾಚಿಸುತ್ತೇನೆಂದು ಹೇಳುತಿದ್ದಾನೆ ಥಳಿಸಿರುವ ಮುಖ್ಯ ಶಿಕ್ಷಕ. 

ಕೋಟೆನಾಡು(Kotenadu) ಚಿತ್ರದುರ್ಗ(Chitradurga) ಜಿಲ್ಲೆಯ ಹೊಸದುರ್ಗ(hosadurga) ತಾಲೂಕಿನ ಕಿಟ್ಟದಾಳ್(Kittadal Village) ಗ್ರಾಮದ ಕಲ್ಪತರು ಸಂಯುಕ್ತ ಪದವಿಪೂರ್ವ ಕಾಲೇಜು(Kalpataru samyukta Collage) ನಲ್ಲಿ ನಡೆದಿರುವ ಘಟನೆ ಇದು.

ಹೌದು, ಈ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಾನಂದ್ ವಿದ್ಯಾರ್ಥಿಗಳಿಂದ ಸರಕಾರಿ ನಿಯಮಕ್ಕಿಂತ ಹೆಚ್ಚಾಗಿ ಶುಲ್ಕ ಮಾಡುವಂತೆ ಸಹ ಶಿಕ್ಷಕ ಸುರೇಶ್ ಗೆ ಸೂಚಿಸಿದ್ರು. ಆಗ ಮುಖ್ಯಶಿಕ್ಷಕನ ಮಾತಿಗೆ ಪ್ರತಿರೋಧ ವ್ಯಕ್ತಪಡಿಸಿದ್ದ ಸಹಶಿಕ್ಷಕ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಸಿಟ್ಟಿಗೆದ್ದ ಮುಖ್ಯ ಶಿಕ್ಷಕ ಶಿವಾನಂದ್ ಸಹಶಿಕ್ಷಕ ಸುರೇಶ್ ಕಿವಿ ಪರದೆ ಹರಿಯುವಂತೆ ಹಲ್ಲೆ ನಡೆಸಿದ್ದಾರೆ.

ಇನ್ನು ಈ ವಿಚಾರ ತಿಳಿದ ಹೊಸದುರ್ಗ ಬಿಇಓ(BEO Hosadurga) ಜಯಪ್ಪ(Jayappa) ಶಾಲೆಗೆ ದೌಡಾಯಿಸಿದ್ದು ರಾಜೀ ಪಂಚಾಯತಿಗೆ ಮುಂದಾಗಿದ್ದಾರೆ. ಈ ವೇಳೆ ಮುಖ್ಯ ಶಿಕ್ಷಕ ಶಿವಾನಂದ್ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದರಿಂದ ಹೀಗಾಗಿದೆ. ಈ ವಿಚಾರವಾಗಿ ಎಲ್ಲರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆಂದು ಎಂದು ಹೇಳಿರುವ ಮುಖ್ಯ ಶಿಕ್ಷಕ. ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಒಟ್ಟಾರೆ  ವಿದ್ಯಾರ್ಥಿಗಳ ಎದುರೇ ಶಿಕ್ಷಕರಿಬ್ಬರು ಬಡಿದಾಡಿಕೊಂಡಿದ್ದಾರೆ‌. ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ರೂಪಿಸಬೇಕಾದ ಶಿಕ್ಷಕರೇ ರೌಡಿಗಳಂತೆ ಪರಸ್ಪರ ಹೊಡೆದಾಡಿಕೊಂಡಿರುವುದು ನಾಚಿಕೆಗೇಡು ಎಂದು ಸಾರ್ವಜನಿಕರು ಉಗಿದಿದ್ದಾರೆ.

ಹೋಮ್‌ವರ್ಕ್‌ ಮಾಡದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಬಡಿದು ಸಾಯಿಸಿದ ಶಿಕ್ಷಕ!

 ಹೌದು ಅವರಿಬ್ಬರೂ ಶಿಕ್ಷಕರಾಗಿ ವಿದ್ಯಾರ್ಥಿಗಳೆದುರೇ ಬಡಿದಾಡಿಕೊಂಡಿರುವುದು ದುರಂತ. ಆದರೆ ಇಲ್ಲಿವರೆಗೆ ಗಾಯಾಳು ಶಿಕ್ಷಕ ದೂರು ನೀಡಿ ಎರಡು ದಿನ ಕಳೆದರೂ ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದು ವಿಪರ್ಯಾಸವೇ ಸರಿ

Follow Us:
Download App:
  • android
  • ios