ಪಂದ್ಯದ ನಡುವೆ ಪತ್ನಿಯ ಮೇಕಪ್‌ಗೆ ಸಹಾಯ ಮಾಡಿದ ಪತಿ, ನೆಟ್ಟಿಗರಿಂದ ವರ್ಷದ ಗಂಡ ಪ್ರಶಸ್ತಿ!
ಪಂದ್ಯ ನಡೆಯುತ್ತಿರುವ ವೇಳೆ ಮೈದಾನದಲ್ಲಿನ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಹಲವು ಅಭಿಮಾನಿಗಳು ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ವೈರಲ್ ಆಗಿ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದ ಹಲವು ಊದಾಹರಣೆಗಳಿವೆ. ಇದೀಗ ಪಂದ್ಯ ನಡೆಯುತ್ತಿದ್ದ ವೇಳೆ ಪತ್ನಿಯ ಮೇಕಪ್‌ಗೆ ಪತಿ ಸಹಾಯ ಮಾಡುತ್ತಿರುವ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಖತಾರ್(ಡಿ.17): ಫಿಫಾ ವಿಶ್ವಕಪ್ ಟೂರ್ನಿ ಅಭಿಮಾನಿಗಳು ಇದೀಗ ಫೈನಲ್ ಪಂದ್ಯಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಫ್ರಾನ್ಸ್ ಹಾಗೂ ಅರ್ಜೆಂಟೀನಾ ನಡುವಿನ ಹೋರಾಟಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಫಿಫಾ ಪಂದ್ಯಗಳ ವೀಕ್ಷಣೆ ವೇಳೆ ಹಲವು ಅಭಿಮಾನಿಗಳು ಸ್ಟಾರ್ ಆಗಿದ್ದಾರೆ. ಹಲವರ ವಿಡಿಯೋ ವೈರಲ್ ಆಗಿದೆ. ಈ ಪೈಕಿ ಒಂದು ವಿಡಿಯೋ ಇಲ್ಲಿದೆ. ಪಂದ್ಯ ನಡೆಯುತ್ತಿದ್ದ ವೇಳೆ ಪತ್ನಿಯ ಮೇಕಪ್‌ಗೆ ಸಹಾಯ ಮಾಡುತ್ತಿರುವ ಪತಿಯ ವಿಡಿಯೋ ವೈರಲ್ ಆಗಿದೆ. ಇಂತಹ ಪತಿ ಬೇಕು. ಈತ ವರ್ಷದ ಪತಿ ಪ್ರಶಸ್ತಿಗೆ ಅರ್ಹ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಫಿಫಾ ವಿಶ್ವಕಪ್ ಪಂದ್ಯವೊಂದರಲ್ಲಿನ ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ಕ್ರೀಡಾಂಗಣದಲ್ಲಿ ಕುಳಿತಿದ್ದ ಪತಿ ಹಾಗೂ ಪತ್ನಿ ಇದೀಗ ವೈರಲ್ ಆಗಿದ್ದಾರೆ. ಪತ್ನಿ ಮೇಕಪ್ ಮಾಡಿಕೊಳ್ಳುತ್ತಿದ್ದರೆ, ಪತ್ನಿಗೆ ಮೊಬೈಲ್ ಕ್ಯಾಮರಾವನ್ನು ಕನ್ನಡಿಯಾಗಿ ಹಿಡಿದು ನೆರವು ನೀಡಿದ್ದಾರೆ. ಇತ್ತ ಪತ್ನಿ ತಲ್ಲೀನಳಾಗಿ ಮೇಕಪ್ ಮಾಡಿದ್ದಾರೆ. ಇವರಿಬ್ಬರ ವಿಡಿಯೋ ಮೈದಾನದಲ್ಲಿನ ದೊಡ್ಡ ಸ್ಕ್ರೀನ್ ಮೇಲೆ ಮೂಡಿದರೂ ಇವರಿಬ್ಬರಿಗೂ ಅದರ ಅರಿವೇ ಇರಲಿಲ್ಲ.
ಇವರ ಮೇಕಪ್ ವಿಡಿಯೋ ನೇರ ಪ್ರಸಾರದಲ್ಲೂ ಪ್ರಸಾರವಾಗಿದೆ. ನೇರ ಪ್ರಸಾರವಾದ ಬೆನ್ನಲ್ಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗೂ ಇಂತ ಪತ್ನಿ ಬೇಕು ಎಂದು ಹಲವು ಯುವತಿಯರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪತ್ನಿಯ ನಕ್ರಾಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಫೈನಲ್ ಹೋರಾಟದಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್
ಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯ ಫಿಫಾ ವಿಶ್ವಕಪ್ ಗೆಲ್ಲುವ ದಶಕಗಳ ಕನಸು ನನಸಾಗಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಮಂಗಳವಾರ ಮಧ್ಯರಾತ್ರಿ ನಡೆದ ಕ್ರೊವೇಷಿಯಾ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ್ದು, 6ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
FIFA World Cup 2022: 'ಜಾಸ್ತಿ ಕಿರುಚಾಡ್ಬೇಡಿ..!' ಇಂಗ್ಲೆಂಡ್ ಫ್ಯಾನ್ಸ್‌ಗಳಿಗೆ ಕತಾರ್ ಪೊಲೀಸರ ವಾರ್ನಿಂಗ್!
ಅಲ್-ಖೋರ್: ಕಿಲಿಯಾನ್ ಎಂಬಾಪೆ ವರ್ಸಸ್ ಲಿಯೋನೆಲ್ ಮೆಸ್ಸಿ ಫೈನಲ್ ಸೆಣಸಾಟ. ಫುಟ್ಬಾಲ್ ಅಭಿಮಾನಿಗಳು ಇದಕ್ಕಿಂತ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಿದರೆ ಅತಿಯಾಗಬಹುದು. ಇದು ಸಾಧ್ಯವಾಗಿದ್ದು ಹಾಲಿ ಚಾಂಪಿಯನ್ ಫ್ರಾನ್ಸ್ ಸೆಮಿಫೈನಲ್‌ನಲ್ಲಿ ಮೊರಾಕ್ಕೊ ವಿರುದ್ಧ 2-0 ಗೋಲುಗಳಲ್ಲಿ ಗೆಲುವು ಸಾಧಿಸಿದ್ದರಿಂದ. ದೈತ್ಯ ತಂಡಗಳಿಗೆ ಸೋಲುಣಿಸಿ ಅಜೇಯವಾಗಿ ಸೆಮೀಸ್‌ಗೆ ಕಾಲಿಟ್ಟಿದ್ದ ಮೊರಾಕ್ಕೊ ಕನಸಿನ ಓಟಕ್ಕೆ ತೆರೆ ಬಿದ್ದಿದೆ.
10 ಬಾರಿ ಪಂದ್ಯಶ್ರೇಷ್ಠ: ಮೆಸ್ಸಿ ಹೊಸ ದಾಖಲೆ
ಫಿಫಾ ವಿಶ್ವಕಪ್‌ನಲ್ಲಿ 10ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೆಸ್ಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಇದರಲ್ಲಿ 4 ಪಂದ್ಯಶ್ರೇಷ್ಠ ಪ್ರಶಸ್ತಿಗಳು ಇದೇ ಆವತ್ತಿಯಲ್ಲಿ ಗೆದ್ದಿದ್ದು ವಿಶೇಷ. 2014ರಲ್ಲೂ ಅವರು 4 ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು, ಪೋರ್ಚುಗಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಒಟ್ಟಾರೆ 7 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರೆ, ನೆದರ್‌ಲೆಂಡ್‌್ಸನ ಅರ್ಜೆನ್ ರಾಬೆನ್ 6 ಬಾರಿ ಈ ಸಾಧನೆ ಮಾಡಿದ್ದರು.