Asianet Suvarna News Asianet Suvarna News

ರಸ್ತೆ ಗುಂಡಿಗೆ ಬಾಲಕ ಬಲಿ: ಹಿಂಬದಿಯಿಂದ ಬಂದ ಸೇನಾ ವಾಹನ ಹರಿದು ಸಾವು

ಹದಗೆಟ್ಟ ರಸ್ತೆಯಿಂದಾಗಿ ನಡೆದ ಅವಘಾತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಪುತ್ರನೋರ್ವ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕೆ.ಆರ್‌.ಪುರದಲ್ಲಿ ನಡೆದಿದೆ. ತಂದೆ ಸಂತೋಷ್‌ ಅವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್‌ (10) ಮೃತ ದುರ್ದೈವಿ. 

boy dies after falling into a pothole in bengaluru gvd
Author
Bangalore, First Published Aug 12, 2022, 4:45 AM IST

ಕೆ.ಆರ್‌.ಪುರ (ಆ.12): ಹದಗೆಟ್ಟ ರಸ್ತೆಯಿಂದಾಗಿ ನಡೆದ ಅವಘಾತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಪುತ್ರನೋರ್ವ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕೆ.ಆರ್‌.ಪುರದಲ್ಲಿ ನಡೆದಿದೆ. ತಂದೆ ಸಂತೋಷ್‌ ಅವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್‌ (10) ಮೃತ ದುರ್ದೈವಿ. ಮೃತ ಬಾಲಕನ ತಂದೆ ಸಂತೋಷ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿದ್ದು, ಈ ಹಿಂದೆ ಕೆ.ಆರ್‌.ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದಷ್ಟೇ ಅವರಿಗೆ ಬೇರೆ ಠಾಣೆಗೆ ವರ್ಗ ಆಗಿತ್ತು. ಸಂತೋಷ್‌ ಅವರು ಗುರುವಾರ ಸಂಜೆ ಮಗನ ಜೊತೆ ಬೈಕ್‌ನಲ್ಲಿ ಕೆ.ಆರ್‌.ಪುರದ ಮಾರ್ಕೆಟ್‌ಗೆ ಹೋಗುತ್ತಿದ್ದರು. 

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-44 ಹದಗೆಟ್ಟಿದ್ದು, ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿತ್ತು. ಆದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಇನ್ನು ರಸ್ತೆಯಲ್ಲಿ ಪುಡಿ ಜಲ್ಲಿ ನಿಂತಿತ್ತು. ಸಂತೋಷ್‌ ಅವರಿಗೆ ಕೆ.ಆರ್‌.ಪುರದ ತೂಗು ಸೇತುವೆಯನ್ನು ಇಳಿದ ತಕ್ಷಣ ರಸ್ತೆ ಗುಂಡಿ ಎದುರಾಗಿದೆ. ಈ ವೇಳೆ ಅವರು ಬೈಕನ್ನು ಬದಿಗೆ ಸರಿಸಿದ್ದಾರೆ. ಈ ವೇಳೆ ಪುಡಿ ಜಲ್ಲಿಯಿಂದಾಗಿ ಬೈಕ್‌ ಜಾರಿದೆ. ಆಗ ಹಿಂಬದಿ ಕುಳಿತ್ತಿದ್ದ ಬಾಲಕ ಜೀವನ್‌ ಆಯಾ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.

Bengaluru: ದಾಸರಹಳ್ಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆತ್ಮಹತ್ಯೆ

ಬಾಲಕನ ರಸ್ತೆಗೆ ಬೀಳುತ್ತಿದ್ದಂತೆ ಹಿಂದೆಯಿಂದ ಬಂದ ಭಾರತೀಯ ಸೇನೆಗೆ ಸೇರಿದ ವಾಹನದ ಹಿಂಬದಿ ಚಕ್ರವು ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದೇಹವನ್ನು ಕೆ.ಆರ್‌.ಪುರ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಕೆ.ಆರ್‌.ಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೇನೆಯ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಹದಗೆಟ್ಟರಸ್ತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮತ್ತೆ ರಸ್ತೆ ಗುಂಡಿ ಹೆಚ್ಚಳ: ನಗರದಲ್ಲಿ ಕಳೆದ ಹಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮತ್ತೆ ಸರ್ವೇ ಕಾರ್ಯ ಆರಂಭಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ 17,595 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿ 16,739 ಗುಂಡಿಗಳನ್ನು ಮುಚ್ಚಿದೆ. ಇನ್ನೂ 856 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಈ ನಡುವೆ ಭಾರಿ ಮಳೆ ಸುರಿದಿದೆ. ಇದರಿಂದ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಜತೆಗೆ ರಸ್ತೆ ಗುಂಡಿ ಸಮಸ್ಯೆ ಮತ್ತೆ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಆ.5ರಿಂದ ರಸ್ತೆ ಗುಂಡಿಗಳ ಸರ್ವೇ ಕಾರ್ಯ ಆರಂಭಿಸಿದ್ದು, ಸರ್ವೇ ಪೂರ್ಣಗೊಂಡ ನಂತರ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅರುಂಧತಿ ಸಿನಿಮಾದಿಂದ ಪ್ರಭಾವಿತನಾಗಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಕಾರಿಯಾಗದೆ ಸಾವು!

ಮಳೆಯ ಪ್ರಮಾಣ ಹೆಚ್ಚಳದಿಂದಾಗಿ ಹಾಟ್‌ ಬಿಟುಮಿನ್‌ ಮಿಕ್ಸ್‌ ಹಾಕಿ ರಸ್ತೆ ಮುಚ್ಚುವುದು ಅಸಾಧ್ಯ. ಹೀಗಾಗಿ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ಮೂಲಕ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ನಿರ್ಧರಿಸಿದೆ. ಅದಕ್ಕಾಗಿ ಕಣ್ಣೂರಿನಲ್ಲಿನ ಹಾಟ್‌ ಬಿಟುಮಿನ್‌ ಮಿಕ್ಸ್‌ ಘಟಕದಲ್ಲಿಯೇ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಹಾಟ್‌ ಬಿಟುಮಿನ್‌ ಮಿಕ್ಸ್‌ ಯಂತ್ರಕ್ಕೆ ಪ್ರತ್ಯೇಕ ಯಂತ್ರವನ್ನು ಅಳವಡಿಸಿ ಕೋಲ್ಡ್‌ ಬಿಟುಮಿನ್‌ ಮಿಕ್ಸ್‌ ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

Follow Us:
Download App:
  • android
  • ios