ಅರುಂಧತಿ ಸಿನಿಮಾ ನೋಡಿ ಮುಕ್ತಿ ಬೇಕೆಂದು ಯುವಕನೋರ್ವ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕಿನ ಗಿಡ್ಡಯ್ಯನಪಾಳ್ಯದಲ್ಲಿ ನಡೆದಿದೆ.

ವರದಿ : ಮಹಂತೇಶ್ ಕುಮಾರ್ , ಏಷ್ಯನೆಟ್ ಸುವರ್ಣ ನ್ಯೂಸ್

ತುಮಕೂರು (ಆ.11) : ಅರುಂಧತಿ ಸಿನಿಮಾ ನೋಡಿ ಮುಕ್ತಿ ಬೇಕೆಂದು ಯುವಕನೋರ್ವ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗಿಡ್ಡಯ್ಯನಪಾಳ್ಯದಲ್ಲಿ ನಡೆದಿದೆ. 22 ವರ್ಷದ ರೇಣುಕ ಎಂಬಾತ ಇಂಥದ್ದೊಂದು ಕೃತ್ಯಕ್ಕೆ ಇಳಿದು ಸಾವನಪ್ಪಿದ ಯುವಕ. ತೆಲುಗು ಭಾಷೆಯ ಅರುಂಧತಿ ಸಿನಿಮಾ ನೋಡಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಅರುಂಧತಿ ಚಿತ್ರದಲ್ಲಿ ಖಳನಾಯಕನನ್ನು ನಾಯಕಿ ಸಾಯಿಸುತ್ತಾಳೆ. ನಂತರ ಆತ ಪಿಶಾಚಿಯಾಗಿ ಬರುತ್ತಾನೆ. ಆತನನ್ನು ಸಾಯಿಸಬೇಕು ಎಂದರೆ ನಾಯಕಿ ಸತ್ತು ಪುನರ್ಜನ್ಮ ಎತ್ತಬೇಕಾಗಿರುತ್ತದೆ. ಆಕೆ ಮೃತಪಟ್ಟ ಬಳಿಕ ಆಕೆಯ ಮೂಳೆಯಿಂದ ಆಯುಧ ಮಾಡಿ ಅದರಿಂದ ಪಿಶಾಚಿಯಾಗಿರುವ ಖಳನಾಯಕನನ್ನು ಕೊಲ್ಲಲು ಸಾಧ್ಯವಾಗಿರುತ್ತದೆ. ಆದ್ದರಿಂದ ನಾಯಕಿಯು ಮುಕ್ತಿ ಪಡೆಯಲು ತನ್ನನ್ನು ತಾನು ಸಾಯಿಸಿಕೊಂಡು, ನಂತರ ಖಳನಾಯಕನನ್ನು ಕೊಲ್ಲುವುದು ಈ ಚಿತ್ರದ ಕಥೆ. ಈ ಕಥೆಯಿಂದ ಪ್ರೇರಣೆಗೊಂಡ ಯುವಕ, ಚಿತ್ರದ ನಾಯಕಿಯಂತೆ ನನಗೂ ಸೂಪರ್‌ ನ್ಯಾಚುರಲ್‌ ಪವರ್‌ ಬರುತ್ತದೆ ಎಂದು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ತುಮಕೂರು ನಗರದಲ್ಲಿ ಪಿಯುಸಿ ಓದುತ್ತಿರುವ ಯುವಕ, ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ಆಗಿದ್ದ. 2009ರಲ್ಲಿ ರಿಲೀಸ್​ ಆಗಿರುವ ಅರುಂಧತಿ ಸಿನಿಮಾವನ್ನು ಈತ ನೋಡಿದ್ದ. ಬಳಿಕ ಪೆಟ್ರೋಲ್​ ಬಂಕ್​ನಿಂದ 20 ಲೀಟರ್ ಪೆಟ್ರೋಲ್ ತಂದಿದ್ದ. ಅದರಲ್ಲಿ 1 ಲೀಟರ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪಾಲಕರು ನೋಡಿ, ಬೆಂಕಿ ನಂದಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಬೆಂಕಿ ಹಚ್ಚಿಕೊಂಡಾಗ ನನಗೆ ಮುಕ್ತಿ ಬೇಕು ಮುಕ್ತಿ ಬೇಕು ಎಂದು ಈತ ನರಳಾಡಿದ್ದಾನೆ.

DAVANAGERE ದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸಿದ ಪೊಲೀಸ್ರು

ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ ನಲ್ಲಿ ಚಿತ್ರಿಕರಿಸಿದ್ದಾರೆ. ಬಳಿಕ ಆಂಬ್ಯುಲೆನ್ಸ್‌ ನಲ್ಲಿ ಯುವಕನನ್ನು ಮಧುಗಿರಿ ಹಾಗೂ ತುಮಕೂರಿನಲ್ಲಿ ಆಸ್ಪತ್ರೆಗಳಿಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಸಹೋದರರ ಮಧ್ಯೆ ಜಗಳ: ಕುಟುಂಬದ ನಾಲ್ವರನ್ನು ಕೊಂದ ಪತಿ-ಪತ್ನಿ

ಮದುವೆಯಾಗಲು ಹೆಣ್ಣು ಸಿಗದೇ ಆತ್ಮಹತ್ಯೆಗೆ ಶರಣಾದ ಯುವಕ:
ಹೊಳವನಹಳ್ಳಿ: ಮದುವೆಯಾಗಲು ಕಳೆದ ನಾಲ್ಕೈದು ವರ್ಷಗಳಿಂದ ಹೆಣ್ಣು ಸಿಗದಿರುವ ಪರಿಣಾಮ ಮೊಬೈಲ್‌ ಅಂಗಡಿಯ ಮಾಲೀಕನೊರ್ವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ.

ಪತ್ನಿಯೊಂದಿಗೆ ಜಗಳ: 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಜೋನಿಗರಹಳ್ಳಿ ಗ್ರಾಮದ ಲೇ.ರಮೇಶ್‌ ಆಚಾರ್ಯ ಎಂಬಾತನ ಮಗನಾದ ಹೇಮಂತ್‌ ಕುಮಾರ್‌(28) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿ ಆಗಿದ್ದಾನೆ. ತೋವಿನಕೆರೆ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಮೊಬೈಲ್‌ ಅಂಗಡಿಯ ಮಾಲೀಕನಾಗಿದ್ದ ಹೇಮಂತ್‌ ಮದುವೆಯಾಗಲು ಹೆಣ್ಣಿಗಾಗಿ ಸಾಕಷ್ಟುತಿರುಗಾಡಿದರೂ ಸಹ ಕಂಕಣಭಾಗ್ಯ ಕೂಡಿಬಾರದ ಪರಿಣಾಮ ಮನನೊಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಕೆ.ಸುರೇಶ್‌, ಪಿಎಸ್‌ಐ ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.