ಐಪಿಎಲ್ ಪಂದ್ಯಗಳ ವೇಳೆ ಸಾಲು ಸಾಲು ಕಳ್ಳತನ ನಡೆಯುತ್ತಿದೆ. ಮ್ಯಾಚ್ ನೋಡಲು ಬರುವ ಪ್ರೇಕ್ಷಕರ ಮೊಬೈಲ್, ಬೈಕ್ ಗಳ ಕಳ್ಳತನವಾಗುತ್ತಿದೆ.

ಬೆಂಗಳೂರು (ಏ.25): ಐಪಿಎಲ್ ಪಂದ್ಯಗಳ ವೇಳೆ ಸಾಲು ಸಾಲು ಕಳ್ಳತನ ನಡೆಯುತ್ತಿದೆ. ಮ್ಯಾಚ್ ನೋಡಲು ಬರುವ ಪ್ರೇಕ್ಷಕರ ಮೊಬೈಲ್, ಬೈಕ್ ಗಳ ಕಳ್ಳತನವಾಗುತ್ತಿದೆ. ಮ್ಯಾಚ್ ನೋಡೊ ಜೋಶ್ ನಲ್ಲಿ ಬೈಕ್ ನಿಲ್ಲಿಸಿ ಸವಾರರು ಹೋಗಿದ್ರೆ ಪಂದ್ಯ ಮುಗಿಸಿ ಹಿಂತಿರುಗಿ ಬರುವಾಗ ಬೈಕ್ ಕಳ್ಳತನವಾಗುತ್ತಿದೆ. ಕಳ್ಳರು ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳತನಕ್ಕಿಳಿದಿದ್ದಾರೆ. ಮೊಬೈಲ್ ಹಾಗೂ ಬೈಕ್ ಕಳ್ಳತನ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಿರಂತವಾಗಿ ದೂರು ದಾಖಲಾಗುತ್ತಿದೆ.

ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ವ್ಯಕ್ತಿಯೊಬ್ಬರ ಬೈಕ್ ಕಳ್ಳತನವಾಗಿದೆ. ಸರ್ಕಾರಿ ಅಧಿಕಾರಿಯೊಬ್ಬರ ಮೊಬೈಲ್ ಕೂಡ ಖದೀಮರು ಎಗರಿಸಿದ್ದಾರೆ. 80 ಸಾವಿರ ಮೌಲ್ಯದ ಮೊಬೈಲ್ ಅನ್ನು ಅಧಿಕಾರಿ ಕಳೆದುಕೊಂಡಿದ್ದಾರೆ. ಸದ್ಯ ಕಳ್ಳತನಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಮಫ್ತಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ ಗೇಟ್‌ಗೆ ಸಚಿನ್‌ ತೆಂಡುಲ್ಕರ್ ಹೆಸರು..!

ಕೆಲ ದಿನಗಳ ಹಿಂದಷ್ಟೇ ಆರ್‌​ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರ ಕಿಟ್‌ಗಳು ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಡೆಲ್ಲಿ ಕ್ಯಾಪಿ​ಟಲ್ಸ್‌ ಆಟ​ಗಾ​ರರ ಬ್ಯಾಟ್‌ ಸೇರಿ ಇತರ ಪರಿ​ಕ​ರ​ಗಳು ಪತ್ತೆ​ ಹಚ್ಚಿದ್ದರು. ಈ ಬಗ್ಗೆ ತಂಡದ ನಾಯಕ ದೇವಿಡ್‌ ವಾರ್ನರ್‌ ಇನ್‌​ಸ್ಟಾಗ್ರಾಂ ಸ್ಟೋರಿ ಮೂಲಕ ಮಾಹಿತಿ ನೀಡಿದ್ದು, ಕೆಲ​ವೊಂದನ್ನು ಹೊರ​ತು​ಪ​ಡಿಸಿ ಕ​ಳ​ವಾ​ಗಿದ್ದ ಬಹು​ತೇ​ಕ ವಸ್ತು​ಗಳು ಕೈ ಸೇರಿವೆ. ಆರೋ​ಪಿ​ಯನ್ನು ಪತ್ತೆ ಹಚ್ಚಿದ್ದಕ್ಕೆ ಪೊಲೀಸರು, ಅಧಿಕಾರಿಗಳಿಗೆ ಧನ್ಯವಾದ ಎಂದು ಬರೆ​ದುಕೊಂಡಿದ್ದರು. ವಾರ್ನರ್‌ ಹಾಗೂ ಇತ​​ರಿಗೆ ಸೇರಿದ ಒಟ್ಟು 16 ಬ್ಯಾಟ್‌ಗಳು, ಹಲವು ಆಟಗಾರರ ಶೂ, ಪ್ಯಾಡ್‌, ಥೈ ಪ್ಯಾಡ್ಸ್‌, ಗ್ಲೌಸ್‌ಗಳು ಕಳವಾಗಿದ್ದವು. ಈ ಬಗ್ಗೆ ಡೆಲ್ಲಿ ಫ್ರಾಂಚೈಸಿಯು ಪೊಲೀ​ಸ​ರಿಗೆ ದೂರು ನೀಡಿ​ತ್ತು.

ವಿರಾಟ್ ಕೊಹ್ಲಿ ಜತೆ ಬ್ಯಾಡ್ಮಿಂಟನ್ ಆಡಿದ ಅನುಷ್ಕಾ ಶರ್ಮಾ; 

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರ ಕಿಟ್‌ಗಳನ್ನು ಸಾಗಿಸುವ ಹೊಣೆಯನ್ನು ಖಾಸಗಿ ಲಾಜಿಸ್ಟಿಕ್ ಕಂಪನಿಗೆ ನೀಡಲಾಗಿತ್ತು. ಐಟಿಸಿ ಹೋಟೆಲ್‌ನಿಂದ ಕಾರ್ಗೋಗೆ ಸಾಗಾಟ ಮಾಡುವಾಗ ಟೀಂ ಕಿಟ್‌ಗಳ ಕಳ್ಳತನ ನಡೆದಿತ್ತು. ಈ ಸಂಬಂಧ ನಗರದ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತಂತೆ ತನಿಖೆ ಕೈಗೆತ್ತಿಕೊಂಡ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಸೇನ ಘಾಟ್ಗೆ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.