ಏಪ್ರಿಲ್ 24ರಂದು 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡುಲ್ಕರ್ಕ್ರಿಕೆಟ್‌ ದಿಗ್ಗಜ ತೆಂಡುಲ್ಕರ್ ದಾಖಲೆಗೆ ಇನ್ನೊಂದು ಗರಿ ಸೇರ್ಪಡೆದಿಗ್ಗಜ ಕ್ರಿಕೆಟಿಗನಿಗೆ ಸಿಡ್ನಿ ಮೈದಾನದಲ್ಲಿ ವಿಶೇಷ ಗೌರವ

ಸಿಡ್ನಿ(ಏ.25): 50ನೇ ಹುಟ್ಟು​ಹ​ಬ್ಬದ ಸಂಭ್ರ​ಮ​ದ​ಲ್ಲಿ​ರುವ ಭಾರ​ತದ ದಿಗ್ಗಜ ಕ್ರಿಕೆ​ಟಿಗ ಸಚಿನ್‌ ತೆಂಡುಲ್ಕರ್‌ ಅವರಿಗೆ ಗೌರವ ಸೂಚ​ಕ​ವಾಗಿ ಸೋಮ​ವಾರ ಸಿಡ್ನಿ ಕ್ರೀಡಾಂಗ​ಣದ ಪ್ರವೇಶದ್ವಾರಕ್ಕೆ ಸಚಿನ್‌ ಅವರ ಹೆಸ​ರನ್ನು ಇಡ​ಲಾ​ಗಿದೆ.

ಸಚಿನ್‌ ಈ ಕ್ರೀಡಾಂಗ​ಣ​ದಲ್ಲಿ ಟೆಸ್ಟ್‌ ಇನ್ನಿಂಗ್‌್ಸನ ತಮ್ಮ ಗರಿಷ್ಠ ಮೊತ್ತ 241 ಹಾಗೂ ಒಟ್ಟಾರೆ 3 ಶತ​ಕ​ಗ​ಳೊಂದಿಗೆ 785 ರನ್‌ ಕಲೆ​ಹಾ​ಕಿ​ದ್ದಾರೆ. ಇನ್ನು ಸಚಿನ್‌ ಜೊತೆಗೆ ವೆಸ್ಟ್‌​ಇಂಡೀ​ಸ್‌ನ ದಿಗ್ಗಜ ಬ್ರಿಯಾನ್‌ ಲಾರಾ ಅವರ ಹೆಸ​ರನ್ನೂ ಗೇಟ್‌ಗೆ ಇಡ​ಲಾ​ಗಿದೆ. ಲಾರಾ ಅವರು ಇದೇ ಕ್ರೀಡಾಂಗ​ಣ​ದಲ್ಲಿ ಗಳಿ​ಸಿದ್ದ ಮೊದಲ ಟೆಸ್ಟ್‌ ಶತ​ಕ​(277 ರನ್‌)ಕ್ಕೆ 30 ವರ್ಷ ತುಂಬಿದ ಹಿನ್ನೆ​ಲೆ​ಯಲ್ಲಿ ಅವ​ರಿಗೆ ವಿಶೇಷ ಗೌರವ ಸಲ್ಲಿ​ಸ​ಲಾ​ಗಿದೆ. ಇಬ್ಬರು ದಿಗ್ಗ​ಜರ ಸಾಧ​ನೆ​ಗಳನ್ನು ವಿವ​ರಿ​ಸುವ ಫಲ​ಕ​ಗ​ಳನ್ನು ಸಹ ಸ್ಥಾಪಿ​ಸ​ಲಾ​ಗಿ​ದೆ.

ಈಗಾ​ಗಲೇ ಕ್ರೀಡಾಂಗ​ಣ​ದಲ್ಲಿ ಡಾನ್‌ ಬ್ರಾಡ್ಮನ್‌, ಅಲಾನ್‌ ಡೇವಿ​ಡ್ಸನ್‌, ಆರ್ಥರ್‌ ಮೊರಿಸ್‌ ಹೆಸ​ರಿ​ನಲ್ಲಿ ಪ್ರವೇ​ಶ​ದ್ವಾ​ರ​ಗಳಿವೆ. ಸಚಿನ್‌ ಹೆಸ​ರಿನ ಪ್ರವೇಶ ದ್ವಾರದ ಮೂಲಕ ಆಟ​ಗಾ​ರರು ಹಾಗೂ ಪ್ರವಾ​ಸಿ​ಗರು ಕ್ರೀಡಾಂಗ​ಣಕ್ಕೆ ಪ್ರವೇ​ಶಿ​ಸ​ಲಿ​ದ್ದಾರೆ. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಸಚಿನ್‌, ಸಿಡ್ನಿ ಭಾರ​ತದ ಹೊರಗೆ ನನ್ನ ನೆಚ್ಚಿನ ಕ್ರೀಡಾಂಗಣ. ಅಲ್ಲಿ ಶ್ರೇಷ್ಠ ನೆನ​ಪು​ಗ​ಳಿ​ವೆ’ ಎಂದಿ​ದ್ದಾ​ರೆ.

Scroll to load tweet…

ಮಹಾರಾಷ್ಟ್ರ ಮೂಲದ ಸಚಿನ್ ತೆಂಡುಲ್ಕರ್ ಏಪ್ರಿಲ್ 24, 1973ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಇನ್ನು ತಮ್ಮ 16ನೇ ವಯಸ್ಸಿನಲ್ಲಿ ಅಂದರೆ ನವೆಂಬರ್ 15, 1989ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅದೇ ವರ್ಷ ಡಿಸೆಂಬರ್ 18ರಂದು ಭಾರತ ಏಕದಿನ ಕ್ರಿಕೆಟ್ ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್‌ ಬ್ಲಾಸ್ಟರ್ ತೆಂಡುಲ್ಕರ್ ಕ್ರಿಕೆಟ್ ಜಗತ್ತನ್ನು ಆಳಿದರು. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ಕೂಡಾ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. 

ಬಾಲ್ಕನಿಯಿಂದ ಜಿಗಿಯಲು ರೆಡಿಯಾಗಿದ್ದ ಸಚಿನ್ ತೆಂಡುಲ್ಕರ್..! ನೀವೆಂದೂ ಕೇಳಿರದ ಇಂಟ್ರೆಸ್ಟಿಂಗ್ ಕಥೆಯಿದು

200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡುಲ್ಕರ್ 15, 921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 19 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡಾ ತೆಂಡುಲ್ಕರ್ ಹೆಸರಿನಲ್ಲಿದೆ. 

24 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್ ಒಟ್ಟಾರೆ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 34,357 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 201 ಬಲಿ ಪಡೆದಿದ್ದಾರೆ. ಇದಷ್ಟೇ ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ 2,334 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ 2013ರಲ್ಲಿ ತಮ್ಮ ತವರು ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದರು. 

ಗಣ್ಯ​ರ ವಿಶ್‌

ಸಚಿ​ನ್‌ರ ಹುಟ್ಟು​ಹ​ಬ್ಬಕ್ಕೆ ಹಾಲಿ, ಮಾಜಿ ಕ್ರಿಕೆ​ಟಿ​ಗರು ಹಾಗೂ ಹಲವು ಗಣ್ಯರು ಶುಭಾ​ಶಯ ಕೋರಿ​ದ್ದಾರೆ. ಐಸಿಸಿ, ಬಿಸಿ​ಸಿಐ, ಯುವ​ರಾಜ್‌ ಸಿಂಗ್‌, ಸೆಹ್ವಾಗ್‌, ರವಿ ಶಾಸ್ತ್ರಿ, ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಸೇರಿ​ದಂತೆ ಹಲ​ವರು ಶುಭಾ​ಶಯ ಕೋರಿ ಸಂದೇಶ ಕಳು​ಹಿ​ಸಿ​ದ್ದಾ​ರೆ.