Asianet Suvarna News Asianet Suvarna News

ವಿರಾಟ್ ಕೊಹ್ಲಿ ಜತೆ ಬ್ಯಾಡ್ಮಿಂಟನ್ ಆಡಿದ ಅನುಷ್ಕಾ ಶರ್ಮಾ; ಫಿಟ್ನೆಸ್ ಪಾಠ ಮಾಡಿದ ವಿರುಷ್ಕಾ ಜೋಡಿ

* ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದ ವಿರುಷ್ಕಾ ಜೋಡಿ
* ಫಿಟ್ನೆಸ್ ಕುರಿತಂತೆ ಜಾಗೃತಿ ಮೂಡಿಸಿದ ತಾರಾ ದಂಪತಿ
* ದಿನನಿತ್ಯದ ಬದುಕಿನಲ್ಲಿ ಫಿಟ್ನೆಸ್ ಜಾಗೃತಿ ಮೂಡಿಸಿದ ವಿರಾಟ್-ಅನುಷ್ಕಾ ದಂಪತಿ

Virat Kohli Anushka Sharma surprise fans with badminton face off bat for Let There Be Sport movement kvn
Author
First Published Apr 25, 2023, 3:20 PM IST

ಬೆಂಗಳೂರು(ಏ.25): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಭಾರತದ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಸೋಮವಾರ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಆಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ದಿನ ನಿತ್ಯದ ಜೀವನದಲ್ಲಿ ಕ್ರೀಡೆಯ ಮಹತ್ವ ಸಾರುವ 'Let There Be Sport' ಧ್ಯೇಯವಾಕ್ಯದಡಿ ಜಾಗೃತಿ ಸಾರುವ ಉದ್ದೇಶದಿಂದ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದಿದ್ದಾರೆ.

ಪ್ರತಿಯೊಬ್ಬರು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿರಾಟ್ ಹಾಗೂ ಅನುಷ್ಕಾ ಈ ರೀತಿ ವಿನೂತನ ಪ್ರಯೋಗ ನಡೆಸಿ ಗಮನ ಸೆಳೆದಿದ್ದಾರೆ. ನಗರದ ರೆಸಿಡೆನ್ಸಿಯಲ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ಫ್ರೆಂಡ್ಲಿ ಮಿಶ್ರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎದುರುಬದುರಾಗಿ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದರು.

ಈ ಪಂದ್ಯವು ಸಾಕಷ್ಟು ರೋಚಕತೆಯಿಂದ ಕೂಡಿದ್ದು ಮಾತ್ರವಲ್ಲದೇ ಸಾಕಷ್ಟು ಮೋಜಿನ ಸನ್ನಿವೇಶಕ್ಕೂ ಸಾಕ್ಷಿಯಾಯಿತು. ಇದಷ್ಟೇ ಅಲ್ಲದೇ ದಿನನಿತ್ಯದ ಬದುಕಿನಲ್ಲಿ ಫಿಟ್ನೆಸ್ ಎಷ್ಟು ಮುಖ್ಯ ಎನ್ನುವ ಮಹತ್ವದ ಸಂದೇಶವನ್ನು ಅವರು ಸಾರಿದರು.

ಈ ಕುರಿತಂತೆ ಮಾತನಾಡಿದ ವಿರಾಟ್ ಕೊಹ್ಲಿ, " ಕ್ರೀಡೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಅವಿಭಾಜ್ಯ ಅಂಗವಾಗಿದೆ. ನಮ್ಮ ಜೀವನದ ಇತರೆ ಅಗತ್ಯತೆಗಳಂತೆ ಕ್ರೀಡೆ ಕೂಡಾ ಮಹತ್ವದ್ದು ಎನ್ನುವ ಸಂದೇಶ ಸಾರಲು ನೆರವಾದ ಪೂಮಾ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. ಇದೊಂದು ರೀತಿಯ ವಿಭಿನ್ನ ಅನುಭವವಾಗಿದ್ದು, ನಮ್ಮ ದಿನನಿತ್ಯದ ವೇಳಾಪಟ್ಟಿಯ ಬದಲಾಗಿ ಈ ಆಟವು ಮೋಜಿನಿಂದ ಕೂಡಿತ್ತು. ಸ್ಥಳೀಯರ ಜತೆ ಬೆರೆತಿದ್ದು, ಉದ್ಯೋಗಿಗಳು ಫಿಟ್ನೆಸ್‌ ಚಾಲೆಂಜ್ ತೆಗೆದುಕೊಂಡಿದ್ದು ಸಾಕಷ್ಟು ಚೆನ್ನಾಗಿತ್ತು. ಇದರಿಂದ ಸ್ಪೂರ್ತಿ ಪಡೆದು ಇನ್ನು ಮುಂದೆ ಎಲ್ಲರೂ ತಮ್ಮ ಜೀವನದಲ್ಲಿ ಕ್ರೀಡೆ ಹಾಗೂ ಫಿಟ್ನೆಸ್‌ ಕಡೆ ಗಮನ ಕೊಡುವ ಮೂಲಕ ಜೀವನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಹೇಳಿದ್ದಾರೆ.

WTC Final: ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಸೂರ್ಯ, ಶ್ರೇಯಸ್‌ಗಿಲ್ಲ ಸ್ಥಾನ..! CSK ಆಟಗಾರನಿಗೆ ಜಾಕ್‌ಪಾಟ್

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ, 'Let There Be Sport' ಅಭಿಯಾನದಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್‌ ಚೆಟ್ರಿ ಜತೆಗೂಡಿ ಕ್ರೀಡೆಯಲ್ಲಿ ಫಿಟ್ನೆಸ್‌ ಮಹತ್ವವನ್ನು ಸಾರಿದ್ದರು. ತಮ್ಮ ಜೀವನದಲ್ಲಿ ಫಿಟ್ನೆಸ್ ಎಷ್ಟು ಮಹತ್ವವಾದದ್ದು, ತಾವು ಈ ಹಂತಕ್ಕೆ ಬೆಳೆಯಲು ಸಾಧ್ಯವಾದದ್ದು ಹೇಗೆ ಎನ್ನುವ ವಿಚಾರವನ್ನು ಸ್ಪೂರ್ತಿದಾಯಕವಾಗಿ ವಿವರಿಸಿದ್ದರು. 

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್ 26ರಂದು ತವರಿನಲ್ಲಿ 
 

Follow Us:
Download App:
  • android
  • ios