Asianet Suvarna News Asianet Suvarna News

ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸುಸೈಡ್ ಮಾಡಿಕೊಂಡ!

* ಮಾಜಿ ಗೆಳತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಗಲ್ ಪ್ರೇಮಿ 
*  ಗೆಳತಿ ಕೆಲವೇ ದಿನದ ಹಿಂದೆ ಬೇರೆ ವ್ಯಕ್ತಿಯ ಜತೆ ಮದುವೆಯಾಗಿದ್ದರು
*  ನವದಂಪತಿ ತೆರಳುತ್ತಿದ್ದ ಕಾರು ಅಡ್ಡ ಹಾಕಿದ

Bihar Spurned youth shoots newlywed ex-girlfriend dead before killing self bihar mah
Author
Bengaluru, First Published May 31, 2021, 4:11 PM IST

ಪಾಟ್ನಾ(ಮೇ 31)  ಬೇರೆ ಹುಡುಗನ ಮದುವೆಯಾದ ಮಾಜಿ ಪ್ರೇಯಸಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರೇಮಿ ತಾನೂ ಶೂಟ್ ಮಾಡಿಕೊಂಡಿದ್ದಾನೆ.

ಭಾನುವಾರ ಸಂಜೆ ಘಟನೆ ನಡೆದಿದೆ. ಪ್ರೇಯಸಿ ಇತ್ತೀಚೆಗೆ ಬೇರೆ ಹುಡುಗನ ಮದುವೆಯಾಗಿದ್ದಳು. ಬಿಹಾರದ ನಳಂದಾ ಜಿಲ್ಲೆಯ ರಾಹುಯಿ ಪೊಲೀಸ್ ಠಾಣೆಯ ಭಾಗನ್ ಬಿಘಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಲಿವ್ ಇನ್ ಸಂಗಾತಿಯನ್ನೂ ಪಬ್ಲಿಕ್ ಟಾಯ್ಲೆಟ್ ನಲ್ಲೇ ಹತ್ಯೆ ಮಾಡಿದ

ಮೃತರನ್ನು ರಾಜ್‌ಪಾಲ್ ಪಾಸ್ವಾನ್ ಅಲಿಯಾಸ್ ರೆಹಾನ್ (25) ಪಾಗಲ್ ಪ್ರೇಮಿ. ಮಾಜಿ ಗೆಳತಿ ಶಬ್ನಮ್ ಕುಮಾರಿ (23)  ಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.  ಶಬ್ನಮ್ ಅವರು ಮೇ 26 ರಂದು (ಬುಧವಾರ) ಶಹಪುರ್ ಗ್ರಾಮದ ವಿಕಾಸ್ ಎಂಬಾತನನ್ನು  ಮದುವೆಯಾಗಿದ್ದರು.

ಭಾನುವಾರ ಹೊಸ ಜೋಡಿ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಪಾಗಲ್ ಪ್ರೇಮಿ ಅಡ್ಡ ಹಾಕಿದ್ದಾನೆ.  ಶಬ್ನಮ್  ಮೇಲೆ ಒತ್ತಡ ಹಾಕಿದ್ದು ನೀನು ನನ್ನ ಜತೆ ಬಾ ಎಂದು ಒತ್ತಾಯ ಮಾಡಿದ್ದಾನೆ. ಆಕೆ ಒಪ್ಪದಿದ್ದಾಗ ಶೂಟ್ ಮಾಡಿದ್ದಾನೆ. ಈ ಹಿಂದೆ ಇಬ್ಬರು ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಶಬ್ನಮ್ ಮೃತಪಟ್ಟಿದ್ದಳು.  ರಾಜ್‌ಪಾಲ್  ನನ್ನು ಪಾಟ್ನಾಕ್ಕೆ ಕರೆದೊಯ್ಯುವ ಯತ್ನ ಮಾಡಿದರೂ ಆತ ಸಹ ದಾರಿಯಲ್ಲೇ ಪ್ರಾಣ ಬಿಟ್ಟ. ಪೊಲೀಸರು ಘಟನಾ ಸ್ಥಳದಿಂದ ದೇಸಿ ನಿರ್ಮಿತ ಪಿಸ್ತೂಲ್ ವಶಕ್ಕೆ  ಪಡೆದುಕೊಂಡಿದ್ದಾರೆ. 

 

Follow Us:
Download App:
  • android
  • ios