ಮುಂಬೈ(ಮೇ  30)   ಮಹಾರಾಷ್ಟ್ರದ ಮುಂಬೈನಲ್ಲಿ ಅಂಧೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19 ವರ್ಷದ ಯುವಕನೊಬ್ಬ 24 ವರ್ಷದ ಲಿವ್ ಇನ್ ಪಾರ್ಟನರ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದವನನ್ನು 24 ಗಂಟೆಯೊಳಗೆ ಬಂಧಿಸಲಾಗಿದೆ.

ಜ್ಯೋತಿ ಗಾವ್ಡೆ (24) ಮತ್ತು ಆರೋಪಿ ನಿಯಾಜ್ ಅನ್ಸಾರಿ (19)  ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.  ಮೀರಾ ರಸ್ತೆಬದಿಯಲ್ಲಿ ವಾಸಿಸುತ್ತಿದ್ದರು. ಕಸವನ್ನು ಸಂಗ್ರಹಿಸಲು ಪ್ರತಿದಿನ ಮಹಾನಗರಕ್ಕೆ ತೆರಳುತ್ತಿದ್ದರು. ಮೇ 27 ರಂದು ಸಂಜೆ 7 ಗಂಟೆ ಸುಮಾರಿಗೆ ಇವರಿಬ್ಬರು ಇನ್ನೊಂದು ಜೋಡಿಯೊಂದಿಗೆ  ಕಸ ಸಂಗ್ರಹಣೆಗೆ ತೆರಳಿದ್ದಾರೆ.

ಮನೆಯಲ್ಲೇ ಗಂಡನ ಹೂತಿಟ್ಟು ಮೈದುನನ ಜತೆ ಸಂಸಾರ

ಕ್ಷುಲ್ಲಕ ಕಾರಣವೊಂದಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜ್ಯೋತಿಯನ್ನು ಆರೋಪಿ ಅಟ್ಟಿಸಿಕೊಂಡು ಹೋಗಿದ್ದಾನೆ. ಮೆಟ್ರೋ ನಿಲ್ದಾಣದ ಕೆಳಗೆ ಇರುವ ಪುರುಷರ್ ಟಾಯ್ಲೆಟ್ ಗೆ ಜ್ಯೋತಿ ರಕ್ಷಣೆಗೆಂಧು ನುಗ್ಗಿದ್ದಾರೆ.  ಅಲ್ಲಿಗೆ ತೆರಳಿದ ಆರೋಪಿ ಆಕೆಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ.

ಅಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಳ್ಳಿ ಆರೋಪಿ ತಪ್ಪಿಸಿಕೊಂಡಿದ್ದಾನೆ.  ಪೊಲೀಸರಿಗೆ ಮಾಹಿತಿ ಗೊತ್ತಾಗಿದ್ದು ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿ ಪತ್ತೆ ಮಾಡಲಾಗಿದೆ.