ಇತ್ತೀಚಿನ ವರ್ಷಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕೋಲ್ಡ್ ಬ್ಲಡೆಡ್ ಮರ್ಡರ್‌ಗಳು ನಡೆಯೋದಂತೂ ತುಂಬಾ ಸಾಮಾನ್ಯವಾಗಿದೆ. ಹಾಗೆಯೇ ಪಾಟ್ನಾದಲ್ಲೊಂದು ಬರ್ಬರ ಕೊಲೆ ನಡೆದು ಹೋಗಿದೆ. ಅಕ್ಕನೇ ತಂಗಿಯನ್ನು ಕೊಚ್ಚಿ ಕೊಚ್ಚಿ ಕೊಂದಿದ್ದಾಳೆ.

ಪಾಟ್ನಾ: ಪ್ರಿಯಕರನ ಜೊತೆ ಏಕಾಂತದಲ್ಲಿ ಸರಸವಾಡುತ್ತಿದ್ದಾಗ ತಂಗಿ ನೋಡಿದ್ಲು ಅಂತ ಅಕ್ಕನೇ ತನ್ನ ಲವರ್‌ ಜೊತೆ ಸೇರಿ ತಂಗಿಯ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಇಲ್ಲಿನ ವೈಶಾಲಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರನ ನೆರವಿನಿಂದ ತನ್ನ ತಂಗಿಯನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಜಂಡಹಾಹಾ ಬ್ಲಾಕ್‌ನಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಮಂಗಳವಾರ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತದೇಹ ತುಂಡು ತುಂಡಾಗಿ ಕತ್ತರಿಸಿ, ಆಸಿಡ್ ಬಳಸಿ ಸುಟ್ಟುಹಾಕಿದ್ರು
ಲವರ್ ಜೊತೆ ಸರಸವಾಡುತ್ತಿದ್ದಾಗ ನೋಡಿದಳು ಎಂದು ಭಯಗೊಂಡ 13 ವರ್ಷದ ಬಾಲಕಿ (Girl), ತನ್ನ 9 ವರ್ಷದ ತನ್ನ ಸಹೋದರಿಯನ್ನು ಪ್ರಿಯತಮನ ಸಹಾಯದಿಂದ ಕೊಂದು ಬಾಕ್ಸ್‌ನಲ್ಲಿ ಹಾಕಿ ಮನೆಯಲ್ಲೇ ಬಚ್ಚಿಟ್ಟಿದ್ದಾಳೆ. ಮೃತದೇಹ ವಾಸನೆ ಬರಲು ಶುರುವಾಗುತ್ತಿದ್ದಂತೆ, ಆರೋಪಿಗಳು ಮೃತದೇಹವನ್ನು (Deadbody) ತುಂಡು ತುಂಡಾಗಿ ಕತ್ತರಿಸಿ, ನಂತರ ಅದನ್ನು ಆಸಿಡ್ ಬಳಸಿ ಸುಟ್ಟುಹಾಕಿದ್ದಾರೆ. ದೇಹದ ಭಾಗಗಳನ್ನು ಮನೆಯ ಹಿತ್ತಲಿಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ಗ್ರಾಮಸ್ಥರು ಅವಶೇಷಗಳನ್ನು ಪತ್ತೆಹಚ್ಚಿ ಅಧಿಕಾರಿಗಳಿಗೆ (Officers) ಎಚ್ಚರಿಕೆ ನೀಡಿದ ನಂತರವೇ ಘಟನೆ ಬೆಳಕಿಗೆ ಬಂದಿದೆ ಎಂದು ವೈಶಾಲಿ ಎಸ್ಪಿ ರವಿ ರಂಜನ್ ಕುಮಾರ್ ಹೇಳಿದ್ದಾರೆ.

Viral video: ಮನೆಯೆದುರು ಬೈಕ್ ನಿಲ್ಲಿಸಬೇಡ ಎಂದಿದ್ದಕ್ಕೆ ಮಚ್ಚಿನಿಂದ ಕುತ್ತಿಗೆಗೆ ಬೀಸಿದ ಆಸಾಮಿ!

'ಸ್ಥಳೀಯರು ಮಾಹಿತಿ ನೀಡಿದ ನಂತರ ಎಫ್ಎಸ್ಎಲ್ ತಂಡವನ್ನು ಅಪರಾಧ ಸ್ಥಳಕ್ಕೆ ಕಳುಹಿಸಿದೆವು ಅವಶೇಷಗಳ ಬಗ್ಗೆ ತನಿಖೆ ನಡೆಸಿದಾಗ ಅವು ಮಗುವಿಗೆ ಸೇರಿದವು ಎಂದು ತಿಳಿದುಬಂದಿದೆ. ಅದರಂತೆ, ನಾವು ಈ ಪ್ರದೇಶದಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆವು. ಈ ಸಂದರ್ಭದಲ್ಲಿ ಒಂಬತ್ತು ವರ್ಷದ ಬಾಲಕಿ ಮೇ 16ರಂದು ನಾಪತ್ತೆಯಾಗಿರುವುದು ತಿಳಿದುಬಂತು. ನಂತರ ಸಾಕ್ಷ್ಯವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು ಮತ್ತು ಮೃತದೇಹದ ಪರೀಕ್ಷೆ ಮಾಡಲಾಯಿತು. ಸಹ ನಿರ್ವಹಿಸಿದರು. ನಮಗೆ ಸಾಕಷ್ಟು ಪುರಾವೆಗಳು ದೊರೆತ ನಂತರ, ಮಂಗಳವಾರ ಸಂಜೆ ಇಬ್ಬರು ಶಂಕಿತರನ್ನು ಬಂಧಿಸಿದ್ದೇವೆ' ಎಂದು ಕುಮಾರ್ ಹೇಳಿದರು.

ಭಯದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಅಕ್ಕ
ನಾವು ಸಂತ್ರಸ್ತೆಯ ಅಕ್ಕನನ್ನು ವಿಚಾರಣೆಗೆ ಒಳಪಡಿಸಿದಾಗ, ಅವಳು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದಳು. ಕೆಲವು ದಿನಗಳ ಹಿಂದೆ, ಆರೋಪಿ ಮತ್ತು ಆಕೆಯ ಸಂಗಾತಿ ಅನ್ಯೋನ್ಯವಾಗಿದ್ದ ತಂಗಿ ನೋಡಿದ್ದಳು. ಇದರಿಂದ ಭಯಗೊಂಡ ಆಕ್ಕ ತಂಗಿ ಈ ವಿಚಾರವನ್ನು ಮನೆಯವರಿಗೆ ಹೇಳಬಹುದೆಂದು ಕೊಲೆ (Murder) ಮಾಡಲು ನಿರ್ಧರಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಎಸ್ಪಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳ ತಂದೆ ದಿನಗೂಲಿ ನೌಕರನಾಗಿದ್ದು, ಘಟನೆಯ ವೇಳೆ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

Bengaluru: ನಂಗೆ ಎಣ್ಣೆ ಸಾಲುತ್ತಿಲ್ಲವೆಂದು ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ರೌಡಿಶೀಟರ್‌