ಬೈಕ್ ನಿಲ್ಲಿಸುವ ಕ್ಷುಲ್ಲಕ ವಿಚಾರಕ್ಕೆ ಮಾರಾಕಾಸ್ತ್ರಗಳಿಂದ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಘಟನೆ ಘಟನೆ ವಿಜಯಪುರದಲ್ಲಿ ನಡೆದಿದೆ., ಹಲ್ಲೆ ವಿಡಿಯೋ ವೈರಲ್ ಆಗಿದ್ದು ಭಯಂಕರ ಹೊಡೆದಾಟದ ದೃಶ್ಯ ಸೆರೆಯಾಗಿದೆ.

ವಿಜಯಪುರ (ಮೇ.23) : ಬೈಕ್ ನಿಲ್ಲಿಸುವ ವಿಚಾರಕ್ಕೆ ಮಾತಿನ ಚಕಮಕಿ ಮಚ್ಚಿನಿಂದ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. 

ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿರುವ ಘಟನೆ. ಕಿರಣ ಗಜಕೋಶ(Kiran gajakosh) ಹಲ್ಲೆಗೊಳಗಾದವರು. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠರಿಂದ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ. ಕೊಡಲಿ ಮಚ್ಚು ಹಿಡಿದು ಹಲ್ಲೆ. ಇತ್ತ ಮನೆಯಲ್ಲಿದ್ದ ಕೊಡಲಿ ತಂದು ಹಲ್ಲೆ ನಡೆಸಿದ ಗೌರಮ್ಮ. ಹಲ್ಲೆಯ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರೀತಿಸಿದ ಹುಡುಗನ ಬದಲು ಬೇರೊಬ್ಬನ ಜತೆ ನಿಶ್ಚಿತಾರ್ಥ: ಭಾವಿ ಪತಿಯ ಕತ್ತಿಗೆ ಚೂರಿ ಹಾಕಿದ ಕ್ರಿಮಿನಲ್ ಗರ್ಲ್!

ಏನಾಯ್ತು: ಮನೆಯ ಎದುರು ನಿಲ್ಲಿಸಿದ್ದ ಬೈಕ್ ತೆಗೆಯುವಂತೆ ಹೇಳಿದ್ದ ಕಿರಣ ಗಜಕೋಶ. ಅಷ್ಟಕ್ಕೆ ಆಸಾಮಿ ಮನೆಯೊಳಗಿಟ್ಟಿದ್ದ ಮಚ್ಚು ಹಿಡಿದು ಹೊರಗ ಬಂದಿರುವ ಅಸಾಮಿ ಎದುರುಮನೆಯವನಿಗೆ ಏಕಾಏಕಿ ಕುತ್ತಿಗೆ ಬೀಸಿದ್ದಾನೆ. ಎರಡು ಸಲ ಮಚ್ಚು ಬೀಸಿದರೂ ಅದೃಷ್ಟವಶಾತ್ ಮಿಸ್ ಆಗಿದೆ. ಬೀಸಿದ ರೀತಿ ಭಯಂಕರ. ನೋಡನೋಡುತ್ತಿದ್ದಂತೆ ರಣರಂಗವಾದ ಮನೆಯಂಗಳ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಬೆಚ್ಚಿಬಿಳಿಸುವಂತಿದೆ.

ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಮಚ್ಚಿ​ನಿಂದ ಕೊಚ್ಚಿ ವ್ಯಕ್ತಿಯ ಕೊಲೆ

ತುಮ​ಕೂ​ರು: ಮಚ್ಚಿನಿಂದ ಕೊಚ್ಚಿ ವ್ಯಕ್ತಿ​ಯೊ​ಬ್ಬ​ನನ್ನು ದುಷ್ಕ​ರ್ಮಿ​ಗಳು ಕೊಲೆ ಮಾಡಿ​ರುವ ಘಟನೆ ತುಮ​ಕೂರು ಹೊರ​ವ​ಲ​ಯದ ಯಲ್ಲಾ​ಪು​ರ​ದಲ್ಲಿ ನಡೆ​ದಿದೆ.

ಬಳ್ಳಾರಿ: ಪತ್ನಿಯನ್ನು ಕೊಲ್ಲಲು ಮಚ್ಚು ತಂದ ಪಾನಮತ್ತ ಪತಿರಾಯ!

ಚಿಕ್ಕಮಗಳೂರು ಮೂಲದ ಜಾಕೀರ್‌ ಇಸ್ಮಾಯಿಲ… (36) ಕೊಲೆಯಾದ ವ್ಯಕ್ತಿ. ತುಮಕೂರು ಹೊರಹೊಲಯದಲ್ಲಿರುವ ಯಲ್ಲಾಪುರದ ಅಂಗಡಿಯಲ್ಲಿ ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಿದ್ದ ಜಾಕೀರ್‌ ನೂತನ ಟೈಲ್ಸ್‌ನ ಅಂಗಡಿಯನ್ನು 2 ತಿಂಗಳ ಹಿಂದೆ ಯಲ್ಲಾಪುರದಲ್ಲಿ ತೆರೆದಿದ್ದರು. ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರಬ​ಹುದು ಎನ್ನ​ಲಾ​ಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆ​ಸಿದ್ದು ಜಾಕೀರ್‌ ಸಹಾಯಕ ಖಾದರ್‌ನನ್ನು ಪೊಲೀ​ಸರು ವಶಕ್ಕೆ ಪಡೆ​ದಿ​ದ್ದಾರೆ. ಶವ​ವನ್ನು ಜಿಲ್ಲಾ​ಸ್ಪ​ತ್ರೆಯ ಶವಾ​ಗಾ​ರಕ್ಕೆ ರವಾ​ನಿ​ಸ​ಲಾ​ಗಿ​ದೆ.