Belagavi Murder: ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಕಾರಿನಲ್ಲಿತ್ತಾ 70 ಲಕ್ಷ ಹಾರ್ಡ್‌ಕ್ಯಾಶ್?
* ರಾಜು ಹತ್ಯೆಗೆ ಈ ಮೊದ್ಲು ಯತ್ನಿಸಿದ್ದಳಂತೆ ಮಾಯಾಂಗಿಣಿ!
* ಜೈಲು ಸೇರಿದ ಎರಡನೇ ಪತ್ನಿ ಬಗ್ಗೆ ಮೂರನೇ ಪತ್ನಿ ಹೇಳೋದೇನು?
* ಕೊಲೆಯಾದ ರಾಜು ಬೊಮ್ಮನ್ನವರ್ ಕುಟುಂಬಸ್ಥರು ಹೇಳಿದ್ದೇನು?
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ
ಬೆಳಗಾವಿ (ಮಾ.23): ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಪ್ರಕರಣ ಸಂಬಂಧ ಎರಡನೇ ಹೆಂಡತಿ, ಆತನ ಬ್ಯುಸಿನೆಸ್ ಪಾರ್ಟ್ನರ್ 10 ಲಕ್ಷಕ್ಕೆ ಸುಪಾರಿ ನೀಡಿದ್ದು ಗೊತ್ತಿರೋ ವಿಚಾರ. ಮಾರ್ಚ್ 15ರಂದು ವಾಕಿಂಗ್‌ಗೆ ಅಂತಾ ಕಾರಿನಲ್ಲಿ ತೆರಳುತ್ತಿದ್ದ ರಾಜು ದೊಡ್ಡಬೊಮ್ಮನ್ನವರ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆದರೆ ಈಗ ಕೊಲೆಯಾದ ರಾಜು ಕಾರಿನಲ್ಲಿ 60 ರಿಂದ 70 ಲಕ್ಷ ಹಣ ಇತ್ತು ಅದನ್ನ ಆರೋಪಿಗಳ ಬಳಿ ಇದೆ ಅಂತಾ ನಮಗೆ ಅನುಮಾನ ಇದೆ ಅಂತಾ ರಾಜು ದೊಡ್ಡಬೊಮ್ಮನ್ನವರ್ ಅಣ್ಣನ ಮಗ ಅಖಿಲ್ ಆರೋಪಿಸಿದ್ದಾನೆ.
ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಮೊದಲನೇ ಹೆಂಡತಿ, ಮೂರನೇ ಹೆಂಡತಿ, ತಾಯಿ, ಅಣ್ಣನ ಮಗ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಪ್ರಕರಣದಲ್ಲಿ ಮತ್ತಷ್ಟು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳು ಇವೆಯಾ ಎಂಬ ಅನುಮಾನ ಕಾಡ್ತಿದೆ. ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಅಣ್ಣನ ಮಗ ಅಖಿಲ್ ಹೇಳುವ ಪ್ರಕಾರ, 'ರಾಜು ದೊಡ್ಡಬೊಮ್ಮನ್ನವರ್ ವ್ಯವಹಾರದಲ್ಲಿ ನಮಗೆ ಮೋಸ ಮಾಡಿ ತಾನು ಮುಂದೆ ಹೋದ ಅಂತಾ ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದಾರೆ.
ಆದರೆ ರಾಜು ಕೊಲೆಯಾದ ಮಾರನೇ ದಿನ ನನ್ನ ಹಾಗೂ ಮೊದಲನೇ ಹೆಂಡತಿ ಮಗನ ಮನೆಗೆ ಕರೆಯಿಸಿಕೊಂಡು ಮೂರನೇ ಹೆಂಡತಿ ದೀಪಾ ದುಡ್ಡಿನ ಸಲುವಾಗಿ ಕೊಲೆ ಮಾಡಿಸಿದ್ದಾಳೆ ಅಂತಾ ಮೈಂಡ್ ಡೈವರ್ಟ್ ಮಾಡಲು ಯತ್ನಿಸಿದರು. ಕಳೆದ ಕೆಲ ದಿನಗಳ ಹಿಂದೆ ಒಂದು ಕೋಟಿ ಹದಿನೈದು ಲಕ್ಷ ರೂಪಾಯಿಗೆ ಒಂದು ಆಸ್ತಿ ಮಾರಾಟ ಮಾಡಿದ್ರು. ಸೇಲ್ ಡೀಡ್ ಆದ್ಮೇಲೆ 95 ಲಕ್ಷ ಹಾರ್ಡ್ ಕ್ಯಾಶ್ ಪಡೆದಿದ್ದರಂತೆ. ಅಂದಾಜು 70 ಲಕ್ಷ ರೂಪಾಯಿ ಹಣ ರಾಜು ಬಳಿ ಇದೆ ಮನೆಯಲ್ಲಿರಬೇಕು ನೋಡು ಅಂತಾ ನಮಗೆ ಹೇಳಿದರು.
Belagavi Murder: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಮುಳುವಾಯ್ತಾ ಮೂರು ಮದುವೆ
ಮೂರನೇ ಹೆಂಡತಿ ಮೇಲೆ ಕೊಲೆ ಮಾಡಿದ್ದಾಳೆಂದು ಬಿಂಬಿಸಲು ಯತ್ನಿಸುತ್ತಿದ್ದರು. ಹೀಗಾಗಿ ಆ 70 ಲಕ್ಷ ಹಣವನ್ನು ಈ ಮೂವರೇ ಲಪಟಾಯಿಸಿದ್ದಾರೆ ಅಂತಾ ಅನುಮಾನ ಇದೆ. ಕಾರಿನಲ್ಲಿ 60 ರಿಂದ 70 ಲಕ್ಷ ಹಣ ಇತ್ತು. ರಾಜು ದೊಡ್ಡಬೊಮ್ಮನ್ನವರ್ ಕಾರಿನಲ್ಲಿಯೇ ದುಡ್ಡು ಇಡುತ್ತಿದ್ರು. ಪೊಲೀಸರು ಕಾರಿನಲ್ಲಿ ಹಣ ಇಲ್ಲ ಅಂತಾ ತಿಳಿಸಿದ್ರು. ಹೀಗಾಗಿ ಆ ಹಣವನ್ನು ಆರೋಪಿಗಳಾದ ಎರಡನೇ ಹೆಂಡತಿ ಕಿರಣಾ, ಬ್ಯುಸಿನೆಸ್ ಪಾರ್ಟ್ನರ್‌ಗಳಾದ ಶಶಿಕಾಂತ, ಧರಣೇಂದ್ರ ಬಳಿಯೇ ಇದೆ' ಅಂತಾ ಅನುಮಾನ ವ್ಯಕ್ತಪಡಿಸುತ್ತಾರೆ.
ಗಂಡನ ಬ್ಯುಸಿನೆಸ್ ಪಾರ್ಟ್ನರನ್ನು ಲೈಫ್ ಪಾರ್ಟ್ನರ್ ಮಾಡಿಕೊಳ್ಳಲು ಯತ್ನಿಸಿದ್ದಳಾ ಮಾಯಾಂಗಣಿ: ಇನ್ನು ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಮೂರನೇ ಹೆಂಡತಿ ದೀಪಾ ಹೇಳುವಂತೆ, 'ನಮಗೆ ಮೊದಲಿನಿಂದಲೂ ಕಿರಣಾ ಮೇಲೆ ಡೌಟ್ ಇತ್ತು. ಹೀಗಾಗಿ ಕಿರಣಾ ಮೇಲೆಯೇ ನಾವು ಪೊಲೀಸರಿಗೆ ದೂರು ನೀಡಿದ್ವಿ. ಮೊದಲಿನಿಂದಲೂ ರಾಜುಗೆ ಕಿರಣಾ ತುಂಬಾ ತೊಂದರೆ ಕೊಡುತ್ತಿದ್ದಳು. ಈ ಹಿಂದೆ ಹಾಲಿಗೆ ವಿಷ ಹಾಕಿ ಪತಿ ರಾಜುವನ್ನೇ ಕೊಲ್ಲೋಕೆ ಯತ್ನಿಸಿದ್ದಳು. ಎರಡು ವರ್ಷ ಹಿಂದೆ ಬಿಟ್ಟು ಹೋಗಿದ್ದಳು.
ಎರಡು ತಿಂಗಳ ಹಿಂದೆ ನಾವು ಬೈಕ್ ಮೇಲೆ ತೆರಳುವ ವೇಳೆ ನಮ್ಮನ್ನು ದೂಡಿ ಕೊಲ್ಲಲು ಯತ್ನಿಸಿದ್ದಳು ಅಂತಾ ಆರೋಪಿಸಿದ್ದಾಳೆ. ದುಡ್ಡು,ಆಸ್ತಿ, ಫ್ಲ್ಯಾಟ್ ಬೇಕಾಗಿತ್ತು. ಮೊದಲನೇ ಮದುವೆಯಾದ ಬಗ್ಗೆ ಗೊತ್ತಾದ ಬಳಿಕವೇ ಮದುವೆಯಾಗಿದ್ದಳು. ಬಳಿಕ ರಾಜು ಮನೆಯವರನ್ನು ಹೊರಗೆ ಹಾಕಿದ್ದಳು. ಇತ್ತೀಚೆಗಷ್ಟೇ ಇಬ್ಬರ ಮಧ್ಯೆ ಕಾಂಪ್ರಮೈಸ್ ಆಗಿತ್ತು. ಇಬ್ಬರು ಮಕ್ಕಳ ಎಜ್ಯುಕೇಶನ್ ನಾನು ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ರು. ಕೊಲೆಯಾದ ದಿನದ ಮೂರು ದಿನಗಳ ಮುಂಚೆಯಿಂದ ಇಬ್ಬರು ಸೇರಿ ವಾಕಿಂಗ್‌ಗೆ ಹೋಗ್ತಿದ್ರು. ನಾಲ್ಕನೇ ದಿನ ಸ್ಕೆಚ್ ಹಾಕಿ ಹೀಗೆ ಮಾಡಿದ್ದಾರೆ.
ಬ್ಯುಸಿನೆಸ್ ಪಾರ್ಟ್ನರ್ ಶಶಿಕಾಂತ, ಧರಣೇಂದ್ರ ಮೊದಲಿನಿಂದಲೂ ರಾಜುಗೆ ಪರಿಚಯಸ್ಥರು. ಆದ್ರೆ ಶಶಿಕಾಂತ ಜೊತೆ ಕಿರಣಾ ಅನೈತಿಕ ಸಂಬಂಧ ಇತ್ತು. ರಾಜು ಹಾಗೂ ಕಿರಣಾ ಮಗನನ್ನ ಶಶಿಕಾಂತ ದತ್ತು ಪಡೆಯೋದಾಗಿ ಹೇಳಿದ್ದ. ಇದಕ್ಕೆ ಪತಿ ರಾಜು ವಿರೋಧಿಸಿ ಶಶಿಕಾಂತ ಜೊತೆ ಜಗಳವಾಡಿದ್ದರು. ಕೊಲೆಯಾದ ದಿನ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಇದ್ದೆ. ಶಶಿಕಾಂತ ಧರಣೇಂದ್ರ ಇಬ್ಬರೂ ಬಂದು ನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಕರೆದುಕೊಂಡು ಬಂದಿದ್ರು. ಧರಣೇಂದ್ರ ಹಾಗೂ ರಾಜು ಇಬ್ಬರೂ ಸ್ವಂತ ಅಣ್ಣ ತಮ್ಮಂದಿರಂತೆ ಇದ್ರು. ಹೀಗೆ ಮಾಡ್ತಾರಂತೆ ನಮಗೆ ಗೊತ್ತಿರಲಿಲ್ಲ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ' ಅಂತಾ ಮೂರನೇ ಪತ್ನಿ ದೀಪಾ ಆರೋಪಿಸಿದ್ದಾಳೆ.
ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ
ಮಗನ ಜೊತೆಯಲ್ಲೇ ಇದ್ದು ಕೊಂದು ಹಾಕಿದ್ರು ಅಂತಾ ತಾಯಿ ಕಣ್ಣೀರು: ಪ್ರಕರಣ ಕುರಿತು ಪ್ರತಿಕ್ರಿಯಿಸಿದ ರಾಜು ದೊಡ್ಡಬೊಮ್ಮನ್ನವರ್ ತಾಯಿ ಸುಶೀಲಾ, 'ಕೊಲೆಯಾದ ಹಿಂದಿನ ದಿನ ಮಗ ರಾತ್ರಿ 11 ಗಂಟೆಗೆ ಬಂದಿದ್ದ. ಮೂರನೇ ಸೊಸೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಳು. ಕೊಲೆಯಾದ ದಿನ ಬೆಳಗ್ಗೆ ಸ್ಥಳೀಯರು ಮನೆಗೆ ಬಂದು ಘಟನಾ ಸ್ಥಳಕ್ಕೆ ಕರೆದೊಯ್ದರು. ನನ್ನ ಮಗ ಹೆಣವಾಗಿ ಬಿದ್ದಿದ್ದ. ಎರಡನೇ ಸೊಸೆಗೆ ಎರಡು ಮಕ್ಕಳಿದ್ದು ಅವರ ಶೈಕ್ಷಣಿಕ ವೆಚ್ಚ ಖರ್ಚು ಎಲ್ಲಾ ಇವನ ನೋಡಿಕೊಳ್ಳುತ್ತಿದ್ದ. ಉಳಿದಾವ್ರಿಬ್ಬರು ಮಗ ರಾಜು ಜೊತೆಗೆ ಇರ್ತಿದ್ರು. ರಾಜು ತಾನು ಏನ್ ಊಟ ಮಾಡ್ತಾನೋ ಅದನ್ನೇ ಇವರಿಗೆ ತಿನಿಸುತ್ತಿದ್ದ ಅಂತವನನ್ನೆ ಕೊಂದಾರೋ' ಅಂತಾ ಕಣ್ಣೀರು ಹಾಕ್ತಿದ್ದಾರೆ.
ಒಟ್ಟಾರೆಯಾಗಿ ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಕುಟುಂಬಸ್ಥರು ಹೇಳುವ ಪ್ರಕಾರ ರಾಜುವಿನ ಕಾರಿನಲ್ಲಿ 60 ರಿಂದ 70 ಲಕ್ಷ ಹಣ ಇತ್ತು. ಆ ಹಣ ಆರೋಪಿಗಳ ಬಳಿ ಇದೆ ಅಂತಾ ಆರೋಪಿಸುತ್ತಾರೆ. ಅಷ್ಟೇ ಅಲ್ಲದೇ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇರೋ ಶಂಕೆ ಇದೆ ಸಮಗ್ರ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನು ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಈಗಾಗಲೇ 7 ಆರೋಪಿಗಳ ಬಂಧಿಸಿದ್ದು ಪ್ರಕರಣದ ತನಿಖೆ ಮುಂದುವರಿದಿದೆ ಅಂತಾ ತಿಳಿಸಿದ್ದಾರೆ.