- Home
- Karnataka Districts
- Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್
Bengaluru: ಗಂಡನ ಗೆಳೆಯನಿಂದಲೇ ಮೂರು ಮಕ್ಕಳ ತಾಯಿ ಮೇಲೆ ಅತ್ಯಾ*ಚಾರ; 5 ಲಕ್ಷ ಹಣಕ್ಕೆ ಡಿಮ್ಯಾಂಡ್
ಗಂಡನ ಸ್ನೇಹಿತನೇ ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ್ದಾನೆ. ಆರೋಪಿ ಮೊಹಮ್ಮದ್ ಜಹಾಂಗೀರ್, ಕೃತ್ಯದ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ ಲೈಂಗಿಕ ಕ್ರಿಯೆಗೆ ಮತ್ತು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾನೆ. ಸಂತ್ರಸ್ತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಂಡನ ಗೆಳೆಯನಿಂದಲೇ ಆತ್ಯಾ*ಚಾರ
ಬಿಹಾರ ಮೂಲದ ಮೂರು ಮಕ್ಕಳ ತಾಯಿ ಮೇಲೆ ಆಕೆಯ ಗಂಡನ ಗೆಳೆಯನಿಂದಲೇ ಆತ್ಯಾ*ಚಾರ ನಡೆದಿರುವ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮೊಹಮ್ಮದ್ ಜಹಾಂಗೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿ ಜಹಾಂಗೀರ್ ಬೈರನಕುಂಟೆಯ ನಿವಾಸಿಯಾಗಿದ್ದಾನೆ.
ಆರೋಪಿಗೆ ಊಟ ಕೊಡ್ತಿದ್ದ ಸಂತ್ರಸ್ತೆ
ಸಂತ್ರಸ್ತೆ ಗಂಡ ಮತ್ತು ಆರೋಪಿ ಜಹಾಂಗೀರ್ ಇಬ್ಬರು ಸ್ನೇಹಿತರಾಗಿದ್ರು. ಸಂತ್ರಸ್ತೆಯ ಗಂಡ ಟೈಲರ್ ವೃತ್ತಿ ಮಾಡಿಕೊಂಡಿದ್ದು, ಆತನ ಕೆಲಸದಲ್ಲಿ ಆರೋಪಿ ಜಹಾಂಗೀರ್ ಸಹಾಯ ಮಾಡುತ್ತಿದ್ದನು. ಹಾಗಾಗಿ ಆರೋಪಿ ಮನೆಗೆ ಸಂತ್ರಸ್ತೆಯ ಮನೆಯಿಂದಲೇ ಊಟ ಹೋಗುತ್ತಿತ್ತು. ಸಂತ್ರಸ್ತೆಯೇ ಆಹಾರ ತೆಗೆದುಕೊಂಡು ಹೋಗುತ್ತಿದ್ರು. ಹಾಗೆಯೇ ಆರೋಪಿ ವಾಸವಾಗಿದ್ದ ಮನೆಯನ್ನು ಸಹ ಸಂತ್ರಸ್ತೆಯೇ ಕ್ಲೀನ್ ಮಾಡುತ್ತಿದ್ದರು.
ವಿಡಿಯೋ ವೈರಲ್ ಮಾಡುವ ಬೆದರಿಕೆ
20ನೇ ನವೆಂಬರ್ 2023ರಂದು ಮಹಿಳೆ ಒಂಟಿಯಾಗಿದ್ದಾಗ ಬಂದ ಆರೋಪಿ ಜಹಾಂಗೀರ್ ಅತ್ಯಾ*ಚಾರಗೈದು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದಾಗಿ ಹೇಳಿದ್ದಾನೆ.
ಲೈಂಗಿ*ಕಕ್ರಿಯೆಗೆ ಒತ್ತಾಯ
ಈ ಘಟನೆ ಬಳಿಕ ಮಕ್ಕಳ ಅನಾರೋಗ್ಯದ ಹಿನ್ನೆಲೆ ಮಹಿಳೆ ಬಿಹಾರಕ್ಕೆ ತೆರಳಿದ್ದರು. ಇತ್ತೀಚೆಗಷ್ಟೇ ಮಹಿಳೆ ಮಕ್ಕಳೊಂದಿಗೆ ಬೆಂಗಳೂರಿಗೆ ಹಿಂದಿರುಗಿದ್ದಳು. ಫೆಬ್ರವರಿ 10ರಂದು ಮಹಿಳೆ ಮುಂದೆ ಪ್ರತ್ಯಕ್ಷನಾದ ಜಹಾಂಗೀರ್, ಮತ್ತೆ ಲೈಂಗಿಕಕ್ರಿಯೆಗೆ ಒತ್ತಾಯಿಸಿದ್ದಾನೆ.
ಇದನ್ನೂ ಓದಿ: 24 ವರ್ಷಗಳ ಹಿಂದೆ ಸತ್ತಿದ್ದ ಪತ್ನಿಯಿಂದ ದೂರು ! ಸತ್ಯ ತಿಳಿದು ಗಂಡ, ಪೊಲೀಸ್ ದಂಗು
5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ
ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆರೋಪಿ ಜಹಾಂಗೀರ್ 5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದೇ ವೇಳೆ ಬಂದ ಮಹಿಳೆ ಗಂಡ ಪತ್ನಿಯನ್ನು ರಕ್ಷಣೆ ಮಾಡಿದ್ದಾನೆ. ನಂತರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ದೂರಿನ ಮೇರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!

