Belagavi Murder: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಮುಳುವಾಯ್ತಾ ಮೂರು ಮದುವೆ
ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಎರಡನೇ ಹೆಂಡತಿ ಸುಪಾರಿ..!
ಗಂಡನ ಬ್ಯುಸಿನೆಸ್ ಪಾರ್ಟ್ನರ್ ಜೊತೆಗೂಡಿ ರೂಪಿಸಿದ್ಳು ಸ್ಕೆಚ್..!
ಗಂಡನ ಶವ ಎದುರು ಬಿಕ್ಕಿ ಬಿಕ್ಕಿ ಅತ್ತು ನಾಟಕವಾಡಿದ್ಳು ಕಿರಾತಕಿ..!
ಸುಪಾರಿ ಪಡೆದಿದ್ದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅರೆಸ್ಟ್..!
ಬೆಳಗಾವಿ(ಮಾ.23): ಮಾರ್ಚ್ 15ರ ಬೆಳ್ಳಂಬೆಳಗ್ಗೆ ಬೆಳಗಾವಿಯ ಭವಾನಿ ನಗರದ ಗಣಪತಿ ದೇಗುಲ ಬಳಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗಂಡನ ಹತ್ಯೆಗೆ ಎರಡನೇ ಹೆಂಡತಿ ಕಿರಣಾ, ಗಂಡನ ಬ್ಯುಸಿನೆಸ್ ಪಾರ್ಟ್ನರ್‌ಗಳಿಬ್ಬರ ಜೊತೆ ಸೇರಿ ಹತ್ತು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದು ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಎರಡನೇ ಪತ್ನಿ ಕಿರಣಾ ಹಾಗೂ ಬ್ಯುಸಿನೆಸ್ ಪಾರ್ಟ್ನರ್‌ಗಳಾದ ಶಶಿಕಾಂತ ಶಂಕರಗೌಡ, ಧರಣೇಂದ್ರ ಘಂಟಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್, ವಿಜಯ್ ಜಾಗೃತ್ ಸೇರಿ ಒಟ್ಟು ಏಳು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಮೂರು ಮದುವೆಯಾಗಿದ್ದೇ ಮುಳುವಾಯಿತು..!
ಮೂಲತಃ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದ ನಿವಾಸಿಯಾಗಿದ್ದ ರಾಜು ದೊಡ್ಡಬೊಮ್ಮನ್ನವರ್ ಅಂತಿಂತಾ ಆಸಾಮಿ ಏನಾಗಿರಲಿಲ್ಲ. ಮೂರು ಜನರನ್ನ ಮದುವೆಯಾಗಿದ್ದ. 22 ವರ್ಷದ ಹಿಂದೆ ಉಮಾ ಎಂಬಾಕೆಯನ್ನ ಮದುವೆಯಾಗಿದ್ದ. ಎರಡು ಮಕ್ಕಳಿದ್ದು ಇಬ್ಬರಿಗೂ ವೈದ್ಯಕೀಯ ಶಿಕ್ಷಣ ಓದಿಸುತ್ತಿದ್ದ ಆದ್ರೇ ನಾಲ್ಕು ವರ್ಷದ ಹಿಂದೆ ಮೊದಲ ಹೆಂಡತಿ ಮಕ್ಕಳನ್ನ ಇವರ ಬಳಿ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದಳು. ಇತ್ತ ಎಂಟು ವರ್ಷದ ಹಿಂದೆ ಮಹಾರಾಷ್ಟ್ರದ ಲಾತೂರ್ ನ ಕಿರಣಾ ಎಂಬುವಳನ್ನೂ ಎರಡನೇ ಮದುವೆಯಾಗಿದ್ದ. ಅವರಿಗೂ ಎರಡು ಮಕ್ಕಳಿದ್ದು ಇದಾದ ಬಳಿಕ ಒಂದು ವರ್ಷದ ಹಿಂದೆ ಹಳಿಯಾಳ ತಾಲೂಕಿನ ದೀಪಾ ಎಂಬುವಳನ್ನು ಮದುವೆಯಾಗಿದ್ದ. ಆಕೆಯೂ ಇದೀಗ ಮೂರು ತಿಂಗಳ ಗರ್ಭಿಣಿ. ಹೀಗೆ ಮೂರು ಹೆಂಡತಿಯರನ್ನು ಒಂದೊಂದು ಕಡೆ ಇಟ್ಟು ರಾಜನಂತೆ ಜೀವನ ಸಾಗಿಸುತ್ತಿದ್ದ ರಾಜು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ. ನಾಲ್ಕ್ಕೈದು ಅಪಾರ್ಟ್‌ಮೆಂಟ್ ಕೆಲಸ ಕೂಡ ಪ್ರಗತಿಯಲ್ಲಿದ್ವಂತೆ. ಆದ್ರೇ ಎಲ್ಲರ ಬಳಿ ಹಣ ಪಡೆದು ಸಿಕ್ಕಂತೆ ಖರ್ಚು ಮಾಡಿದ್ದನಂತೆ ಈ ರಾಜು. ಇನ್ನು ತಾನು ಮೊದಲನೇ ಮದುವೆಯಾಗಿದ್ದನ್ನು ಬಚ್ಚಿಟ್ಟು ಕಿರಣಾ ಜೊತೆ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೆ ಎರಡು ಮಕ್ಕಳಾದ ಬಳಿಕ ಕಳೆದ ವರ್ಷ ಮತ್ತೆ ಮೂರನೇ ಮದುವೆಯಾಗಿದ್ದ. ಇನ್ನು ಎರಡನೇ ಹೆಂಡತಿ ಹಾಗೂ ಮಕ್ಕಳ ಹೆಸರಲ್ಲಿ ಏನೂ ಆಸ್ತಿ ಮಾಡದೇ ಇರೋದು ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಈ ಮಧ್ಯೆ ವ್ಯವಹಾರದಲ್ಲಿ ಪಾರ್ಟ್ನರ್ಸ್‌ಗಳಾದ ಶಶಿಕಾಂತ ಹಾಗೂ ಧರಣೇಂದ್ರ ಜೊತೆ ಕಿರಿಕ್ ಮಾಡಿಕೊಂಡಿದ್ದ. 10 ವರ್ಷ ಹಿಂದೆ ಅಪಾರ್ಟ್‌ಮೆಂಟ್ ನಿರ್ಮಾಣ ಸಂಬಂಧ ಕೊಲೆಯಾದ ರಾಜು ಆರೋಪಿಗಳಾದ ಧರ್ಮೆಂದ್ರ, ಶಶಿಕಾಂತ್ ಪಾರ್ಟ್ನರ್‌ಶಿಪ್‌ನಲ್ಲಿ ಗ್ಲೋಬಲ್ ಡೆವಲಪರ್ಸ್ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಬೆಳಗಾವಿಯ ಚನ್ನಮ್ಮ ನಗರದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ರು. ಇತ್ತ ಇಬ್ಬರೂ ಪಾರ್ಟ್ನರ್ಸ್‌ನ್ನ ದೂರವಿಟ್ಟು ರಾಜು ದೊಡ್ಡಬೊಮ್ಮಣ್ಣವರ್ ಆರು ಬೇರೆ ಪ್ರಾಜೆಕ್ಟ್ ಮಾಡ್ತಿದ್ದ ಹತ್ತು ವರ್ಷವಾದರೂ ಮೊದಲು ಆರಂಭಿಸಿದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆ ರಾಜು ದೊಡ್ಡಬೊಮ್ಮನ್ನವರ್ ಮೇಲೆ ಬ್ಯುಸಿನೆಸ್ ಪಾರ್ಟ್ನರ್‌ಗಳಿಬ್ಬರಿಗೂ ವೈಷಮ್ಯ ಬೆಳೆದಿತ್ತು. ಮತ್ತೊಂದೆಡೆ ಎರಡನೇ ಹೆಂಡತಿ ಕಿರಣಾಗೂ ಪತಿ ರಾಜು ಮೇಲೆ ಕೌಟುಂಬಿಕ ಕಲಹ ಹಿನ್ನೆಲೆ ದ್ವೇಷವಿತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ಪಾರ್ಟ್ನರ್‌ಗಳ ಜತೆಗೂಡಿ ಗಂಡನ ಹತ್ಯೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ.
Suicide Cases in Karnataka: ಕತ್ತು ಸೀಳಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣು
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷನಿಗೆ ನೀಡಿದ್ರು ಸುಪಾರಿ..!
ಇನ್ನು ರಾಜು ದೊಡ್ಡಬೊಮ್ಮನ್ನವರ್ ಹತ್ಯೆಗೆ ಬೆಳಗಾವಿಯ ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ರಜಪೂತ್‌ನನ್ನು ಶಶಿಕಾಂತ ಸಂಪರ್ಕಿಸಿದ್ದ. ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್ ಸಂಪರ್ಕಿಸಿ 10 ಲಕ್ಷಕ್ಕೆ ಸುಪಾರಿ ನೀಡಿದ್ದ. 10 ಲಕ್ಷ ಸುಪಾರಿ ಪಡೆದಿದ್ದ ಸಂಜಯ್ ರಜಪೂತ್ ವಿಜಯ್ ಜಾಗೃತ್ ಎಂಬುವನಿಗೆ ಕೆಲಸ ಒಪ್ಪಿಸಿದ್ದ. ಅದರಂತೆ ಮಾರ್ಚ್ 15ರಂದು ಬೆಳಗ್ಗೆ 5.30ರ ವೇಳೆ ಮನೆಯಿಂದ ಕಾರಿನಲ್ಲಿ ತೆರಳಿದ್ದ ರಾಜುವನ್ನು ಭವಾನಿ ನಗರ ಬಳಿ ಬೆಳಗ್ಗೆ 6 ಗಂಟೆ ಸುಮಾರಿಗೆ ಕಾರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಎರಡು ಕಾಲುಗಳ ಮೇಲೆ ಹತ್ತಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದರು. ತೀವ್ರ ರಕ್ತ ಸ್ರಾವವಾಗಿ ರಾಜು ದೊಡ್ಡಬೊಮ್ಮಣ್ಣವರ್ ಸ್ಥಳದಲ್ಲೇ ಮೃತಪಟ್ಟಿದ್ದ. ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಪಿ ರವೀಂದ್ರ ಗಡಾದಿ, ಸಿಪಿಐ ಸುನಿಲಕುಮಾರ್ ನಂದೇಶ್ವರ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ರು.
ಗಂಡನ ಹತ್ಯೆಗೆ ಸುಪಾರಿ ನೀಡಿ ಶವದ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದ ಎರಡನೇ ಪತ್ನಿ
ಇನ್ನು ಕೊಲೆಯಾದ ದಿನ ರಾಜು ದೊಡ್ಡಬೊಮ್ಮನ್ನವರ್ ಬೆಳಗ್ಗೆ 6 ಗಂಟೆ ಸುಮಾರಿಗೆ ಎರಡನೇ ಪತ್ನಿ ಕಿರಣಾಗೆ ಕರೆ ಮಾಡಿದ್ದ. ಆದ್ರೆ ಕಿರಣಾ ಕರೆ ಸ್ವೀಕರಿಸಿರಲಿಲ್ಲ. ಇದಾದ ಬಳಿಕ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಎರಡು ಮಕ್ಕಳ ಜೊತೆ ಬಂದಿದ್ದ ಎರಡನೇ ಪತ್ನಿ ಕಿರಣಾ ಗಂಡನ ಮೃತದೇಹ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅಷ್ಟೇ ಅಲ್ಲದೇ ಮಾಧ್ಯಮಗಳಿಗೂ ಸಹ ಪ್ರತಿಕ್ರಿಯೆ ನೀಡಿದ್ದ ಕಿರಣಾ ಬೆಳಗ್ಗೆ 6 ಗಂಟೆಗೆ ಪತಿ ರಾಜು ಫೋನ್ ಕರೆ ಮಾಡಿದ್ರು.ಆ ವೇಳೆ ನಾನು ಕರೆ ಸ್ವೀಕರಿಸಿರಲಿಲ್ಲ. ಬಳಿಕ ನಾನು ಮರಳಿ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಈಗ ಹೀಗಾಗಿದೆ ಅಂತಾ ಬಿಕ್ಕಿ ಬಿಕ್ಕಿ ಅತ್ತು ನಾಟಕವಾಡಿದ್ದಳು. ಇತ್ತ ಕೊಲೆ ಪ್ರಕರಣ ಸವಾಲಾಗಿ ತಗೆದುಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರ ಮೇಲೆ ಎರಡನೇ ಪತ್ನಿ ಕಿರಣಾ, ಬ್ಯುಸಿನೆಸ್ ಪಾರ್ಟ್ನರ್‌ಗಳಾದ ಶಶಿಕಾಂತ, ಧರಣೇಂದ್ರ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ
ಸ್ನೇಹಿತನೊಂದಿಗೆ ಏಕಾಂತದಲ್ಲಿ ತಂಗ ಕಂಡಿದ್ದೆ ಕೊಲೆಗೆ ಕಾರಣ!
'ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ, ಮತ್ತಷ್ಟು ಆರೋಪಿಗಳಿಗಾಗಿ ಶೋಧ'
ಇನ್ನು ಪ್ರಕರಣ ಕುರಿತು ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, 'ಮೇಲ್ನೋಟಕ್ಕೆ ವೈಯಕ್ತಿಕ ಹಾಗೂ ವ್ಯವಹಾರದಲ್ಲಿನ ವೈಷಮ್ಯ ಘಟನೆಗೆ ಕಾರಣ ಇದೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಎರಡನೇ ಹೆಂಡತಿ ಸಹ ಭಾಗಿಯಾಗಿದ್ದು ಗೊತ್ತಾಗಿದ್ದು ಇನ್ನೂ ಕೆಲವು ಆರೋಪಿಗಳು ಭಾಗಿಯಾದ ಶಂಕೆ ಇದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
"