ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ

ಕಾಫಿ ಬೆಳೆಗೆ ಈ ಭಾರೀ ಬಂಪರ್ ಬೆಲೆ ಸಿಕ್ಕಿದೆ. ಕಾಫಿ ಇತಿಹಾಸದಲ್ಲೇ 50ಕೆಜಿ ತೂಕದ ಚೀಲಕ್ಕೆ 15ಸಾವಿರ ಗಡಿ ದಾಟಿದೆ. ಇನ್ನೊಂದಡೆ ಉತ್ತಮ ಬೆಲೆ ಸಿಕ್ಕಿರುವುದು ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. 

Man Arrested For Coffee Theft Cases in Chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಮಾ.23): ಕಾಫಿ ಬೆಳೆಗೆ ಈ ಭಾರೀ ಬಂಪರ್ ಬೆಲೆ ಸಿಕ್ಕಿದೆ. ಕಾಫಿ ಇತಿಹಾಸದಲ್ಲೇ 50ಕೆಜಿ ತೂಕದ ಚೀಲಕ್ಕೆ 15ಸಾವಿರ ಗಡಿ ದಾಟಿದೆ. ಅರೇಬಿಕಾ ಕಾಫಿಗೆ 15 ಸಾವಿರ ಗಡಿ ದಾಟಿದರೆ  ರೋಬಸ್ಟಾ ಬೆಳೆಗೆ 10ಸಾವಿರ ಗಡಿ ತನಕ ಬೆಲೆ ಬಂದಿದೆ. ಇದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಇನ್ನೊಂದಡೆ ಉತ್ತಮ ಬೆಲೆ ಸಿಕ್ಕಿರುವುದು ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. 

ಮಲೆನಾಡಿನಲ್ಲಿ ಕಾಫಿ ಮೂಟೆಯೊಂದಿಗೆ ಕಳ್ಳರು ಎಸ್ಕೇಪ್: ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಕಾಫಿಯನ್ನು ಬೆಳೆಲಾಗುತ್ತಿದೆ. ಅರೇಬಿಕಾ, ರೋಬಸ್ಟಾ ಬೆಳೆಯನ್ನು ಬೆಳೆಗಾರರು ಬೆಳೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂಧ ಮಾರುಕಟ್ಟೆಯಲ್ಲಿ ಕಾಫಿಗೆ ಅತ್ಯಂತ ಕಡಿಮೆ ಬೆಲೆ ನಿಗದಿಯಾಗಿತು. ಆದರೆ ಈಗ ಕಾಫಿಗೆ ಉತ್ತಮ ಬೆಲೆ ಸಿಕ್ಕಿದ್ದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ಅತೀ ಹೆಚ್ಚಾಗಿ ಕಾಫಿ ಬೆಳೆಯುವ ಪ್ರದೇಶವಾಗಿದೆ. 

ಈ ಭಾಗದಲ್ಲೇ ಈಗ ಇನ್ನೊಂದು ಆತಂಕವೂ ಶುರುವಾಗಿದೆ. ಕಾಫಿಗೆ ಉತ್ತಮ ಬೆಲೆ ಸಿಕ್ಕ ಕೂಡಲೇ ಕಳ್ಳತನದ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ . ಅದರಲ್ಲೂ ಮೂಡಿಗೆರೆ, ಬಾಳೆಹೊನ್ನೂರು, ಜಯಪುರ, ಕೊಪ್ಪ ಭಾಗಳಲ್ಲಿ ಕಾಫಿ ಮೂಟೆಗಳನ್ನೇ ಕಳ್ಳರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಮನೆ ಸೇರಿದಂತೆ ಕಣದಲ್ಲಿ ಇರುವ ಕಾಫಿ ಮೂಟೆಗಳನ್ನು ಕಳ್ಳತನವಾಗಿರುವ ಬಗ್ಗೆ ಮಾಲೀಕರು ಪೋಲಿಸ್ ಠಾಣೆಗೆ ದೂರು ನೀಡುತ್ತಿದ್ದಾರೆ. 

ಪ್ರಾಚೀನ ಕಾಲದ ವಿಷ್ಣು ವಿಗ್ರಹ ವಿದೇಶಕ್ಕೆ ರಫ್ತು ಮಾಡಲು ಯತ್ನ: ಆರೋಪಿ ಬಂಧನ

ಮಲೆನಾಡಿನ ಭಾಗದಲ್ಲಿ ಕಾಫಿ ಚೀಲಕ್ಕೆ ಕನ್ನ: ಓರ್ವನ ಬಂಧನ 
ಕಾಫಿ ಮೂಟೆಗಳನ್ನು ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರಿನ ಜಯಪುರ ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಲ್ಲುಗುಡ್ಡೆ ಗ್ರಾಮದ ಅಂದಕಲ್ಲು ನಿವಾಸಿ  ರಾಘವೇಂದ್ರ ಅವರಿಗೆ ಸೇರಿದ ಕಾಫಿ ಮೂಟೆಯು ಮಾರ್ಚ್ 16 ರಂದು ಕಳ್ಳತನವಾಗಿತ್ತು. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಕಾರ್ಯಾಚರಣೆಗಿಳಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾಫಿ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತನನ್ನು ಜಯಪುರದ ಕಲ್ಲುಗುಡ್ಡೆ ಗ್ರಾಮದ ಗಣಪತಿ ಕಟ್ಟೆ ನಿವಾಸಿ ಗೋಪಾಲ ಎಂದು ಗುರುತಿಸಲಾಗಿದೆ. ಈತನನ್ನು ಅನುಮಾನದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತನಿಂದ 438 ಕೆ.ಜಿ ತೂಕದ 14 ಕಾಫಿ ಮೂಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. 

Hassan: ದಂತಕ್ಕಾಗಿ ಕಾಡಾನೆ ಹತ್ಯೆ: ಮೂವರ ಬಂಧನ

ಈ ಕಾರ್ಯಾಚರಣೆಯು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ ಹೆಚ್ ಅವರ ಮಾರ್ಗದರ್ಶನದಲ್ಲಿ  ಜಯಪುರ ಪಿಎಸೈ ಜ್ಯೋತಿ ಅವರು  ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಎಎಸೈ ನಾಗರಾಜ, ಸತೀಶ, ಯಶಸ್ವಿಯಾಗಿದ್ದಾರೆ. ಒಟ್ಟಾರೆ ಪೊಲೀಸರು ಕಾರ್ಯಚರಣೆ ಮಲೆನಾಡಿನಲ್ಲಿ ಕಾಫಿ ಕಳ್ಳತನದಲ್ಲಿ ಭಾಗಿರುವ ಓರ್ವನನ್ನು ವಶಕ್ಕೆ ಪಡೆಯುಲಾಗಿದೆ. ಇನ್ನು ಹೆಚ್ಚಿನ ವಿಚಾರಣೆ, ತನಿಖೆಯನ್ನು ಪೊಲೀಸ್ರು ಕೈಗೊಂಡು ಮತ್ತಷ್ಟು ಆರೋಪಿಗಳು ಸಿಕ್ಕಿಬೀಳುವ ಸಾಧ್ಯತೆಗಳಿವೆ.

Latest Videos
Follow Us:
Download App:
  • android
  • ios