ಬೆಂಗಳೂರಿನ ನಿಮ್ಹಾನ್ಸ್ ಲೇಔಟ್‌(Bengaluru nimhans layout)ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರಾದ ವಾಸಿಂ ಮತ್ತು ಸೈಯದ್ ನಡುವೆ ಜಗಳ ನಡೆದಿದೆ. ಸೈಯದ್‌ನ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯವಾಗಿ ನಿಂದಿಸಿದ್ದರಿಂದ ಕೋಪಗೊಂಡ ಸೈಯದ್, ಚಾಕುವಿನಿಂದ ಇರಿದು ವಾಸಿಂನನ್ನು ಕೊಲೆ ಮಾಡಿದ್ದಾನೆ.

ಬೆಂಗಳೂರು (ಜೂ.17) ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರಿಬ್ಬರ ನಡುವೆ ಆದ ಜಗಳ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಬೆಂಗಳೂರಿನ ನಿಮ್ಹಾನ್ಸ್ ಲೇಔಟ್‌ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಸಿಂ, ಚಾಕು ಇರಿತದಿಂದ ಕೊಲೆಯಾದ ವ್ಯಕ್ತಿ. ಪೊಲೀಸರ ಮಾಹಿತಿ ಪ್ರಕಾರ, ಸೈಯದ್ ಕೊಲೆ ಆರೋಪಿ. ವಾಸಿಂ ಮತ್ತು ಸೈಯದ್ ಇಬ್ಬರೂ ಗೆಳೆಯರಾಗಿದ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸೈಯದ್ ಚಾಕು ಇರಿದಿದ್ದರಿಂದ ತೀವ್ರ ಗಾಯಗೊಂಡು ವಾಸಿಂ ಸತ್ತಿದ್ದಾನೆ.

ಸೈಯದ್ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯ ನಿಂದನೆ

ಹತ್ಯೆಯಾದ ವಾಸಿಂ ಸ್ನೇಹಿತ ಸೈಯದ್‌ನ ತಾಯಿ ಹಾಗೂ ಅಕ್ಕನ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸೈಯದ್ ಕುಪಿತಗೊಂಡು ವಾಸಿಂ ಮೇಲೆ ದಾಳಿ ಮಾಡಿದ್ದಾನೆ. ವಾಸಿಂ ಕೂಡ ಸೈಯದ್ ಮೇಲೆ ಹಲ್ಲೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಸೈಯದ್ ಚಾಕುವಿನಿಂದ ಮನಬಂದಂತೆ ವಾಸಿಂಗೆ ಇರಿದಿದ್ದಾನೆ. ಈ ದಾಳಿಯಿಂದ ಗಂಭೀರ ಗಾಯಗೊಂಡ ವಾಸಿಂನನ್ನ ಆರೋಪಿ ಸೈಯದ್ ತಾನೇ ಮುಂದಾಗಿ ಆಸ್ಪತ್ರೆಗೆ ಕರೆದೊಯ್ಯದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಾಸಿಂ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಸುದ್ದಗುಂಟೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸದ್ಯ ಘಟನೆ ಸಂಬಂಧ ಸುದ್ದಗುಂಟೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಬ್ಬರು ಗೆಳೆಯರಾಗಿದ್ದರೂ ಕ್ಷುಲ್ಲಕ ಕಾರಣಕ್ಕೆ, ಮಾತಿನಲ್ಲೇ ಬಗೆಹರಿಸಬಹುದಾಗಿ ಘಟನೆಯನ್ನ ಕೋಪದ ಕೈಗೆ ಬುದ್ಧಿ ಕೊಟ್ಟು ಪರಸ್ಪರ ಬಡಿದಾಡಿಕೊಂಡು ಒಬ್ಬನ ಕೊಲೆಯಾದರೆ ಇನ್ನೊಬ್ಬ ಜೈಲಿನ ಕಂಬಿ ಎಣಿಸುವಂತಾಯ್ತು!