ತಮಿಳುನಾಡು ಮೂಲದ ಇಸಯ್ ರಾಜ್ ಕಳ್ಳತನದ ಮಾದರಿಯ ಡಿಫರೆಂಟ್. ಕಳ್ಳತನಕ್ಕಾಗಿ ಅಪಾರ್ಟ್ ಮೆಂಟ್ ಗಳನ್ನು ಗುರಿಯಾಗಿಸಿಕೊಂಡಿದ್ದ ಈತ, ಪ್ಲಂಬರ್, ಎಲೆಕ್ಟ್ರಿಷಿಯನ್ ಸೋಗಿನಲ್ಲಿ ಅಪಾರ್ಟ್ ಮೆಂಟ್ ಗೆ ಪ್ರವೇಶ ಪಡೆದು ಕಳ್ಳತನ ಮಾಡುತ್ತಿದ್ದ.
ವರದಿ: ಪ್ರದೀಪ್ ಕಗ್ಗೆ
ಬೆಂಗಳೂರು (ಏ.22): ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್. ಕಳ್ಳತನ ಮಾಡಿದ ಮೇಲೆಯೂ ಮನೆ ಮಾಲೀಕರಿಗೂ ತಿಳಿಯದಂತೆ ಸೈಲೆಂಟ್ ಆಗಿ ಬಂದು ಕೃತ್ಯ ಎಸಗುತ್ತಿದ್ದ ಖತರ್ ನಾಕ್ ಆರೋಪಿಯು ಸಂಜಯ್ ನಗರ ಪೊಲೀಸರ (Sanjay Nagar Police) ಅತಿಥಿಯಾಗಿದ್ದಾನೆ.
ತಮಿಳುನಾಡು (Tamil Nadu) ಮೂಲದ ಇಸಯ್ ರಾಜ್ (Isai Raj) ಬಂಧಿತ ಕಳ್ಳ. ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ (AmruthHalli) ವಾಸವಾಗಿದ್ದ. ಜೀವನಕ್ಕಾಗಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಡ್ರಗ್ಸ್ ವ್ಯಾಮೋಹಿಯಾಗಿದ್ದ ಈತನ ವಿರುದ್ಧ ಸಂಪಿಗೆಹಳ್ಳಿ (Sampige Halli) ಹಾಗೂ ಯಲಹಂಕ (Yalhanka) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್ ಸೆಂಟರ್ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ ಇಸಯ್ ರಾಜ್ ಗೆ ಹೊಳೆದಿದ್ದ ಕಳ್ಳತನ ದಾರಿ.
ಹೌದು ಹಣಕ್ಕಾಗಿ ಕಳ್ಳತನ ಮಾಡಲು ಪ್ಲ್ಯಾನ್ ರೂಪಿಸಿಕೊಂಡು ಅಪಾರ್ಟ ಮೆಂಟ್ ಗಳನ್ನೇ ಗುರಿಯಾಗಿಸಿಕೊಂಡಿದ್ದ. ಪ್ಲಂಬರ್, ಎಲೆಕ್ಟ್ರಿಷಿಯನ್ ಸೋಗಿನಲ್ಲಿ ಅಪಾರ್ಟ್ ಮೆಂಟ್ ಗೆ ಪ್ರವೇಶ ಪಡೆಯುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಯನ್ನ ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್ ಮೆಂಟ್ ನ ಟೆರೇಸ್ ನಲ್ಲಿ ಉಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ.
ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ. ಕಳ್ಳತನ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ ಅನುಮಾನ ಬರುವುದಾಗಿ ಭಾವಿಸಿ ಆ ರಾತ್ರಿ ಟೇರೆಸ್ ನಲ್ಲಿ ಉಳಿದುಕೊಂಡು ಮರು ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರು ಬರುವುದನ್ನ ಕಂಡು ಅವರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದ.
ಅದೇ ರೀತಿ ಕಳೆದ ಮಾರ್ಚ್ ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಬಾಲರಾಜ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳು ತಾಂತ್ರಿಕವಾಗಿ ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ ಗಳ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Hubballi Riot: ಲಾರಿ ಚಾಲಕನಾಗಿದ್ದ ವಸೀಮ್ ಪಠಾಣ್ ಆಝಾನ್ ಉದ್ಘೋಷಕನಾಗಿದ್ಹೇಗೆ.?
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಕಳ್ಳತನದ ಪ್ರಕರಣದಲ್ಲಿ ಚಿನ್ನಾಭರಣ ಮಳಿಗೆಯೊಂದಕ್ಕೆ(Jewelry Shop) ಪಕ್ಕದ ಕಟ್ಟಡದಿಂದ ಗೋಡೆ ಕೊರೆದು ಕನ್ನ ಹಾಕಿ 5 ಕೆ.ಜಿ. ಚಿನ್ನ(Gold) ದೋಚಿ, ಕಿಲಾಡಿ ಖದೀಮರು ಪರಾರಿಯಾಗಿರುವ ಘಟನೆ ಜೆ.ಪಿ.ನಗರ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ನಗರದ 1ನೇ ಹಂತದ ‘ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ' ಕನ್ನ ಹಾಕಿದ್ದು, ಪಕ್ಕದ ಕಟ್ಟಡದಲ್ಲಿ ನೆಲೆಸಿದ್ದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯನ್ನು ಜೆ.ಪಿ.ನಗರ ಪೊಲೀಸರು(Police) ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಜ್ಯುವೆಲರ್ಸ್ ಮಳಿಗೆಗೆ ದುಷ್ಕರ್ಮಿಗಳು ಗೋಡೆ ಕೊರೆದು ಚಿನ್ನಾಭರಣ ದೋಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!
ಜೆ.ಪಿ.ನಗರದ ನಿವಾಸಿ ಕೆ.ರಾಜು ದೇವಾಡಿಗ, 10 ವರ್ಷಗಳಿಂದ ಜೆ.ಪಿ.ನಗರದ 1ನೇ ಹಂತದ 14ನೇ ಕ್ರಾಸ್‌ನಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ‘ಪ್ರಿಯದರ್ಶಿನಿ’ ಹೆಸರಿನ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದಾರೆ. ಈ ಜ್ಯುವೆಲರ್ಸ್ ಅಂಗಡಿಗೆ ಹೊಂದಿಕೊಂಡೇ ಮತ್ತೊಂದು ಎರಡು ಅಂತಸ್ತಿನ ಕಟ್ಟಡವಿದ್ದು, ಇದರ ಎರಡನೇ ಮಹಡಿಯಿಂದಲೇ ಕಳ್ಳರು ಕನ್ನ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
