ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!
* 30 ವರ್ಷದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ
* ದಾಳಿ ನಡೆದಾಗ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇದ್ದಳು
* ದಾಳಿಯ ವೇಳೆ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನ
ನವದೆಹಲಿ(ಏ.22): ನೈಋತ್ಯ ದೆಹಲಿಯ ಸಾಗರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 30 ವರ್ಷದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ದಾಳಿ ನಡೆದಾಗ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇದ್ದಳು. ದಾಳಿಯ ವೇಳೆ ಮಹಿಳೆಯೂ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾಳೆ. ಆಕೆ ಓಡಿಹೋಗಿ ಬೇರೊಬ್ಬರ ಮನೆಗೆ ನುಗ್ಗಲು ಮುಂದಾದಾಗ ದಾಳಿಕೋರನು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಮೃತ ಮಹಿಳೆಯನ್ನು ಆರತಿ ಎಂದು ಗುರುತಿಸಲಾಗಿದೆ. ಅವಳು ಪಶ್ಚಿಮ ಸಾಗರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಮಹಿಳೆಯನ್ನು ಚಾಕುವಿನಿಂದ ಕೊಂದವನು ಜ್ಞಾನಿ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ನೈರುತ್ಯ ಜಿಲ್ಲಾ ಡಿಸಿಪಿ ಮನೋಜ್ ಸಿ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಪೊಲೀಸ್ ತಂಡ ಸಮೀಪದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ವೇಳೆ ಜನರ ವಿಚಾರಣೆಯ ಮೇರೆಗೆ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳು ಸಿಕ್ಕಿಬೀಳುತ್ತಾರೆ ಎಂದು ಪೊಲೀಸರು ನಂಬಿದ್ದಾರೆ. ಸದ್ಯಕ್ಕೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಸರ್‌ಫ್ರೈಸ್ ಇದೆ ಎಂದು ಕರೆದು ಯುವಕನ ಕತ್ತು ಕೊಯ್ದ ಯುವತಿ
ಹೈದರಾಬಾದ್: ತನ್ನ ಹೆತ್ತವರು ಆಯ್ಕೆ ಮಾಡಿದ ಯುವಕನನ್ನು ಮದುವೆಯಾಗಲು ಇಷ್ಟವಿಲ್ಲದ ಯುವತಿಯೊಬ್ಬಳು ಆತನನ್ನು 'ಸರ್ಪ್ರೈಸ್ ಮೀಟ್' ಎಂದು ಕರೆದು ಬಳಿಕ ಆತನ ಕತ್ತು ಕೊಯ್ದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಮದುವೆಯಾಗಬೇಕಿದ್ದ ಯುವತಿಯಿಂದ ಹಲ್ಲೆಗೊಳಗಾದ ಯುವಕ ರಾಮು ನಾಯ್ಡು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ( Council of Scientific & Industrial Research) (CSIR) ನಲ್ಲಿ ವಿಜ್ಞಾನಿಯಾಗಿದ್ದಾರೆ (scientist). ಘಟನೆಯ ಬಳಿಕ ಕುತ್ತಿಗೆಯಲ್ಲಾದ ಆಳವಾದ ಗಾಯದ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ವಿಶಾಖಪಟ್ಟಣಂನ (Visakhapatnam) ಚೋಡವರಂನಲ್ಲಿ(Chodavaram) ಈ ಘಟನೆ ನಡೆದಿದೆ. ರಾಮು ನಾಯ್ಡು (Ramu Naidu) ಮತ್ತು ಪುಷ್ಪಾ (Pushpa) ಮುಂದಿನ ತಿಂಗಳು ಮದುವೆಯಾಗಬೇಕಿತ್ತು. 22 ವರ್ಷದ ಪುಷ್ಪಾ ಶಾಲೆ ಬಿಟ್ಟ ವಿದ್ಯಾರ್ಥಿನಿಯಾಗಿದ್ದು, ರಾಮು ಅವರನ್ನು ಭೇಟಿಯಾಗುವ ಮುನ್ನ ಆಕೆ ಮೂರು ಚಾಕುಗಳನ್ನು ಖರೀದಿಸಿದ್ದಳು. ಇವರಿಬ್ಬರ ಮದುವೆಯನ್ನು ಮೇ 29 ರಂದು ಮಾಡಲು ಪೋಷಕರು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಕ್ರಿಮಿನಲ್ ಇತಿಹಾಸವನ್ನು ಹೊಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್ ಗೌತಮಿ (S Gowthami) ಹೇಳಿದ್ದಾರೆ.
ಹುಡುಗಿ ಚುಡಾಯಿಸಿದ ಅಂತ ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ ಪಾಪಿ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸರ್‌ಫ್ರೈಸ್ ಇದೆ ಎಂದು ಹೇಳಿ ವಧು ಪುಷ್ಪಾ ತಾನು ವಿವಾಹವಾಗಬೇಕಿದ್ದ ರಾಮು ನಾಯ್ಡುವನ್ನು ಬೆಟ್ಟದ ತುದಿಗೆ ಕರೆದಿದ್ದಳು. ಹೀಗೆ ತಾನು ಮದುವೆಯಾಗುವ ಹೆಣ್ಣು ಏನು ಸರ್‌ಫ್ರೈಸ್ ನೀಡಬಹುದು ಎಂಬ ಕುತೂಹಲದಿಂದ ಬೆಟ್ಟವೇರಿದ ರಾಮುವಿಗೆ ಅಲ್ಲಿ ಆಘಾತ ಕಾದಿತ್ತು. ಆಕೆ ಬೆಟ್ಟ ಮೇಲಿದ್ದ ದೇವಸ್ಥಾನದ ಬಳಿ ಬಂದ ರಾಮುವಿನ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಗಂಭೀರವಾಗಿ ಗಾಯಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.