Asianet Suvarna News Asianet Suvarna News

ಶಬನಂ ಮೇಲೆ ಗುಂಡಿನ ದಾಳಿ: ರವಿಪೂಜಾರಿ ಸಹಚರ ಸುರೇಶ್‌ಗಾಗಿ ಮುಂಬೈಗೆ ಸಿಸಿಬಿ

 ಬೆಂಗಳೂರು ನಗರದಲ್ಲಿ ನಡೆದಿದ್ದ 2007ರ ಶಬನಂ ಡೆವಲಪ​ರ್‍ಸ್ನ ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ಕುಖ್ಯಾತ ಪಾತಕಿ ರವಿಪೂಜಾರಿ ಸಹಚರ ಸುರೇಶ್‌ ಪೂಜಾರಿಯನ್ನು ವಶಕ್ಕೆ ಪಡೆಯುವ ಸಲುವಾಗಿ ಮುಂಬೈಗೆ ಸಿಸಿಬಿ ತಂಡ ತೆರಲಿದೆ.

Bengaluru Police seek Mumbai gangster Suresh pujari in  Shabnam shot case gow
Author
First Published Sep 17, 2022, 10:36 PM IST

ಬೆಂಗಳೂರು (ಸೆ.17): ನಗರದಲ್ಲಿ ನಡೆದಿದ್ದ 2007ರ ಶಬನಂ ಡೆವಲಪ​ರ್‍ಸ್ನ ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ಕುಖ್ಯಾತ ಪಾತಕಿ ರವಿಪೂಜಾರಿ ಸಹಚರ ಸುರೇಶ್‌ ಪೂಜಾರಿಯನ್ನು ವಶಕ್ಕೆ ಪಡೆಯುವ ಸಲುವಾಗಿ ಮುಂಬೈಗೆ ಸಿಸಿಬಿ ತಂಡ ತೆರಲಿದೆ. ಕಳೆದ ಡಿಸೆಂಬರ್‌ನಲ್ಲಿ ವಿದೇಶದಲ್ಲಿ ನೆಲೆಸಿದ್ದ ಪೂಜಾರಿ ಶಿಷ್ಯ ಸುರೇಶ್‌ ಪೂಜಾರಿಯನ್ನು ಮುಂಬೈ ಪೊಲೀಸರು ಬಂಧಿಸಿ ಕರೆತಂದಿದ್ದರು. ಮುಂಬೈ ಮಹಾನಗರದಲ್ಲಿ ನಡೆದಿದ್ದ ಹಲವು ಅಪರಾಧ ಕೃತ್ಯಗಳಲ್ಲಿ ಪಾತ್ರದ ಹಿನ್ನಲೆಯಲ್ಲಿ ಆತನನನ್ನು ಮುಂಬೈ ಪೊಲೀಸರು ಸುದೀರ್ಘ ತನಿಖೆಗೊಳಪಡಿಸಿದ್ದರು. ಈಗ ಅವರ ಬಹುತೇಕ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ಬೆಂಗಳೂರಿನ ಕೊಲೆ ಪ್ರಕರಣಗಳ ಸಂಬಂಧ ಸುರೇಶ್‌ ಪೂಜಾರಿಯನ್ನು ವಶಕ್ಕೆ ಪಡೆಯಲು ಸಿಸಿಬಿ ತಂಡ, ನ್ಯಾಯಾಲಯದಿಂದ ಬಾಡಿ ವಾರೆಂಟ್‌ ಪಡೆದು ತೆರಳಿದೆ. ದಶಕಗಳಿಂದ ರವಿ ಪೂಜಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುರೇಶ್‌, ವಿದೇಶದಲ್ಲಿದ್ದ ರವಿ ಸೂಚನೆ ಮೇರೆಗೆ ಬೆಂಗಳೂರು, ಮಂಗಳೂರು ಹಾಗೂ ಮುಂಬೈ ಸೇರಿದಂತೆ ವಿವಿಧೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದ.2007ರ ಫೆಬ್ರವರಿ 15 ರಂದು ರವಿಪೂಜಾರಿ ಸೂಚನೆ ಮೇರೆಗೆ ಬೆಂಗಳೂರಿನ ಶಬನಂ ಡೆವಲಪ​ರ್‍ಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ಹತ್ಯೆಗೀಡಾಗಿದ್ದರು. ಆ ದಿನ ನಗರದ ಹೋಟೆಲ್‌ವೊಂದರಲ್ಲಿ ಪ್ರವೀಣ್‌ ರಾವ್‌ ಹೆಸರಿನ ನಕಲಿ ದಾಖಲೆ ನೀಡಿ ವಾಸ್ತವ್ಯ ಹೂಡಿ ಗುಂಡಿನ ದಾಳಿಯನ್ನು ಸುರೇಶ್‌ ಉಸ್ತುವಾರಿ ವಹಿಸಿದ್ದ. ಈ ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆತನ ಪತ್ತೆ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು ಪ್ರಯೋಜನವಾಗಿರಲಿಲ್ಲ.

ಈಗ ಮುಂಬೈ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಹಳೆಯ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಲು ಸಿಸಿಬಿ ನಿರ್ಧರಿಸಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ರವಿಪೂಜಾರಿ ವಿರುದ್ಧ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ. ನ್ಯಾಯಾಲಯದ ಬಾಡಿ ವಾರೆಂಟ್‌ ಪಡೆದು ಮುಂಬೈಗೆ ತೆರಳಿದ ಸಿಸಿಬಿ ತಂಡವು, ಸುರೇಶ್‌ ಪೂಜಾರಿ ವಶಕ್ಕೆ ನೀಡುವಂತೆ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮುಂದಿನ ವಾರದಲ್ಲಿ ಆರೋಪಿಯನ್ನು ಕರೆ ತರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ನಾಟಕ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ
ಬೆಂಗಳೂರು: ಅಪಘಾತದ ಡ್ರಾಮಾ ಮಾಡಿ ವಾಹನ ಸವಾರರ ಜತೆಗೆ ಜಗಳ ತೆಗೆದು ಹಣ ಹಾಗೂ ಮೊಬೈಲ್‌ ಫೋನ್‌ ಸುಲಿಗೆ ಮಾಡುತ್ತಿದ್ದ ಇಬ್ಬರು ಖತರ್ನಾಕ್‌ ಸುಲಿಗೆಕೋರರನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ವಶಕ್ಕೆ

ಶಿವಾಜಿನಗರದ ನೆಹರುಪುರಂ ನಿವಾಸಿ ಮುಜಾಮಿಲ್‌ ಹುಸೇನ್‌ ಅಲಿಯಾಸ್‌ ಚೋರ್‌(27) ಮತ್ತು ಜೆ.ಸಿ.ನಗರದ ಮಾರಪ್ಪ ಗಾರ್ಡನ್‌ ನಿವಾಸಿ ಪೈಜ್‌ ಹುಸೇನ್‌(25) ಬಂಧಿತರು. ಆರೋಪಿಗಳಿಂದ 2.50 ಲಕ್ಷ ರು. ಮೌಲ್ಯದ 11 ಮೊಬೈಲ್‌ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಲ್ಲೇ ರವಿ ಪೂಜಾರಿ ವಿಚಾರಣೆಗೆ ಅನುಮತಿ

ಆರೋಪಿಗಳು ನಗರದ ವಿವಿಧೆಡೆ ದ್ವಿಚಕ್ರ ವಾಹನದಲ್ಲಿ ಹೋಗುವವರನ್ನು ಟಾರ್ಗೆಟ್‌ ಮಾಡಿ, ಇವರೇ ತಮ್ಮ ದ್ವಿಚಕ್ರ ವಾಹನದಲ್ಲಿ ಡಿಕ್ಕಿ ಮಾಡುತ್ತಿದ್ದರು. ಈ ವೇಳೆ ಜಗಳ ತೆಗೆದು ದ್ವಿಚಕ್ರ ವಾಹನ ದುರಸ್ತಿಗೆ ಹಣ ಕೊಡುವಂತೆ ದಬಾಯಿಸಿ ಕೇಳುತ್ತಿದ್ದರು. ಸವಾರ ಹಣ ಕೊಡಲು ನಿರಾಕರಿಸಿದರೆ, ಚಾಕು ತೆಗೆದು ಬೆದರಿಸಿ ಹಣ ಹಾಗೂ ಮೊಬೈಲ್‌ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಹಿಂಬಾಲಿಸಿ ಮೊಬೈಲ್‌ ಕಸಿದು ಪರಾರಿಯಾಗುತ್ತಿದ್ದರು. ಕದ್ದ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios