* ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಈತ ಹೀಗಾ ಮಾಡೋದು....* ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸರಗಳ್ಳತನ * ಬೆಂಗಳೂರು ಪೊಲೀಸರಿಂದ ಖತರ್ನಾಕ್ ಕಳ ಬಂಧನ

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್. ಬೆಂಗಳೂರು

ಬೆಂಗಳೂರು, (ಏಪ್ರಿಲ್.04) :
ಬೆಂಗಳೂರಿನಲ್ಲಿ ಸರಗಳ್ಳತ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಯಶಸ್ವಿಯಾಗಿದ್ದಾರೆ. ಸರಗಳ್ಳ (Chain Snatcher) ಉಮೇಶ್ ಖತ್ತಿಕ್ ಈತ ಮೂಲತಹ ರಾಜಸ್ಥಾನದವನು(Rajasthan). ಒಂಟಿ‌ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ರೇ, ಕುತ್ತಿಗೆಯಲ್ಲಿದ್ದ ಸರ ಎಗರಿಸ್ತಿದ್ದ. ಈತ ಕೇವಲ ಬೆಂಗಳೂರಲ್ಲಿ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲೂ ತನ್ನ ಕೈಚಳಕ ತೋರಿದ್ದಾನೆ.

Add Asianetnews Kannada as a Preferred SourcegooglePreferred

ಮಾಡೋದು ಸರಗಳ್ಳತನವಾದ್ರೂ ಓಡಾಡೋದು ಮಾತ್ರ ಫ್ಲೈಟ್ ನಲ್ಲೇ. ಅವತ್ತು ಡಿಸೆಂಬರ್ 26, 2021 ಬೆಂಗಳೂರಿಗೆ ಬಂದಿದ್ದ. ಹೀಗೆ ಬಂದ ಆರೋಪಿ ಉಮೇಶ ಮಲ್ಲೇಶ್ವರಂನಲ್ಲಿ ಸ್ಕೂಟಿ ಕದ್ದಿದ್ದ. ಈತ ಸ್ಕೂಟಿ ಮಾತ್ರ ಕದಿಯೋಕು ಕಾರಣವೆನೆಂದ್ರೆ ಗೇರ್ ಗಾಡಿ ಓಡಿಸೋಕೆ ಬರಲ್ವಂತೆ. ಕದ್ದ ಬೈಕ್ ನಲ್ಲೇ ಮೂರು ಕಡೆ ಸರಗಳ್ಳತನ ಮಾಡಿ ಅದೇ ರೈಲಿನಲ್ಲಿ ಎಸ್ಕೇಪ್ ಅಗಿ ಹೈದ್ರಾಬಾದ್ ಗೆ ಹೋಗಿದ್ದ. ಅಲ್ಲಿ 8 ಕಡೆ ಚೈನ್ ಸ್ನಾಚ್ ಮಾಡಿದ್ದ. 

Udupi ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!

ಬೆಂಗಳೂರಲ್ಲೂ ಕೆಲವೇ ನಿಮಿಷಗಳ ಅಂತರದಲ್ಲಿ ಸರಣಿ ಸರಗಳ್ಳತನ‌ ನಡೆದಿತ್ತು. ಇದರ ಬಗ್ಗೆ ಪೊಲೀಸರೂ ವಿಪರೀತ ತಲೆ ಕೆಡಿಸಿಕೊಂಡಿದ್ರು. ಈತನ ಸಂಪೂರ್ಣ ಮಾಹಿತಿ ಕಲೆ ಹಾಕಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ರಾಜಸ್ಥಾನಕ್ಕೆ ತೆರಳಿ ಬಂಧಿಸಿ ಕರೆತಂದಿದ್ದಾರೆ. ಈತ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಈ ಹಿಂದೆ ಪುಟ್ಟೇನಹಳ್ಳಿ , ಮಾರತ್ ಹಳ್ಳಿಯಲ್ಲೂ ಕೂಡ ಸರಗಳ್ಳತ ಮಾಡಿ ರಾಜಸ್ಥಾನಕ್ಕೆ ಎಸ್ಕೇಪ್ ಆಗಿದ್ದ. 

ರಾಜಸ್ಥಾನದಲ್ಲಿ ಈತನ ಮೇಲೆ 18 ಸರಗಳ್ಳತನ ಪ್ರಕರಣಗಳು ದಾಖಲಿಗಿವೆ.10ಕ್ಕೂ ಹೆಚ್ಚು ಬಾರಿ ರಾಜಸ್ಥಾನ ಪೊಲೀಸರು ಈತನನ್ನ ಬಂಧಿಸಿದ್ರು. ಆದ್ರೆ ಈ ಅಸಾಮಿ ಅದೆಂತಾ ಖತರ್ನಾಕ್ ಅಂದ್ರೆ ಪೊಲೀಸ್ ಕಸ್ಟಡಿಯಿಂದ ಬರೋಬ್ಬರಿ ಏಳು ಬಾರಿ ತಪ್ಪಿಸಿಕೊಂಡಿದ್ನಂತೆ. ಅಹಮದಬಾದ್ ನಲ್ಲೂ ಈತನ ಮೇಲೆ ಹಲವು ಕೇಸ್ ಗಳು ದಾಖಲಾಗಿವೆ. ಇನ್ನು ಸರಗಳ್ಳವಿಗೆ ಕಾರಣ ಆತನ ಪತ್ನಿಯಂತೆ. ಈ ಹಿಂದೆ ಬಾಲಕಿಯನ್ನ ಪ್ರೀತಿಸಿ ಮದ್ವೆಯಾಗಿದ್ದ. ಆಕೆಗೆ 18 ತುಂಬಿರದ ಹಿನ್ನಲೆ ಆಕೆಯ ಮನೆಯವರು ಪೋಕ್ಸೋ ಪ್ರಕರಣ ದಾಖಲಿಸಿದ್ರು. ಈ ಕೇಸಿನಲ್ಲಿ ಒಂದಷ್ಟು ದಿನ ಜೈಲಿಗೆ ಹೋಗಿ ಬಂದವನು ಮತ್ತೆ ಆಕೆಯನ್ನೇ ಮದ್ವೆಯಾಗಿದ್ದ.

ಅಷ್ಟೊಂದು ಪ್ರೀತಿಸುತ್ತಿದ್ದ ಉಮೇಶ ಆಕೆಯನ್ನ ಚೆನ್ನಾಗಿ ನೋಡಿಕೊಳ್ಳುವ ಉದ್ದೇಶದಿಂದ ಬೇರೆ ಬೇರೆ ರಾಜ್ಯಕ್ಕೆ ಹೋಗಿ ಸರಗಳವು ಮಾಡಿ ಅದರಿಂದ ಬಂದ ಹಣದಿಂದ ಪತ್ನಿಯನ್ನ ಜಾಲಿರೈಡ್ ಕರೆದುಕೊಂಡು ಹೋಗ್ತಿದ್ನಂತೆ. ಒಟ್ಟಾರೆ ಹೆಂಡ್ತಿ ಮೇಲಿನ ಪ್ರೀತಿ.. ಇವನ ಐಷರಾಮಿ ಜೀವನದಿಂದಾಗಿ ಈಗ ಕಂಬಿ ಹಿಂದೆ ಸೇರಿದ್ದಾನೆ. ಸದ್ಯ ಕೆಲವೇ ದಿನಗಳಲ್ಲಿ ಪುಟ್ಟೇನಹಳ್ಳಿ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.