ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ‌ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಆರೋಪಿ ಅರೆಸ್ಟ್

* ಕರ್ನಾಟಕದಲ್ಲಿ PSI ನೇಮಕಾತಿ ಅಕ್ರಮ ಪ್ರಕರಣದ ಬೆನ್ನಲ್ಲೇ ಮತ್ತೊಂದು ಅಕ್ರಮ
* ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲೂ ಅಕ್ರಮದ ವಾಸನೆ
* ಸೌಮ್ಯ ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸ್ರು

Bengaluru Police Arrests Mysuru lady In assistant Professors recruitment scam rbj

ವರದಿ : ಮಧು.ಎಂ.ಚಿನಕುರಳಿ

ಮೈಸೂರು, (ಏ.25):
ಕರ್ನಾಟಕದಲ್ಲಿ PSI ನೇಮಕಾತಿ ಅಕ್ರಮ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಬಗೆದಷ್ಟು ಬಣ್ಣ ಬಯಲಾಗುತ್ತಿದೆ. ಇದರ ಮಧ್ಯೆ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮದ ವಾಸನೆ ಬಂದಿದ್ದು, ಈ ಸಂಬಂಧ ಆರ್.ಸೌಮ್ಯ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

2022ರ ಮಾರ್ಚ್ ತಿಂಗಳಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೆಇಎ ದೂರಿನನ್ವರ ಮೈಸೂರು ವಿಶ್ವವಿದ್ಯಾನಿಲಯದ ಭೂಗೋಳ ಶಾಸ್ತ್ರ ವಿಭಾಗದ ಆರ್.ಸೌಮ್ಯರನ್ನು ಬೆಂಗಳೂರಿನ ಮಲ್ಲೇಶ್ವರ ಪೋಲಿಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ಕಡೆ ಸೌಮ್ಯ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ಇತ್ತ ವಿಶ್ವ ವಿದ್ಯಾನಿಲಯದ ಕಡೆಯಿಂದಲೂ ತಕ್ಷಣ ಕ್ರಮ ವಹಿಸುವುದಾಗಿ ಮೈಸೂರು ವಿವಿ ಕುಲ ಸಚಿವ ಶಿವಪ್ಪ ಹೇಳಿದ್ದಾರೆ.  ಈ ಬಗ್ಗೆ ಕಾನೂನು ಸಲಹೆಗಾರರ ಜೊತೆ ಚರ್ಚೆ ಮಾಡಲಾಗಿದ್ದು, ಕುಲಪತಿಗಳ ನಿರ್ದೇಶನದ ಮೇಲೆ ಕ್ರಮ ಜರುಗಿಸಲಾಗುತ್ತೆ ಎಂದಿದ್ದಾರೆ.

KEA Assistant Professor Exam: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷಾ ಕೇಂದ್ರಕ್ಕೆ ಅಶ್ವತ್ಥನಾರಾಯಣ ಭೇಟಿ

ನಮ್ಮ ಪಾತ್ರ ಏನೂ ಇಲ್ಲ.
1,200 ಸಹಾಯ ಪ್ರಾಧ್ಯಾಪಕ ಹುದ್ದೆಗೆ ನಡೆದ ಪರೀಕ್ಷೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಹಿಸಿಕೊಂಡಿತ್ತು. ಇದರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪಾತ್ರ ಏನು ಇಲ್ಲ ಎಂದು ಕುಲಸಚಿವರು ಸ್ಪಷ್ಟಪಡಿಸಿದರು.

ಸೌಮ್ಯ ಕೇವಲ ಸಂಯೋಧನಾ  ವಿದ್ಯಾರ್ಥಿ.
ಸಹಾಯ ಪ್ರಾಧ್ಯಾಪಕ ಪರೀಕ್ಷೆ ಅಕ್ರಮದಲ್ಲಿ ಸಿಕ್ಕಿಬಿದ್ದರುವ ಸೌಮ್ಯ.ಆರ್, ಮೈಸೂರು ವಿವಿಯ ಭೂಗೋಳಶಾಸ್ತ ವಿಭಾಗದಲ್ಲಿ ನಾಲ್ಕು ತಿಂಗಳು ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅವರಿಗೆ ಯುಜಿಸಿಯಿಂದ ಪೋಸ್ಟಲ್ ಡಾಕ್ಟರೇಟ್ ಫೆಲೋಶಿಪ್ ಬಂದ ನಂತರ ಅವರು ಕೆಲಸ ಬಿಟ್ಟಿದ್ದರು. ಆದರೆ ಅದೇ ವಿಭಾಗ ಡಾ.ನಾಗರಾಜ್ ಬಳಿ ಪಿಡಿಎಫ್ ಕೆಲಸ ಮುಂದುವರಿಸಿದ್ದಾರೆ‌. ಇವರಿಗೆ ಮೈಸೂರು ವಿವಿ 2021ರಲ್ಲಿ ಪಿಹೆಚ್‌ಡಿ ನೀಡಿದೆ.

ಇನ್ನು ಪರೀಕ್ಷೆ ಅಕ್ರಮದ ತಮ್ಮ ವಿವಿ ವಿದ್ಯಾರ್ಥಿನಿ ಸಿಕ್ಕಿಬಿದ್ದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಲ ಸಚಿವ ಶಿವಪ್ಪ, ಪರೀಕ್ಷೆ ಎನ್ನುವುದು ಸಂಸ್ಥೆಗೆ ಹೃದಯ ಭಾಗ ಇದ್ದಂತೆ. ನಮ್ಮ ವಿವಿಯು ಯಾವುದೇ ಹಂತದಲ್ಲೂ ಕನಿಷ್ಠ ಇನ್ವಾಲ್‌ಮೆಂಟ್ ಇದ್ದರೂ ಸೂಕ್ತ ಕ್ರಮ ಜರುಗಿಸಲಾಗುತ್ತೆ ಎಂದು ಹೇಳಿದರು.

 ಇಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಟ್ಟಾರೆ ಜವಾಬ್ದಾರಿ ತೆಗೆದುಕೊಂಡಿದೆ. ನಮ್ಮ‌ ವಿಶ್ವವಿದ್ಯಾಲಯದ ಯಾವುದೇ ಪಾತ್ರ ಇರುವುದಿಲ್ಲ. ವಿವಿಯಲ್ಲಿ ಎಲ್ಲಾ ವಿಭಾಗಗಳಲ್ಲೂ ಹಿರಿಯ ಪ್ರಾಧ್ಯಾಪಕರು ಇರುವುದರಿಂದ ಯುಪಿಎಸ್ಸಿ, ಕೆಪಿಎಸ್ಸಿ, ಪರೀಕ್ಷಾ ಪ್ರಾಧಿಕಾರ ಮಾಡುವ ಟೇಲರ್ ಮೇಡ್ ಎಕ್ಸಾಂಗಳಿಗೂ ಇವರ ಸೇವೆ ಇರುತ್ತದೆ. ಪ್ರಶ್ನೆ ಪತ್ರಿ ಸೆಟ್ ಮಾಡೋದು, ಮೌಲ್ಯ ಮಾಪನ ಮಾಡುವ ಕೆಲಸವನ್ನು ಇವರು ಮಾಡುತ್ತಾರೆ. ರಾಜ್ಯದ, ದೇಶದ ನುರಿತ ಪ್ರಾಧ್ಯಾಪಕರೂ ಇದರಲ್ಲಿ ಇರುತ್ತಾರೆ. ಈ ಪರೀಕ್ಷೆಯಲ್ಲಿ ನಮ್ಮವರು ಯಾರಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

18 ಪ್ರಶ್ನೋತ್ತರಗಳು.
ಸಹಾಯಕ ಪ್ರಧ್ಯಾಪಕರ ಪರೀಕ್ಷೆ ಪೇಪರ್ ಲೀಕ್ ಪ್ರಕರಣದ ಆರೋಪಿ ಸೌಮ್ಯ ಜಿಐಎಸ್ ಅಂಡ್ ಅಗ್ರಿಕಲ್ಚರ್ ಜಿಯಾಗ್ರಫಿಯಲ್ಲಿ ಪಿಹೆಚ್‌ಡಿ ಮಾಡಿದ್ದಾರೆ. ಸದ್ಯ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ ಸೌಮ್ಯ, ಮಾರ್ಚ್‌ನಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಬರೆದಿದ್ದರು. ಮೈಸೂರಿನ ಕುವೆಂಪು ನಗರದ ಪಿಯುಸಿ ಕಾಲೇಜು ಸೆಂಟರ್‌ನಲ್ಲಿ ಪರೀಕ್ಷೆ ಬರೆದಿದ್ದ ಅವರು, ಪರೀಕ್ಷೆ ಆರಂಭದ 1 ಗಂಟೆ ಮುಂಚಿತವಾಗಿ ಗೆಳತಿ ಒಬ್ಬಳಿಗೆ 18 ಪ್ರಶ್ನೋತ್ತರಗಳ ಮಾಹಿತಿ ವಾಟ್ಸ್ ಅಪ್ ನಲ್ಲಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ಅದರೆ ಮಾಹಿತಿಯನ್ನು ಗೆಳತಿ ಬೆಂಗಳೂರಿನ ರಾಮಕೃಷ್ಣ ಎಂಬುವರಿಗೆ ಶೇರ್ ಮಾಡಿದ್ದಾರೆ. ಹಂತಿಮವಾಗಿ  ರಾಮಕೃಷ್ಣ ಎಂಬುವರಿಂದ ಕೆಇಎಗೆ ದೂರು ನೀಡಿದ್ದರು ಎನ್ನಾಗಿದೆ.

ಅಭ್ಯರ್ಥಿ ನೀಡಿದ ದೂರಿನನ್ವಯ ಪೊಲೀಸರಿಗೆ ದೂರು
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಭೂಗೋಳಶಾಸ್ತ್ರದ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಕೆಇಎ ಬೆಂಗಳೂರಿನ ಮಲ್ಲೇಶ್ವರ ಪೊಲೀಸರಿಗೆ ದೂರು ನೀಡಿತ್ತು. 11.04.2022 ರಂದು ದೂರು ನೀಡಿದ್ದು, ದೂರಿನ‌ ಸಾರಾಂಶ ಈ ರೀತಿ ಇದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ 14.03, 2022ರಂದು ನಡೆಸಿರುವ ಭೂಗೋಳಶಾಸ್ತ್ರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 18 ಪ್ರಶ್ನೆಗಳು ಶ್ರೀಮತಿ ಸೌಮ್ಯ.ಆರ್ ರವರ ಮೊಬೈಲ್ ಸಂಖ್ಯೆಯಿಂದ ಬೇರೆ ಬೇರೆ ಮೊಬೈಲ್‌ಗೆ whatsapp ಮೂಲಕ ಬೆಳಿಗ್ಗೆ 8.30ರ ವೇಳೆಗೆ ರವಾನೆ ಆಗಿರುವುದಾಗಿ ದೂರು‌ ಬಂದಿರುವ ಹಿನ್ನಲೆಯಲ್ಲಿ ಕೂಲಂಕುಷವಾಗಿ ತನಿಖೆಯನ್ನು ನಡೆಸುವಂತೆ ಕೋರಲಾಗಿತ್ತು. ದೂರಿನಲ್ಲಿ ಹೇಳಿರುವಂತ 18 ಪ್ರಶ್ನೆಗಳು ದಿನಾಂಕ. 14.03.2022ರಂದು ಬೆಳಿಗ್ಗೆ 8.30ಗೆ ಶ್ರೀಮತಿ ಸೌಮ್ಯ.ಆರ್ ರವರಿಂದ ರವಾನೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಕೋರಿದೆ. 

ಜೊತೆಗೆ ರವಾನಿಸಿರುವ ಒಟ್ಟು ಪ್ರಶ್ನೆಗಳ ಸಂಖ್ಯೆ ಎಷ್ಟು ಹಾಗೂ ಇದರಲ್ಲಿ ಭಾಗಿಯಾಗಿರುವವರ ಬಗ್ಗೆ ಕೂಡ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ಜರುಗಿಸಲು ಕೆಇಎ ನಿರ್ದೇಶಕರು ಕೋರಿದ್ದಾರೆ.

Latest Videos
Follow Us:
Download App:
  • android
  • ios