ಬೆಂಗಳೂರಿನಲ್ಲಿ ಕೇವಲ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಸ್ನೇಹಿತ!
ಸೈಬರ್ ಸೆಂಟರ್ ನಲ್ಲಿ ಸ್ನೇಹಿತರ ನಡುವೆ 50ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂನ್ 2022) : ಸೈಬರ್ ಸೆಂಟರ್ ನಲ್ಲಿ ಸ್ನೇಹಿತರ ನಡುವೆ 50ರೂಪಾಯಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.. ಕೇವಲ 50 ರೂಪಾಯಿಗಾಗಿ ಶಿವಮಾಧುನನ್ನು ಸ್ನೇಹಿತ ಅಂತಾನೂ ನೋಡೆ ಆರೋಪಿ ಶಾಂತ ಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ..
ಬೆಂಗಳೂರು ನಗರದಲ್ಲಿ ಕೇವಲ 50 ರೂಪಾಯಿ ಹಣಕ್ಕಾಗಿ ಸ್ನೇಹಿತನನ್ನು ಆತನ ಸ್ನೇಹಿತನೇ ಕೊಲೆ ಮಾಡಿರೋ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ ನಡೆದಿದೆ.. ಶಿವಮಾಧು ಎಂಬ 24 ವರ್ಷದ ಯುವಕನನ್ನ ಆತನ ಸ್ನೇಹಿತನೇ ಆದ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ..
ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು.. ಚಿಕ್ಕಂದಿನಿಂದ ಆಡಿ ಬೆಳೆದೋರು.. ಇದೇ ಕುರಬರಹಳ್ಳಿ ಸರ್ಕಲ್ ಬಳಿ ಹುಟ್ಟಿ ಬೆಳೆದೋರು ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಬಳಿ ಶಿಫ್ಟ್ ಆಗಿದ್ರು.. ಆದ್ರೂ ಹಳೇ ಅಡ್ಡ ಅಂತಾ ಆಗಾಗ ಈ ಏರಿಯಾ ಕಡೆ ಬರ್ತಿದ್ರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ರೆ, ಮೃತ ಶಿವಮಾಧು ಆಟೋ ಡ್ರೈವರ್ ಆಗಿದ್ದ. ಎಂದಿನಂತೆ ಕುರಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು ಶಾಂತಕುಮಾರ್ ಮತ್ತು ಸ್ನೇಹಿತರು ಗ್ರೌಂಡ್ ವೊಂದಕ್ಕೆ ಕ್ರಿಕೆಟ್ ಆಡಲು ಹೋಗಿದ್ದಾರೆ.
ಮಂಗಳೂರು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸರಕು ನೌಕೆ: ಕೋಸ್ಟ್‌ಗಾರ್ಡ್ ನಿಂದ 15 ಮಂದಿ
ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆ ರಾತ್ರಿ 7.30-8 ರ ಸುಮಾರಿಗೆ ಸರ್ಕಲ್ ಬಳಿ ಇರೋ ಸೈಬರ್ ಸೆಂಟರ್ ವೊಂದಕ್ಕೆ ಹೋಗಿದ್ರು.. ಈ ವೇಳೆ ಶಾಂತಕುಮಾರ್ ಜೋಬಿಂದ ಶಿವಮಾಧು 50ರೂಪಾಯಿ ತೆಗೆದಿದ್ದಾನೆ.. ಯಾಕೋ 50ರೂಪಾಯಿ ತಗೊಂಡ್ ಕೊಡು ಅಂತಾ ಕೇಳಿದ್ದ ಶಾಂತಕುಮಾರ್ ಗೆ ಶಿವಮಾಧು ಕೊಡಲ್ಲ ಎಂದಿದ್ದಾನೆ.. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು ಜೊತೆಯಲ್ಲೇ ತಂದಿದ್ದ ಚಾಕು ತಗೊಂಡು ಆರೋಪಿ ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಎಸ್ಕೇಪ್ ಆಗಿದ್ದಾನೆ.. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನ ಸ್ನೇಹಿತರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ರು.. ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ..
ಯೋಗ ಮಾಡುವವರ ರೀತಿ ಮೋದಿ ಸುತ್ತ ಕುಳಿತಿದ್ದ ಭದ್ರತಾ ಸಿಬ್ಬಂದಿ!
ಇನ್ನು ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹಾಗೂ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ರಿ.ಅಲ್ಲದೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.. ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.. ಇಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಆರೋಪಿ ಯಾಕೆ ಚಾಕು ಕ್ಯಾರಿ ಮಾಡ್ತಿದ್ದ..? ಈ ರೀತಿ ಡೆಲಿವರಿ ಬಾಯ್ ಗಳು ಚಾಕು ಕ್ಯಾರಿ ಮಾಡಿದ್ರೆ ಆರ್ಡರ್ ಮಾಡೋರಿಗೆ ಅದೆಷ್ಟು ಸೇಫ್ಟಿ ಅನ್ನೋ ಪ್ರಶ್ನೆ ಮತ್ತು ಆತಂಕ ಸದ್ಯ ಮೂಡ್ತಿದೆ.. ಎಲ್ಲವೂ ತನಿಖೆ ನಂತರವೇ ಹೊರ ಬರಬೇಕಿದೆ.