ಮಂಗಳೂರಿನ ಉಳ್ಳಾಲ ಬಳಿ ಅರಬ್ಬಿ ಸಮುದ್ರದಲ್ಲಿ ಸರಕು ನೌಕೆಯೊಂದು ಮಂಗಳವಾರ ಅಪಾಯಕ್ಕೆ ಸಿಲುಕಿದ್ದು, ಸಿರಿಯಾ ದೇಶಕ್ಕೆ ಸೇರಿದ 15 ಮಂದಿಯನ್ನು ಇಂಡಿಯನ್‌ ಕೋಸ್ಟ್‌ ಗಾರ್ಡ್‌ ನೌಕಾ ಸಿಬ್ಬಂದಿ  ರಕ್ಷಿಸಿದ್ದಾರೆ.

ಮಂಗಳೂರು (ಜೂನ್ 22): ಮಂಗಳೂರಿನ ಉಳ್ಳಾಲ ಬಳಿ ಅರಬ್ಬಿ ಸಮುದ್ರದಲ್ಲಿ ಸರಕು ನೌಕೆಯೊಂದು ಮಂಗಳವಾರ ಅಪಾಯಕ್ಕೆ ಸಿಲುಕಿದೆ. ಅದರಲ್ಲಿದ್ದ ಸಿರಿಯಾ ದೇಶಕ್ಕೆ ಸೇರಿದ 15 ಮಂದಿಯನ್ನು ಇಂಡಿಯನ್‌ ಕೋಸ್ಟ್‌ ಗಾರ್ಡ್‌ ನೌಕಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಅಪಾಯಕ್ಕೆ ಸಿಲುಕಿದ ಪ್ರಿನ್ಸಸ್‌ ಮಿರಾಲ್‌ ಹೆಸರಿನ ಸರಕು ನೌಕೆ ಮಂಗಳೂರು ಹಳೆ ಬಂದರಿನಿಂದ ಉಳ್ಳಾಲ ಕಡೆಗೆ 5.2 ಮೈಲಿ ದೂರದಲ್ಲಿ ಅಪಾಯಕ್ಕೆ ಸಿಲುಕಿ ಲಂಗರು ಹಾಕಿದೆ. ಈ ನೌಕೆ 8 ಸಾವಿರ ಟನ್‌ ಸ್ಟೀಲ್‌ ಕೋಲ್‌ನ್ನು ಹೊತ್ತು ಈಜಿಪ್‌್ಟನಿಂದ ಒಮಾನ್‌ಗೆ ಹೊರಟಿತ್ತು. ಈ ಮಧ್ಯೆ ಇಂಜಿನ್‌ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಬರಲು ಪ್ರಾರಂಭಿಸಿದೆ. ಇದನ್ನು ತುರ್ತು ದುರಸ್ತಿ ಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್‌ ಬಂದರು ಅಧಿಕಾರಿಗಳನ್ನು ಸಂಪರ್ಕಿಸಿದ್ದನು. ಇದೇ ವೇಳೆ ಅಪಾಯದಲ್ಲಿ ನೌಕೆಯಿಂದ ಕ್ಯಾಪ್ಟನ್‌ ಹಾಗೂ ಸಿಬ್ಬಂದಿ ಸೇರಿ 15 ಮಂದಿಯನ್ನು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ.

NATIONAL HERALD CASE; ರಾಹುಲ್‌ ಆಯ್ತು, ನಾಳೆ ಸೋನಿಯಾಗೆ ಇ.ಡಿ ಡ್ರಿಲ್‌?

ಕರಾವಳಿಯಲ್ಲಿ ರೆಡ್‌ ಅಲರ್ಚ್‌ : ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ವೇಗ ಪಡೆದುಕೊಂಡಿದ್ದು, ಮಂಗಳವಾರ ಇಡೀ ದಿನ ನಿರಂತರ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಜೂ.22ರಂದು ಕರಾವಳಿಯಲ್ಲಿ ರೆಡ್‌ ಅಲರ್ಚ್‌ ಘೋಷಿಸಿದೆ.

ಬೆಳಗ್ಗೆ ಆರಂಭವಾದ ಮಳೆ ಸಂಜೆಯೂ ಮುಂದುವರಿದಿದೆ. ಬೆಳಗ್ಗೆ ಮೋಡ ಇದ್ದು, ಅಲ್ಲಲ್ಲಿ ತುಂತುರು ಮಳೆ ಕಾಣಿಸಿತ್ತು, ಮಧ್ಯಾಹ್ನವಾಗುತ್ತಿದ್ದಂತೆ ಎಡೆಬಿಡದೆ ಸಾಧಾರಣ ಮಳೆಯಾಗಿದೆ. ದಿನಪೂರ್ತಿ ಚಳಿ ಹಿಡಿಯುವಂತೆ ಮಳೆ ಸುರಿಯುತ್ತಲೇ ಇತ್ತು.

ಇಂದು ರೆಡ್‌ ಅಲರ್ಚ್‌: ಹವಾಮಾನ ಇಲಾಖೆ ಬುಧವಾರ ಕರಾವಳಿಯಲ್ಲಿ ರೆಡ್‌ ಅಲರ್ಚ್‌ ಘೋಷಿಸಿದ ಹಿನ್ನೆಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. 204 ಮಿಲಿ ಮೀಟರ್‌ ವರೆಗೆ ಅತ್ಯಧಿಕ ಮಳೆ ಹಾಗೂ ಗುಡುಗು, ಮಿಂಚಿನ ಮುನ್ಸೂಚನೆ ನೀಡಲಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಬಿರುಗಾಳಿ ವೇಗ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಹೇಳಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಮಂಗಳವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಮೂಡುಬಿದಿರೆಯಲ್ಲಿ ಗರಿಷ್ಠ 52.1 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಬೆಳ್ತಂಗಡಿ 33.5 ಮಿ.ಮೀ, ಬಂಟ್ವಾಳ 50.3 ಮಿ.ಮೀ, ಮಂಗಳೂರು 51.4 ಮಿ.ಮೀ, ಪುತ್ತೂರು 23.1 ಮಿ.ಮೀ, ಸುಳ್ಯ 18.5 ಮಿ.ಮೀ, ಕಡಬದಲ್ಲಿ 48 ಮಿ.ಮೀ. ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 36.5 ಮಿ.ಮೀ. ಆಗಿದೆ.

ಪಾಕ್‌ ಗುಪ್ತಚರರಿಂದ ಕರ್ನಾಟಕಕ್ಕೆ ಫೋನ್‌ ಸಂಪರ್ಕ!

ಅವಘಡದಿಂದ ಮೃತ ಮೀನುಗಾರ ಕುಟುಂಬಕ್ಕೆ ಶಾಸಕ ಪರಿಹಾರ ಹಸ್ತಾಂತರ: ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಅವಘಡದಿಂದ ಮೃತಪಟ್ಟಮೀನುಗಾರರೊಬ್ಬರ ಕುಟುಂಬಕ್ಕೆ ಮೀನುಗಾರರ ಪರಿಹಾರ ನಿಧಿಯಿಂದ 6 ಲಕ್ಷ ರು.ಬಿಡುಗಡೆಗೊಂಡಿದ್ದು ಶಾಸಕ ವೇದವ್ಯಾಸ್‌ ಕಾಮತ್‌ ಅವರು ಸಂತ್ರಸ್ತ ಕುಟುಂಬಕ್ಕೆ ಚೆಕ್‌ ಹಸ್ತಾಂತರಿಸಿದರು.

ಕಳೆದ ಬುಧವಾರದಂದು ಬೆಂಗ್ರೆ ಸ್ಯಾಂಡ್‌್ಸ ಫಿಟ್‌ ನಿವಾಸಿ ಜಯ ಪುತ್ರನ್‌ ಅವರು ಅಳಿವೆ ಬಾಲಿನಿನ ಬಳಿ ಬೆಳಗಿನ ಜಾವ ಬೀಸು ಬಲೆಯೊಂದಿಗೆ ಮೀಗಾರಿಕೆ ಮಾಡುತಿದ್ದ ಸಂದರ್ಭದಲ್ಲಿ ಗಾಳಿ ಮಳೆಯ ರಭಸಕ್ಕೆ ನೀರಿಗೆ ಬಿದ್ದು ಮೃತಪಟ್ಟಿದ್ದರು. ಶಾಸಕ ವೇದವ್ಯಾಸ ಕಾಮತ್‌ ಅವರು ರಾಜ್ಯ ಸರ್ಕಾರÜದಿಂದ ಕುಟುಂಬದ ಸದಸ್ಯರಿಗೆ ಪರಿಹಾರ ಧನ ಬಿಡುಗಡೆಗೊಳಿಸಲು ಮನವಿ ಮಾಡಿದ್ದರು. ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯೆ ಮೀರಾ ಕರ್ಕೇರ, ಬಿಜೆಪಿ ಮುಖಂಡರಾದ ಹೇಮಚಂದ್ರ ಸಾಲ್ಯಾನ್‌, ಲೋಕೇಶ್‌ ಬೆಂಗ್ರೆ ಇದ್ದರು.