ಫೇಸ್‌ಬುಕ್‌ ದೋಖಾ: ಮದುವೆಯಾಗಿ 3 ತಿಂಗಳಾದ್ರೂ ದೈಹಿಕ ಸಂಪರ್ಕ ಬೆಳಸದೇ ಚಿನ್ನಾಭರಣ ಕದ್ದು ಪರಾರಿಯಾದ ಲೇಡಿ

ಬೆಂಗಳೂರಿನಲ್ಲಿ ಫೇಸ್‌ಬುಕ್‌ ಪರಿಚಯದಿಂದ ಪ್ರೀತಿಸಿ ಮದುವೆಯಾದ ಮಹಿಳೆ 3 ತಿಂಗಳಾದ್ರೂ ದೈಹಿಕ ಸಂಪರ್ಕ ಬೆಳಸದೇ ಚಿನ್ನಾಭರಣ ಕದ್ದು ಪರಾರಿ ಆಗಿದ್ದಾಳೆ.

Bengaluru Facebook Dokha married woman absconded after stealing gold jewelry without physical sex sat

ಬೆಂಗಳೂರು (ಸೆ.17): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಫೇಸ್‌ಬುಕ್‌ ಮೂಲಕ ಪರಿಚಿತವಾದ ಯುವತಿಗೆ ತನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿ, ಪ್ರೀತಿಸಿ ಮದುವೆಯಾಗಿ ಬಾಳು ಕೊಡುವುದಕ್ಕೂ ಮುಂದಾಗಿದ್ದಾನೆ. ಆದರೆ, ಮದುವೆಯಾದರೂ 3 ತಿಂಗಳ ಕಾಲ ದೈಹಿಕ ಸಂಪರ್ಕಕ್ಕೂ ಅವಕಾಶ ಕೊಡದೇ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣ ಹಾಗೂ ನಗದು ಕದ್ದುಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ.

ಹೌದು, ಬೆಂಗಳೂರಿನಲ್ಲೊಬ್ಬ ಖತರ್ನಾಕ್ ಲೇಡಿಯ ಆಟ ಮದುವೆಯಾಗಿ ಮೋಸ ಹೋದ ಬಳಿಕ ಗೊತ್ತಾಗಿದೆ. ಮದುವೆಯಾಗಿ ಉಂಡು ಹೋದ, ಕೊಂಡು ಹೋದ ಕಿಲಾಡಿ ಮಹಿಳೆಯ ಆಟಕ್ಕೆ ಗಂಡನೇ ಥರಗುಟ್ಟಿ ಹೋಗಿದ್ದಾನೆ. ಎಲ್ಲವನ್ನೂ ಕಳೆದುಕೊಂಡ ನಂತರ ಮಹಿಳೆಯ ಮಕ್ಮಲ್ ಟೋಪಿ ಹಾಕಿದ ಬಗ್ಗೆ ಗಂಡ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾನೆ. ಇನ್ನು ಯುವತಿ ಜೊತೆಗೆ ಆಕೆಯ ಅಕ್ಕ ಮತ್ತು ಭಾವ ಸೇರಿಕೊಂಡು ಮದುವೆಯ ನಾಟಕವಾಡಿ ಹಣವನ್ನು ಲೂಟಿ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣ ಪೇಸ್ ಬುಕ್ ನಲ್ಲಿ ಯುವತಿಯನ್ನು ಸಂತೋಷ್‌ ಎನ್ನುವ ಯುವಕ ಪರಿಚಯ ಮಾಡಿಕೊಂಡಿದ್ದನು. ಇದಾದ ನಂತರ, ಯುವತಿಯನ್ನು ಸಂಪರ್ಕ ಮಾಡಿ ಫೋನ್‌ ಮಾಡಿ 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದನು. ಇದಾದ ನಂತರ ಇವರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರ ನಡುವೆಯೂ ಪ್ರೇಮಾಂಕುರ ಆಗಿದೆ. ಇಷ್ಟೆಲ್ಲಾ ಆದಮೇಲೆ ಇಬ್ಬರೂ ಮದುವೆ ಆಗೋಣವೆಂದು ಯುವತಿಗೆ ಹೇಳಿದ್ದಾನೆ. ಮೊದಲು ಗೊಂದಲದಲ್ಲಿದ್ದ ಯುವತಿ ನಂತರ ಒಪ್ಪಿಕೊಂಡಿದ್ದಾಳೆ.

Hassan Rape: 13 ವರ್ಷದ ಅಪ್ರಾಪ್ತೆ ಮೇಲೆ ಅತ್ಯಚಾರವೆಸಗಿದ 73 ವರ್ಷದ ವೃದ್ಧ, ಗರ್ಭಿಣಿಯಾದ ಬಾಲಕಿ

ಈಗಾಗಲೇ ಮಹಿಳೆಗೆ ಮೊದಲೇ ಮದುವೆಯಾಗಿದ್ದರೂ ಅದನ್ನು ಮುಚ್ಚಿಟ್ಟು ಸಂತೋಷ್ ಜೊತೆ ಮದುವೆಯಾಗಿದ್ದಾಳೆ. ಸ್ವತಃ ಯುವತಿಯ ಅಕ್ಕ ಮತ್ತು ಬಾವ ಸೇರಿ ದೇವಸ್ಥಾದಲ್ಲಿ ಸರಳವಾಗಿ ಮದುವೆ ಮಾಡಿಸಿದ್ದರು. ಇನ್ನು ಯುವತಿಯ ಭಾವ ಕೂಡ ನಾದಿನಿ ಜೊತೆ ಮದುವೆ ಮಾಡಿಸಲು ಯುವಕ ಸಂತೋಷ್‌ನಿಂದ 5 ಲಕ್ಷ ರೂ. ಹಣವನ್ನು ಪೀಕಿದ್ದಾನೆ. ನಂತರ ಮಹಿಳೆಯ ಅಕ್ಕನಿಂದ 15 ಲಕ್ಷ ಮೌಲ್ಯದ ಆಭರಣಗಳಿಗೆ ಸ್ಕೆಚ್‌ ಹಾಕಿದ್ದಳು. ಆದ್ದರಿಂದ, ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಹೇಳಿದ್ದಳು. ಅಕ್ಕ-ಭಾವನ ಸರದಿ ಮುಗಿಯುತ್ತಿದ್ದಂತೆ ಮದುವೆ ಮಾಡಿಕೊಳ್ಳುವ ಮಹಿಳೆ ದರ್ಬಾರ್ ಆರಂಭಿಸಿದ್ದಾಳೆ. 

ಮದುವೆ ಆಗುವುದಕ್ಕೂ ಮುಂಚಿತವಾಗಿ ತನಗೆ ದುಬಾರಿ ಬೆಲೆಯ ಐಫೋನ್ ಕೊಡಿಸುವಂತೆ ಡಿಮಾಂಡ್‌ ಮಾಡಿದ್ದಾಳೆ. ಮನ ಮೆಚ್ಚಿದ ಹುಡುಗಿ ಕೇಳಿದ್ದಾಳೆಂದು 2.60 ಲಕ್ಷ ರೂ. ಮೌಲ್ಯದ ಐಫೋನ್‌ ಕೊಡಿಸಿದ್ದಾನೆ. ಹಣ, ಆಭರಣ, ಮೊಬೈಲ್ ಫೋನ್ ಬಳಿಕ ಮದುವೆ ತಯಾರಿ ಶುರುವಾಗಿದೆ. 2022 ರಂದು ನವೆಂಬರ್ ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಈ ಜೋಡಿ ಸರಳವಾಗಿ ಮದುವೆಯಾಗಿದೆ. ಇಷ್ಟಾದರೂ ಕೇವಲ 3 ತಿಂಗಳು ಯುವಕನ ಮನೆಯಲ್ಲಿದ್ದು ಅಲ್ಲಿಂದ ಪರಾರಿ ಆಗಿದ್ದಾಳೆ. ಇನ್ನು 3 ತಿಂಗಳು ಮನೆಯಲ್ಲಿದ್ದರೂ ಮದುವೆಯಾದ ಗಂಡನೊಂದಿಗೆ ದೈಹಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡದೇ ಸಬೂಬು ಹೇಳುತ್ತಿದ್ದಳು. ಮನೆ ಬಿಟ್ಟು ಹೋಗುವ ಮುನ್ನ ಜಗಳ ಆರಂಭಿಸಿದ್ದಳು. ನಂತರ, ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿಕೊಂಡು ಪರಾರಿ ಆಗಿದ್ದಾಳೆ. 

ಬೆಂಗಳೂರಲ್ಲಿ ನೇಪಾಳದ ಕುಟುಂಬ ದುರಂತ ಅಂತ್ಯ: ರಾತ್ರಿ ಊಟ ಮಾಡಿ ಮಲಗಿದವರು ಮೇಲೇಳಲಿಲ್ಲ

ಇನ್ನು ಮದುವೆಯಾಗಿ ಯುವತಿ ಓಡಿ ಹೋದ ನಂತರವೂ ಆಕೆಯ ಅಕ್ಕನ ಗಂಡ ಯುವಕ ಸಂತೋಷ್‌ನಿಂದ ಬೆದರಿಕೆ ಹಾಕಿ ಹಣವನ್ನು ಪೀಕಿದ್ದಾನೆ. ಇಷ್ಟೆಲ್ಲಾ ನಡೆದ ನಂತರ ತನ್ನನ್ನು ಮದುವೆಯಾದ ಯುವತಿಗೆ ಮೊದಲೇ ಮದುವೆಯಾಗಿತ್ತು ಎಂಬುದು ತಿಳಿದುಬಂದಿದೆ. ತಾನು ವ್ಯವಸ್ಥಿತವಾದ ಮೋಸದ ಜಾಲಕ್ಕೆ ಬಲಿಯಾಗಿರುವುದಾಗಿ ಅರಿತ ಯುವಕ, ತಾನು ಮದುವೆಯಾದ ಯುವತಿ, ಆಕೆಯ ಅಕ್ಕ ಹಾಗೂ ಭಾವನ ವಂಚನೆ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಹಿಳೆ, ಆಕೆಯ ಅಕ್ಕ ಮತ್ತು ಬಾವ ಅರುಣ್ ವಿರುದ್ಧ ಎಫ್ಐಆರ್ ದಾಖಲು ಆಗಿದೆ.

Latest Videos
Follow Us:
Download App:
  • android
  • ios