ಬೆಂಗಳೂರಲ್ಲಿ ನೇಪಾಳದ ಕುಟುಂಬ ದುರಂತ ಅಂತ್ಯ: ರಾತ್ರಿ ಊಟ ಮಾಡಿ ಮಲಗಿದವರು ಮೇಲೇಳಲಿಲ್ಲ
ಕಳೆದ 8 ದಿನಗಳ ಹಿಂದೆ ಕೋಳಿಫಾರಂನಲ್ಲಿ ಕೆಲಸಕ್ಕೆ ಬಂದು ಚಿಕ್ಕ ಮನೆಯಲ್ಲಿ ವಾಸವಿದ್ದ ಕುಟುಂಬದ ಸದಸ್ಯರು ರಾತ್ರಿ ಮಲಗಿದ್ದವರು ಮೇಲೇಳಲೇ ಇಲ್ಲ.
ಬೆಂಗಳೂರು ಗ್ರಾಮಾಂತರ (ಸೆ.17): ಕೋಳಿ ಫಾರಂ ನಲ್ಲಿ ಮಲಗಿದ್ದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದವರು ಮನೆಯಿಂದ ಹೊರಬಂದಿಲ್ಲ. ಮನೆಯ ಬಾಗಿಲನ್ನು ತೆಗೆದುನೋಡಿದಾಗ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಹೊಲೆಯರಹಳ್ಳಿಯಲ್ಲಿ ಘಟನೆ ನಡೆದಿದೆ. ಕಳೆದ 8 ದಿನಗಳ ಹಿಂದೆ ಕೆಲಸಕ್ಕಾಗಿ ಕೋಳಿ ಫಾರಂಗೆ ಕುಟುಂಬ ಸಮೇತರಾಗಿ ಆಗಮಿಸಿ, ಇಲ್ಲಿ ನೆಲೆಗೊಂಡಿದ್ದರು. ಆದರೆ, 10 ದಿನ ಕಳೆಯುವಷ್ಟರಲ್ಲಿಯೇ ಇಡೀ ಕುಟುಂಬದಲ್ಲಿ ಒಬ್ಬರೇ ಒಬ್ಬ ಸದಸ್ಯರೂ ಉಳಿಯದಂತೆ ದುರಂತ ಸಾವಿಗೀಡಾಗಿದ್ದಾರೆ. ಒಂದೇ ಕುಟುಂಬದ ಸದಸ್ಯರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ(16) ಮೃತ ದುರ್ದೈವಿಗಳು. ಇವರು ನೇಪಾಳ ಮೂಲದ ಕುಟುಂಬದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು: ಪೊಲೀಸ್ ಅಧಿಕಾರಿಯ ಪುತ್ರನ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಅಮಾಯಕ ಬಲಿ
ಸಾವಿಗೆ ನಿಖರ ಕಾರಣ ತಿಳಿಯುತ್ತಿಲ್ಲ: ಇನ್ನು ಇಡೀ ಕುಟುಂಬದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಬಾಗಿಲು ತೆರೆದು ನೋಡಿದ್ದು, ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಇನ್ಯಾವುದಾದರೂ ಕಾರಣಕ್ಕೆ ಸಾವು ಸಂಭವಿಸಿರಬಹುದೇ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಪೊಲೀಸ್ ಪೇದೆ: ಬೆಂಗಳೂರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಆನಂದ ಪಾಟೀಲ ವಿರುದ್ಧ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯದ ನಿಮಿತ್ತವಾಗಿ ಮಹಿಳಾ ಪೇದೆಯೊಂದಿಗೆ ಕರೆ ಮಾಡಿ ಮಾತನಾಡಿದ್ದಾನೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ವಾಟ್ಸಾಪ್ ಮೆಸೇಜ್, ವಿಡಿಯೋ ಕಾಲ್ ಮೂಲಕ ಸಲುಗೆ ಆರಂಭವಾಗಿದೆ. ಬಳಿಕ ಆನಂದ ಪಾಟೀಲ ಮಹಿಳಾ ಪೇದೆಯೊಂದಿಗೆ ಮಾತನಾಡಿ ನಿನ್ನನ್ನು ಪ್ರೀತಿಸುವುದಾಗಿ ತಿಳಿಸಿದ್ದಾನೆ.
ಭಾರತದ ಹೈ ಪ್ರೊಫೈಲ್ ಹನಿಟ್ರ್ಯಾಪ್ ರಾಣಿ ಆರತಿ ದಯಾಳ್ ಬೆಂಗಳೂರಿನಲ್ಲಿ ಅರೆಸ್ಟ್
ಮದುವೆಯಾಗು ಎಂದು ಕೇಳಿದರೆ ಉಲ್ಟಾ ಹೊಡೆದ: ಪೇದೆಯ ಬಣ್ಣದ ಮಾತಿಗೆ ಮರುಳಾದ ಮಹಿಳಾ ಪೇದೆ ಈತನೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿದ್ದಾಳೆ. ಮದುವೆಯಾಗುವುದಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ನಂತರ ಮಹಿಳಾ ಪೇದೆ ಮದುವೆ ವಿಷಯವನ್ನು ಪ್ರಸ್ತಾಪಿಸಿದಾಗ ನಾನು ಕೇವಲ ಸ್ನೇಹಿತ ಎಂದು ಭಾವಿಸಿದ್ದೇನೆ. ಪ್ರೀತಿಸುವುದಾಗಿ ಹೇಳಿಲ್ಲ ಎಂದು ಫೊನ್‌ನಲ್ಲಿ ತಿಳಿಸಿದ್ದಾನೆ. ಇದರಿಂದಾಗಿ ಮನನೊಂದ ಮಹಿಳಾ ಪೇದೆ ಪೊಲೀಸ್ ಪೇದೆ ಆನಂದ ಪಾಟೀಲ ವಿರುದ್ಧ ಬೆಳಗಾವಿ ನಗರದ ಜೀವನ ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.