Bengaluru: ಇದು ಧಾರವಾಹಿ ಅಲ್ಲ, ನೈಜ ಘಟನೆ: ಆಸ್ತಿಗಾಗಿ ತಾಯಿಯನ್ನೇ ಕೊಲೆ ಮಾಡಿದ ಮಗ
ಬೆಂಗಳೂರಿನ ದೇವನಹಳ್ಳಿಯಲ್ಲಿ ಆಸ್ತಿಗಾಗಿ ಹೆತ್ತು, ಹೊತ್ತು ಸಾಕಿ ಮದುವೆ ಮಾಡಿದ್ದ ಮಗನೇ ತಾಯಿಯನ್ನು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ಬೆಂಗಳೂರು (ಆ.05): ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಆಸ್ತಿಗಾಗಿ ಕಿತ್ತಾಟ ಮಾಡುವ ದೃಶ್ಯಗಳು ಕಂಡುಬರುತ್ತವೆ. ಆದರೆ, ಬೆಂಗಳೂರಿನ ದೇವನಹಳ್ಳಿಯಲ್ಲಿ ಆಸ್ತಿಗಾಗಿ ಹೆತ್ತು, ಹೊತ್ತು ಸಾಕಿ ಮದುವೆ ಮಾಡಿದ್ದ ಮಗನೇ ತಾಯಿಯನ್ನು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಆಸ್ತಿಗಾಗಿ ಕಿತ್ತಾಟ ಮಾಡುವ ದೃಶ್ಯಗಳು ಹೆಚ್ಚಾಗಿರುತ್ತವೆ. ಅದರಲ್ಲಿಯೂ ಆಸ್ತಿಗಾಗಿ ಅಣ್ಣ-ತಮ್ಮ, ಅತ್ತೆ-ಸೊಸೆ, ಮಾವ-ಅಳಿಯ, ತಾಯಿ-ಮಕ್ಕಳು, ತಂದೆ-ಮಗ ಹೀಗೆ ಪರಸ್ಪರ ವಿರೋಧಿಗಳಾಗಿರುತ್ತಾರೆ. ಇನ್ನು ಧಾರವಾಹಿಗಳಿಗೂ ನೈಜ ಘಟನೆಗಳಿಗೂ ಸಾಮ್ಯತೆ ಕಡಿಮೆ ಎಂದೇ ಹೇಳಬಹುದು. ಆದರೆ, ಬೆಂಗಳೂರಿನ ದೇವನಹಳ್ಳಿಯಲ್ಲಿ ಆಸ್ತಿಗಾಗಿ ಹೆತ್ತು, ಹೊತ್ತು ಸಾಕಿ ಮದುವೆ ಮಾಡಿದ್ದ ಮಗನೇ ತಾಯಿಯನ್ನು ಕೊಲೆ ಮಾಡಿದ ದುರ್ಘಟನೆ ನಡೆದಿದೆ. ಆಸ್ತಿಗಾಗಿ ತಾಯಿಯನ್ನೆ ಕೊಂದ ಮಗ ಮತ್ತು ಸೊಸೆ ಸೇರಿ ತಾಯಿಯನ್ನು ಕೊಲೆ ಮಾಡಿದ್ದಾರೆ.
ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!
ವಿಮಾನ ನಿಲ್ದಾಣದ ಪಕ್ಕದಲ್ಲಿ ನಡೆದ ದುರ್ಘಟನೆ: ಕೊಲೆಯಾದ ಮಹಿಳೆಯನ್ನು ಚಿನ್ನಮ್ಮ (60) ಆಗಿದ್ದಾಳೆ. ಇವರ ಪುತ್ರನಾದ ರಾಘವೇಂದ್ರ (40) ಹಾಗೂ ಸೊಸೆ ಸುಧಾ(38) ಕೊಲೆ ಆರೋಪಿಗಳು ಆಗಿದ್ದಾರೆ. ಮನೆಯಲ್ಲಿದ್ದಾಗ ಮಗ- ಸೊಸೆ ಸೇರಿಕೊಂಡು ಚಿನ್ನಮ್ಮನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರ್ತಿಗಾನಹಳ್ಳಿ ಬಳಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಏರ್ಪೋರ್ಟ್ ಪಕ್ಕದಲ್ಲೆ (Bengaluru Kempegowda International Airport) ಇರೋ ಉದಯಗಿರಿ ಬಳಿ ನಡೆದಿರುವ ಘಟನೆ ನಡೆದಿದ್ದು, ತಕ್ಷಣವೇ ದೂರು ದಾಖಲಾಗಿದೆ.
ಸೌದೆ ತರಲು ಹೊಲಕ್ಕೆ ಹೋದಾಗ ಹಿಂಬಾಲಿಸಿ ಹಲ್ಲೆ: ಇನ್ನು ಮೃತೆ ಚಿನ್ನಮ್ಮ ಪೊರಕೆ ಕಡ್ಡಿ ತಯಾರಿಸಲು ಕಡ್ಡಿ ಕಟಾವು ಹಾಗೂ ಒಲೆ ಉರುವಲಿಗಾಗಿ ಸೌದೆಯನ್ನು ತರಲು ವಿಮಾನ ನಿಲ್ದಾಣದ ಬಳಿಯಿರುವ ಪ್ರದೇಶಕ್ಕೆ ಬಂದಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿ ಬಂದ ಮಗ ಮತ್ತು ಸೊಸೆ ಮೊದಲು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನಂತರ, ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟ ನಂತರ, ಆಸ್ಪತ್ರೆಗೆ ಸೇರಿಸುವ ನಾಟಕ ಮಾಡಿದ್ದಾರೆ. ಇನ್ನು ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಆಕೆಯ ಮಗ ಮತ್ತು ಸೊಸೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಲೆಗೆ ಹೊಡೆದು ಕೊಲೆ ಮಾಡಿದ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಸ್ಪಷ್ಟೀಕರಣ ನೀಡಬೇಕಿದೆ.
Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್ ಬರ್ಬರ ಹತ್ಯೆ!
ಸ್ಥಳ ಪರಶೀಲನೆಗೆ ತೆರಳಿದ ಬೆರಳಚ್ಚು ತಂಡ: ಇನ್ನು ಕೊಲೆ ಆರೋಪದಡಿ ಮೃತಳ ಮಗ ರಾಘವೇಂದ್ರ ಮತ್ತು ಆಕೆಯ ಸೊಸೆ ಸುಧಾಳನ್ನು ಬೆಂಗಳೂರು ವಿಮಾನ ನಿಲ್ದಾಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಬೆರಳಚ್ಷು ತಂಡ, ದೇವನಹಳ್ಳಿ (Devanahalli Police station) ಮತ್ತು ಏರ್ಪೋರ್ಟ್ ಪೊಲೀಸರ ಭೇಟಿ ಪರಿಶೀಲನೆ ಮಾಡಿದೆ. ಸದ್ಯ ಮೃತ ದೇಹವನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.