ರೌಡಿಶೀಟರ್‌ ದಂಪತಿಯಿಂದ ಸನ್ಮಾನ ಸ್ವೀಕರಿಸಿದ ಪೊಲೀಸ್‌ ಆಯುಕ್ತರು!| ರೌಡಿಶೀಟರ್‌ಗಳಾದ ಯಶಸ್ವಿನಿ, ಮಹೇಶ್‌ನಿಂದ ಸನ್ಮಾನ| ಫೋಟೋ ಬಹಿರಂಗ

ಬೆಂಗಳೂರು[ಅ.17]: ರೌಡಿಶೀಟರ್‌ ದಂಪತಿ ಜತೆ ಅಭಿನಂದನೆ ಸ್ವೀಕರಿಸುತ್ತಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರ ಭಾವಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಬುಧವಾರ ಬಹಿರಂಗಗೊಂಡು ವಿವಾದ ಸೃಷ್ಟಿಸಿತು.

ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ರೌಡಿಶೀಟರ್‌ಗಳಾದ ಯಶಸ್ವಿನಿ ಹಾಗೂ ಮಹೇಶ್‌ ಅಲಿಯಾಸ್‌ ದಡಿಯಾ ಮಹೇಶ್‌ ಜತೆ ಆಯುಕ್ತರು ಭಾವಚಿತ್ರಕ್ಕೆ ಪೋಸ್‌ ಕೊಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಇದೇ ಭಾವಚಿತ್ರದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಸಹ ಇದ್ದಾರೆ.

ಅಪಘಾತವಾದರೂ ಗಾಯಾಳು ಮಹಿಳೆ ಸ್ಥಳದಲ್ಲಿ ಬಿಟ್ಟೇ ಹೋದ ಪೊಲೀಸರು

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಆಯುಕ್ತ ಭಾಸ್ಕರ್‌ ರಾವ್‌ ಅವರು, ‘ನನಗೆ ಯಶಸ್ವಿನಿ ಯಾರು ಎಂಬುದು ಗೊತ್ತೇ ಇರಲಿಲ್ಲ. ಆಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಮರುದಿನ ಬಂದು ಅಭಿನಂದಿಸಿ ಫೋಟೋ ತೆಗೆಸಿಕೊಂಡಿದ್ದರು. ಇಷ್ಟುದಿನಗಳ ನಂತರ ಫೋಟೋ ಅನಗತ್ಯ ಚರ್ಚೆಗೆ ಕಾರಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಅಮಿತ್ ಶಾ ಸಚಿವಾಲಯ

ಶ್ರೀರಾಮಸೇನೆ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ರೌಡಿ ಯಶಸ್ವಿನಿ ವಿರುದ್ಧ ಗಿರಿನಗರ ಹಾಗೂ ಸಿ.ಕೆ.ಅಚ್ಚುಕಟ್ಟು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆಕೆಯ ಪತಿ ಮಹೇಶ್‌ ಸಹ ಗಿರಿನಗರ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದಾನೆ. ಮೀಟರ್‌ ಬಡ್ಡಿ ದಂಧೆಯಲ್ಲಿ ತೊಡಗಿರುವ ಆಕೆ, ಬಡ್ಡಿ ನೀಡದ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿ ಕುಖ್ಯಾತ ಪಡೆದಿದ್ದಾಳೆ. ಇಂತಹ ಕ್ರಿಮಿನಲ್‌ ಹಿನ್ನಲೆಯ ವ್ಯಕ್ತಿಗಳ ಜತೆ ಆಯುಕ್ತರ ಫೋಟೋ ವಿವಾದಕ್ಕೆ ಕಾರಣವಾಗಿದೆ.