Asianet Suvarna News Asianet Suvarna News

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಅಮಿತ್ ಶಾ ಸಚಿವಾಲಯ

ಅಣ್ಣಾಮಲೈ ರಾಜೀನಾಮೆ ಅಂಗೀಕಾರ|ಕೇಂದ್ರ ಗೃಹ ಸಚಿವಾಲಯದಿಂದ ರಾಜೀನಾಮೆ ಅಂಗೀಕಾರ| ಮೇ 28ರಂದು ರಾಜೀನಾಮೆ ನೀಡಿದ್ದ ಅಣ್ಣಾಮಲೈ|ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದ ಅಣ್ಣಾಮಲೈ.

Central home ministry accepted IPS officer annamalai Resignation
Author
Bengaluru, First Published Oct 16, 2019, 8:11 PM IST

ನವದೆಹಲಿ/ಬೆಂಗಳೂರು, [ಅ.16]:  ಅಣ್ಣಾಮಲೈ ಅವರ ರಾಜೀನಾಮೆ ಅಂಗೀಕಾರವಾಗಿದೆ.  2019 ಮೇ 28ರಂದು ಅಣ್ಣಾಮಲೈ ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅದನ್ನು ಇಂದು [ಬುಧವಾರ] ಕೇಂದ್ರ ಗೃಹ ಸಚಿವಾಲಯ ಅಂಗೀಕರಿಸಿದೆ. ಖಡಕ್ ಹಾಗೂ ದಕ್ಷ ಐಪಿಎಸ್ ಅಧಿಕಾರಿ ಎಂದೇ ಫೇಮಸ್ ಆಗಿದ್ದ ಅಣ್ಣಾಮಲೈ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು.

ಖಡಕ್ ಖಾಕಿಗೆ ಅಣ್ಣಾಮಲೈ ಭಾವಪೂರ್ಣ ವಿದಾಯ

2011ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಚಿಕ್ಕಮಗಂಗಳೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು.

ಅಣ್ಣಾಮಲೈ ಯಾವುದೇ ಪಕ್ಷ ಸೇರಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ, ರಾಜೀನಾಮೆಗೆ ಅಸಲಿ ಕಾರಣವೇನು..?

ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಹೇಳಿದಿಷ್ಟು..
ಕಳೆದ ವರ್ಷ ನಾನು ಮಾನಸ ಸರೋವರದ ಕೈಲಾಸ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನು ತೀವ್ರವಾಗಿ ಭಾದಿಸಿತು.

Exclusive| 2019ರ ನವಭಾರತದಲ್ಲಿ ಸೇರುವ ಸುಳಿವು ಕೊಟ್ಟ ಅಣ್ಣಾಮಲೈ

 ಅಲ್ಲದೇ ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನ ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು.  ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. 9 ವರ್ಷಗಳ ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios