Asianet Suvarna News Asianet Suvarna News

ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿ 2 ಕೋಟಿ ಕಳೆದುಕೊಂಡ ಗುಜರಾತ್ ಉದ್ಯಮಿ

ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ಉದ್ಯಮಿಯೊಬ್ಬ ನಂತರ ಬ್ಲಾಕ್‌ಮೇಲ್‌ಗೆ ಒಳಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಗುಜರಾತ್‌ನಲ್ಲಿ ನಡೆದಿದೆ.

Be careful before getting fooled by a strangers video call Gujarat businessman lost 2 crores after he strip off in video call akb
Author
First Published Jan 14, 2023, 12:58 PM IST

ಅಹ್ಮದಾಬಾದ್: ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ಉದ್ಯಮಿಯೊಬ್ಬ ನಂತರ ಬ್ಲಾಕ್‌ಮೇಲ್‌ಗೆ ಒಳಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಗುಜರಾತ್‌ನಲ್ಲಿ ನಡೆದಿದೆ. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತಹ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೊಬ್ಬರು ಹೀಗೆ ಯುವತಿಯ ಮೋಹದ ಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡವರು  ಕಳೆದ ವರ್ಷ ಆಗಸ್ಟ್ 8 ರಂದು ಉದ್ಯಮಿಗೆ ಗುಜರಾತ್‌ನ ಮೊರ್ಬಿ ಮೂಲದವಳೆಂದು ಹೇಳಿಕೊಂಡು ರಿಯಾ ಶರ್ಮಾ ಎಂಬ ಹೆಸರಿನ ಯುವತಿ ಕರೆ ಮಾಡಿದ್ದಾಳೆ. 

ಪೊಲೀಸರ ಪ್ರಕಾರ, ಗುಜರಾತ್‌ನ (Gujarat) ಉದ್ಯಮಿ (businessman) ಗುರುವಾರ 2.69 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.  ಸಂತ್ರಸ್ತ ಉದ್ಯಮಿ ಹೇಳುವಂತೆ  ಆತನಿಗೆ ಕಳೆದ ವರ್ಷ ಆಗಸ್ಟ್ 8 ರಂದು  ಯುವತಿಯೊಬ್ಬಳು ವಿಡಿಯೋ ಕಾಲ್ ಮಾಡಿದ್ದಾಳೆ.  ಯುವತಿ ಉದ್ಯಮಿ ಜೊತೆ ತನ್ನನ್ನು ಮೊರ್ಬಿಯ (Morbi) ರಿಯಾ ಶರ್ಮಾ (Ria Sharma) ಎಂದು ಪರಿಚಯಿಸಿಕೊಂಡಿದ್ದಾಳೆ.  ಮುಂದೆ ಮಾತು ಜಾಸ್ತಿಯಾಗುತ್ತಾ ಯುವತಿ ಆತನಿಗೆ ಬೆತ್ತಲಾಗುವಂತೆ ಮನವಿ ಮಾಡಿ ಮನವೊಲಿಸಿದ್ದಾಳೆ. ಈಕೆಯ ಮೋಹದ ಜಾಲಕ್ಕೆ ಬಿದ್ದ ಉದ್ಯಮಿ ವಿಡಿಯೋ ಕಾಲ್‌ನಲ್ಲೇ ಬೆತ್ತಲಾಗಿದ್ದಾನೆ. ಇದಾದ ಬಳಿಕ ವಿಡಿಯೋ ಕಾಲ್  ಥಟ್ಟನೇ ಕಟ್ ಆಗಿದ್ದು,  ನಂತರ ಆಕೆ ಬ್ಲಾಕ್‌ಮೇಲ್ ನಾಟಕ ಶುರು ಮಾಡಿದ್ದಾಳೆ. 

ಮತ್ತೊಬ್ಬನೊಟ್ಟಿಗೆ ಮದುವೆ ಆದ ಬಳಿಕವೂ ದೈಹಿಕ ಸಂಪರ್ಕಕ್ಕೆ ಒತ್ತಾಯ: ಗೆಳತಿಯ ಖಾಸಗಿ ವಿಡಿಯೋ ಬಳಸಿ Blackmail: ಬಂಧನ

ಮೊದಲಿಗೆ ಆಕೆ 50 ಸಾವಿರ ರೂಪಾಯಿಗೆ ಬೇಡಿಕೆ ಇರಿಸಿದ್ದಾಳೆ.  ಈತನೂ ತನ್ನ ನ್ಯೂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭಯದಿಂದ ಹೆದರಿ ಹಣ ನೀಡಿದ್ದಾನೆ.  ಇದಾಗಿ ಸ್ವಲ್ಪ ದಿನದ ನಂತರ ಮತ್ತೆಉದ್ಯಮಿಗೆ ಕರೆ ಬಂದಿದೆ. ತಾನು ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಗುಡ್ಡು ಶರ್ಮಾ (Guddu Sharma) ಎಂದು ಹೇಳಿ ವ್ಯಕ್ತಿಯೊಬ್ಬ ಕರೆ ಮಾಡಿದ್ದು,  ತಮ್ಮ ಬಳಿ  ನಿಮ್ಮ ಬೆತ್ತಲೆ ವಿಡಿಯೋ ಇರುವುದಾಗಿ ಹೇಳಿ  ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ನಂತರ ಆಗಸ್ಟ್ 14 ರಂದು ಮತ್ತೆ ಕರೆ ಬಂದಿದ್ದು, ತಾನು ದೆಹಲಿ ಸೈಬರ್ ಸೆಲ್‌ನ (Delhi police cyber cell) ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ದುರುಳ, ಉದ್ಯಮಿಗೆ ವಿಡಿಯೋ ಕರೆ ಮಾಡಿದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ಮುಚ್ಚಿ ಹಾಕಲು 80.97 ಲಕ್ಷ ರೂಪಾಯಿ ನೀಡುವಂತೆ ಹೇಳಿದ್ದಾನೆ.  ಅಲ್ಲದೇ ಮಹಿಳೆಯ ತಾಯಿ ಕೇಂದ್ರ ತನಿಖಾ ಸಂಸ್ಥೆಯನ್ನು (CBI) ಈ ವಿಚಾರವಾಗಿ ಸಂಪರ್ಕಿಸಿದ್ದಾರೆ ಎಂದು ಕೂಡ ಉದ್ಯಮಿಗೆ ಖದೀಮರು ಹೆದರಿಸಿದ್ದು, ಹೀಗಾಗಿ ಕಂಗೆಟ್ಟ ಉದ್ಯಮಿ ಅವರು ಕೇಳಿದಷ್ಟು ಹಣವನ್ನು ನೀಡಿದ್ದಾನೆ. 

ಇದಾದ ನಂತರ ನಕಲಿ ಸಿಬಿಐ ಅಧಿಕಾರಿಗಳು ಈತನಿಗೆ ಕರೆ ಮಾಡಿದ್ದು, 8.5 ಲಕ್ಷ ರೂಪಾಯಿ ನೀಡಿದರೆ ಈ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ಹೇಳಿದ್ದಾರೆ.  ಹೀಗಾಗಿ ಈತ ಡಿಸೆಂಬರ್ 15 ರವರೆಗೆ ಇವರಿಗೆ ಹಣ ನೀಡುತ್ತಲೇ ಬಂದಿದ್ದಾನೆ. ಆದರೆ  ಡಿಸೆಂಬರ್ 15 ರಂದು ಈತನಿಗೆ ನಕಲಿ ದೆಹಲಿ ಹೈಕೋರ್ಟ್‌ನ ಆದೇಶದಂತೆ ಪ್ರಕರಣ ಇತ್ಯರ್ಥವಾಗಿರುವುದಾಗಿ  ನಕಲಿ ಆದೇಶ ಪತ್ರ ಕೈ ಸೇರಿದ್ದು, ಈ ವೇಳೆ ಉದ್ಯಮಿಗೆ ಸಂಶಯ ಬಂದಿದೆ. 

ಬೆತ್ತಲೆ ಚಿತ್ರ ತೋರಿಸಿ ಬಾಲಕಿಗೆ ಬ್ಲ್ಯಾಕ್ಮೇಲ್‌ : ಯುವಕನ ಹತ್ಯೆ

ಇದಾದ ಬಳಿಕ ಆತ ಜನವರಿ 10 ರಂದು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರಿಗೆ 11 ಜನರ ವಿರುದ್ಧ ದೂರು ನೀಡಿದ್ದು, ಅದರಲ್ಲಿ ಹೀಗೆ ಬ್ಲಾಕ್‌ಮೇಲ್‌ಗೆ ಒಳಗಾಗಿ 2.69 ರೂಪಾಯಿ ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ.  ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್  387 (ಸುಲಿಗೆ), 170 (ಸಾರ್ವಜನಿಕ ಸೇವಕನಂತೆ ನಟಿಸಿ ವಂಚನೆ), 465 (ನಕಲಿ), 420 (ವಂಚನೆ), ಮತ್ತು 120-ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. . ತನಿಖೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

Follow Us:
Download App:
  • android
  • ios