ಬೆತ್ತಲೆ ಚಿತ್ರ ತೋರಿಸಿ ಬಾಲಕಿಗೆ ಬ್ಲ್ಯಾಕ್ಮೇಲ್ : ಯುವಕನ ಹತ್ಯೆ
ಯುವತಿಯ ಬೆತ್ತಲೆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಆಕೆಯ ಸಹೋದರ ತನ್ನ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿ ನದಿಗೆ ಬಿಸಾಡಿದ್ದಾನೆ. ಪ್ರಕರಣ ಭೇದಿಸಿರುವ ಮೈಸೂರು ಜಿಲ್ಲೆಯ ಬಿಳಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಂಜನಗೂಡು : ಯುವತಿಯ ಬೆತ್ತಲೆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಆಕೆಯ ಸಹೋದರ ತನ್ನ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿ ನದಿಗೆ ಬಿಸಾಡಿದ್ದಾನೆ. ಪ್ರಕರಣ ಭೇದಿಸಿರುವ ಮೈಸೂರು ಜಿಲ್ಲೆಯ ಬಿಳಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಚಂದ್ರಗೌಡ(25) ಮೃತ ಯುವಕ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದ ಲಿಂಗರಾಜು ಹಾಗೂ ಎರಗನಹುಂಡಿ ಗ್ರಾಮದ ಕಿರಣ್ ಬಂಧಿತ ಆರೋಪಿಗಳು. ಹತ್ಯೆಯಾದ ಚಂದ್ರಗೌಡ ಸೋದರಿ ಸಂಬಂಧಿ ಹುಡುಗಿ ಹಾಗೂ ಕೊಲೆ ಆರೋಪಿ ಲಿಂಗರಾಜು ಸಹೋದರಿ ವಸತಿ ಶಾಲೆಯೊಂದರಲ್ಲಿ ಸಹಪಾಠಿಗಳು. ಸಹೋದರಿಯ ಮೊಬೈಲ್‌ನಲ್ಲಿ ಬಾಲಕಿಯ ಮೊಬೈಲ್ ನಂಬರ್ ತೆಗೆದುಕೊಂಡ ಚಂದ್ರಗೌಡ ಆಕೆಯೊಂದಿಗೆ ವಿಶ್ವಾಸ ಬೆಳೆಸಿ ಬಳಿಕ ಆಕೆಗೆ ನಗ್ನ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ವಿಷಯ ತಿಳಿದ ಲಿಂಗರಾಜು, ಚಂದ್ರ ಗೌಡನಿಗೆ ತನ್ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಪುಸಲಾಯಿಸಿ ಕರೆಸಿಕೊಂಡಿದ್ದಾನೆ. ನಂಜನ ಗೂಡು ತಾಲೂಕಿನ ತಾಯೂರು ಗೇಟ್ ಬಳಿ 2022 ನ.20ರಂದು ಚಂದ್ರಗೌಡನಿಗೆ ಮದ್ಯ ಕುಡಿಸಿ ಕೊಂದು ಗೋಣಿ ಚೀಲದಲ್ಲಿ ಮೃತದೇಹವನ್ನು ಹಾಕಿ ಕಾವೇರಿಯ ನದಿಗೆ ಎಸೆದಿದ್ದ.
ಯುವಕನ ಕೊಲೆ ಇಬ್ಬರಿಗೆ ಜೀವಾವಧಿ ಶಿಕ್ಷೆ
ಕಲಬುರಗಿ ನಗರದ ಬಾಪೂ ನಗರ ಬಡಾವಣೆಯಲ್ಲಿ ಚಿರಂಜೀವಿ ಎನ್ನುವ ಯುವಕನ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ ಇನ್ನುಳಿದ ಮೂವರಿಗೆ ದಂಡ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಾಸಿದ್ಧಾರಾದ್ಯ ಎಚ್.ಜೆ. ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ತಂದೆ ಮತ್ತು ಆತನ 3 ಮಕ್ಕಳು, ಇನ್ನೊಬ್ಬ ಬೇರೆ ಯುವಕ ಆಪಾದಿತರಾಗಿದ್ದಾರೆ. ನಗರದ ಬಾಪೂ ನಗರದ ರಘುನಾಥ ಉಪಾದ್ಯಾ, ಅತನ ಮಕ್ಕಳಾದ ಆಟೋ ಚಾಲಕ ಕಾಶಿನಾಥ ಉಪಾದ್ಯಾ (20), ವಿಶ್ವನಾಥ ಉಪಾದ್ಯಾ, ಅಲೋಕ ನಾಥ ಉಪಾದ್ಯಾ ಮತ್ತು ಜಯ ಉಪಾದ್ಯಾ (22) ಈ ಐವರು ಆರೋಪಿಗಳಾಗಿದ್ದಾರೆ. ಇವರಲ್ಲಿ ಕಾಶಿನಾಥ ಮತ್ತು ಜಯ ಎನ್ನುವವರಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸಲಾಗಿದೆ. ಇನ್ನುಳಿದ ರಘುನಾಥ, ವಿಶ್ವನಾಥ ಮತ್ತು ಅಲೋಕನಾಥ ಒಟ್ಟು ಐವರಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ.
ಕಲಬುರಗಿ ಸೆಂಟ್ರಲ್ ಜೈಲ್ ಮೇಲೆ ಪೊಲೀಸ್ ರೇಡ್: ಲಕ್ಷಾಂತರ ರೂ. ಕ್ಯಾಶ್, ಮೊಬೈಲ್, ಸಿಮ್ ಕಾರ್ಡ್ ಪತ್ತೆ
ದಂಡದ ಮೊತ್ತದಲ್ಲಿ ರು.1,45,000 ಮೊತ್ತವನ್ನು ಮೃತ ಯುವಕನ ತಾಯಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 2020 ನೇ ಏಪ್ರಿಲ್ 24 ರಂದು ರಾತ್ರಿ ಈ ಐವರು ಗುಂಪು ಕಟ್ಟಿಕೊಂಡು ತನ್ನ ಮನೆ ಮುಂದೆ ಕುಳಿತಿದ್ದ ಚಿರಂಜೀವಿ ಬಳಿ ಬಂದು ಕಲಹ ಮಾಡಿದ್ದಾರೆ. ಅವರಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಕಾಶಿನಾಥ ಮತ್ತು ಜಯ ಅವರು ಚಿರಂಜೀವಿಗೆ ಬಡಿಗೆಯಿಂದ ಹೊಡೆದಿದ್ದಲ್ಲದೇ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ಬ್ರಹ್ಮ ಪುರ ಠಾಣೆಯ ಇನ್ಸಪೆಕ್ಟರ್ ಕಪೀಲ್ದೇವ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್. ಆರ್. ನರಸಿಂಹಲು ವಾದ ಮಂಡಿಸಿದ್ದರು.