ಮತ್ತೊಬ್ಬನೊಟ್ಟಿಗೆ ಮದುವೆ ಆದ ಬಳಿಕವೂ ದೈಹಿಕ ಸಂಪರ್ಕಕ್ಕೆ ಒತ್ತಾಯ: ಗೆಳತಿಯ ಖಾಸಗಿ ವಿಡಿಯೋ ಬಳಸಿ Blackmail: ಬಂಧನ
ದೈಹಿಕ ಸಂಪರ್ಕಕ್ಕೆ ಒಪ್ಪದ ಪರಿಚಿತ ವಿವಾಹಿತ ಮಹಿಳೆಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಬಂಧಿಸಿದ್ದಾರೆ.
ಬೆಂಗಳೂರು (ಜ.9) : ದೈಹಿಕ ಸಂಪರ್ಕಕ್ಕೆ ಒಪ್ಪದ ಪರಿಚಿತ ವಿವಾಹಿತ ಮಹಿಳೆಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ(west bengal) ಮೂಲದ ಸಮರ್ ಪರಮಾನಿಕ್((Samar paramanik) (47) ಬಂಧಿತ. ಈತನನ್ನು ಪಶ್ಚಿಮ ಬಂಗಾಳ ಮೂಲದ 21 ವರ್ಷದ ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಲೈಂಗಿಕ ಕಿರುಕುಳ: ಯುವಕನ ವಿರುದ್ಧ ಪ್ರತ್ಯೇಕ ಕೇಸು
ಆರೋಪಿ ಸಮರ್ ಹಲವು ವರ್ಷಗಳಿಂದ ಅವೆನ್ಯೂ ರಸ್ತೆ(Avenue Road)ಯ ಚಿನ್ನದ ಅಂಗಡಿಯಲ್ಲಿ ಅಕ್ಕಸಾಲಿಗನಾಗಿದ್ದ. ಕಬ್ಬನ್‌ಪೇಟೆ(Cubbonpete)ಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸಂತ್ರಸ್ತೆ ಬ್ಯೂಟಿಷಿಯನ್ ಕೋರ್ಸ್(Beautician course) ಮಾಡಲು 2019ರಲ್ಲಿ ಬೆಂಗಳೂರಿಗೆ ಬಂದು ಯಲಹಂಕ(Yalahanka)ದ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಕೆಲಸದಲ್ಲಿದ್ದಳು. ಆರೋಪಿ ಸಮರ್ ಗ್ರಾಹಕನಾಗಿ ಆಗಾಗ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದ. ಈ ವೇಳೆ ಇಬ್ಬರೂ ಒಂದೇ ರಾಜ್ಯದವರಾಗಿದ್ದರಿಂದ ಪರಿಚಯವಾಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.
ಕೆಲ ದಿನಗಳ ಬಳಿಕ ಇಬ್ಬರ ಪರಿಚಯ ಗಾಢಸ್ನೇಹಕ್ಕೆ ತಿರುಗಿ ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಈ ವೇಳೆ ಆರೋಪಿ ಸಂತ್ರಸ್ತೆಯ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದಿದ್ದ. ಬಳಿಕ ಸಂತ್ರಸ್ತೆಗೆ ಹೆಚ್ಚಿನ ಹಣದ ಆಮೀಷವೊಡ್ಡಿ ಡ್ಯಾನ್ಸ್ ಬಾರ್‌ಗೆ ಸೇರಿಸಿದ್ದ.
ವಿವಾಹದ ಬಳಿಕವೂ ಯುವತಿಗೆ ಕಿರುಕುಳ
ಕೆಲ ತಿಂಗಳ ಬಳಿಕ ಸಂತ್ರಸ್ತೆ ಅನಾರೋಗ್ಯದ ನೆಪವೊಡ್ಡಿ ಪಶ್ಚಿಮ ಬಂಗಾಳದ ಹುಟ್ಟೂರಿಗೆ ತೆರಳಿದ್ದಳು. ಬಳಿಕ ಅಲ್ಲಿ ಪೋಷಕರು ತೋರಿಸಿದ ಯುವಕನ ಜತೆಗೆ ವಿವಾಹ ಮಾಡಿಕೊಂಡು ಹೊಸ ಜೀವನ ಆರಂಭಿಸಿದ್ದಳು. ಕಳೆದ ಆರು ತಿಂಗಳ ಹಿಂದೆ ಸಂತ್ರಸ್ತೆಯು ಪತಿಯ ಜತೆಗೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದರು. ಈ ವಿಚಾರ ತಿಳಿದ ಸಮರ್, ಆಕೆಗೆ ಪದೇ ಪದೇ ಕರೆ ಮಾಡಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಆದರೆ, ಬೇರೆ ವ್ಯಕ್ತಿಯ ಜತೆಗೆ ವಿವಾಹವಾಗಿ ಹೊಸಜೀವನ ನಡೆಸುತ್ತಿರುವ ಸಂತ್ರಸ್ತೆ ಆರೋಪಿ ಜತೆಗೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ್ದಳು.
BENGALURU CRIME: ಪತಿಯ ಜತೆ ಸೇರಿ ಪ್ರಿಯಕರನ ಹತ್ಯೆ: ಶವದೊಂದಿಗೆ 6 ಕಿ.ಮೀ. ಟ್ರಿಪಲ್ ರೈಡ್!
ಇದರಿಂದ ಆಕ್ರೋಶಗೊಂಡ ಆರೋಪಿ ಸಮರ್, ಈ ಹಿಂದೆ ಸಂತ್ರಸ್ತೆ ಜತೆಗೆ ಕಳೆದಿದ್ದ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದ. ಈತನ ಕಾಟ ತಾಳಲಾರದೆ ಸಂತ್ರಸ್ತೆಯು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.