ಬಂಡೇ​ಮಠ ಶ್ರೀ ಸಾವು: ಸಾಕ್ಷ್ಯನಾಶಕ್ಕೆ ಯತ್ನ

  • ಬಂಡೇ​ಮಠ ಶ್ರೀ ಸಾವು: ಸಾಕ್ಷ್ಯನಾಶಕ್ಕೆ ಯತ್ನ
  • 3 ಆರೋಪಿಗಳಿಂದ ಮೊಬೈಲ್‌ ನಾಶ, ವಾಟ್ಸಪ್‌ ಡಿಲೀಟ್‌
  • ಎಫ್‌ಎಸ್ಸೆಲ್‌ಗೆ ರವಾನೆ
Bandemath Shri suicide case Attempt to destroy evidence ramangar rav

ರಾಮ​ನ​ಗರ (ನ.3) : ಕಂಚು​ಗಲ್‌ ಬಂಡೇ​ಮ​ಠದ ಶ್ರೀ ಬಸ​ವ​ಲಿಂಗ ​ಸ್ವಾ​ಮೀಜಿ ಆತ್ಮ​ಹತ್ಯೆ ಪ್ರಕ​ರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯ ಅವರು ಸಾಕ್ಷ್ಯನಾಶಕ್ಕೆ ಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ವೇಳೆ ಸುಮಾರು 6 ತಿಂಗಳ ವಾಟ್ಸ್‌ಆಪ್‌ ಚಾಟ್‌ ಅನ್ನು ಸಂಪೂರ್ಣವಾಗಿ ಡಿಲೀಟ್‌ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮೊಬೈಲ…ಗಳನ್ನು ಪೊಲೀಸರು ವಿಧಿ​ವಿ​ಜ್ಞಾನ ಪ್ರಯೋ​ಗಾ​ಲ​ಯಕ್ಕೆ ಕಳು​ಹಿಸಿದ್ದಾರೆ.

ಹನಿ ಲೇಡಿಯ ವಿಡಿಯೋ ಕಹಾನಿ! ಮತ್ತಷ್ಟು ಸ್ವಾಮೀಜಿಗಳು, ಮತ್ತಷ್ಟು ವಿಡಿಯೋ! ಪೊಲೀಸರೇ ದಂಗು!

ನೀಲಾಂಬಿಕೆ ಮೊದಲೇ ಪ್ಲಾನ್‌ ಮಾಡಿ ಹನಿಟ್ರ್ಯಾಪ್‌ಗೆ ಬಳಸಿದ್ದ ಮೊಬೈಲ… ನಾಶಪಡಿಸಿ ನಂತರ ಹೊಸ ಮೊಬೈಲ್‌ ಖರೀ​ದಿ​ಸಿ​ದ್ದಾಳೆ. ಆ ಹೊಸ ಮೊಬೈಲ… ನಲ್ಲಿರುವ ಮಾಹಿತಿಗಳನ್ನೂ ಡಿಲೀಚ್‌ ಮಾಡಿದ್ದಾಳೆ. ಈಗ ಮೂವರ ಮೊಬೈಲ…ನಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ವಶಪಡಿಸಿಕೊಂಡಿರುವ ಮೊಬೈಲ…ನಲ್ಲಿನ ಕಾಲ…ಹಿಸ್ಟರಿ, ವಾಟ್ಸ… ಆಪ್‌ ​ಮೆ​ಸೇಜ್‌ ರಿಕವರಿಗಾಗಿ ಬೆಂಗಳೂರಿನ ಎಫ್‌ಎಸ್‌ಎಲ…ಗೆ ಕಳುಹಿಸಲಾಗಿದೆ. ಸದ್ಯ ವೈರಲ… ಆಗಿರುವ ವಿಡಿಯೋಗಳನ್ನೇ ಆಧಾರವಾಗಿರಿಸಿಕೊಂಡು ಅದನ್ನು ರೆಕಾರ್ಡ್‌ ಮಾಡಿರುವ ಮೂಲ ಮೊಬೈಲ…ಗಾಗಿ ಹುಡುಕಾಟ ನಡೆ​ಸು​ತ್ತಿ​ದ್ದಾ​ರೆ. ಆ ಮೊಬೈಲ್‌ ಪತ್ತೆ​ಯಾ​ದರೆ ಪ್ರಕ​ರ​ಣಕ್ಕೆ ಪ್ರಮುಖ ಸಾಕ್ಷ್ಯ ಸಿಕ್ಕಂತಾಗಲಿದೆ.

ಮೂವರು ಆರೋ​ಪಿ​ಗಳು ಹನಿಟ್ರ್ಯಾಪ್‌ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾ​ಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನ​ಲಾ​ಗಿ​ದೆ.

ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್, ಮೂವರ ಬಂಧನ

ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ವಿಚಾರಣೆ

ಮಾಗಡಿ ಪೊಲೀ​ಸರು ವೀರ​ಶೈವ ಸಮಾ​ಜದ ಮುಖಂಡ ಸಚ್ಚಿ​ದಾ​ನಂದ ​ಮೂರ್ತಿ ಅವ​ರನ್ನು ವಿಚಾ​ರಣೆ ನಡೆಸಿ ಹೇಳಿಕೆ ಪಡೆ​ದು​ಕೊಂಡಿ​ದ್ದಾರೆ. ಆತ್ಮ​ಹ​ತ್ಯೆಗೂ ಮುನ್ನ ಶ್ರೀ ಬಸ​ವ​ಲಿಂಗ​ ಸ್ವಾ​ಮೀಜಿ ಬರೆ​ದಿದ್ದ ಡೆತ್‌ನೋಟ್‌ನಲ್ಲಿ ಸಚ್ಚಿ​ದಾ​ನಂದ ಮೂರ್ತಿ ಹೆಸರು ಉಲ್ಲೇಖಿ​ಸಿ​ದ್ದರು. ಅದರಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀ​ಸರು ನೋಟಿಸ್‌ ನೀಡಿ ಬೆಂಗ​ಳೂರು ಬಸ​ವೇ​ಶ್ವರ ನಗರ ವಾಸಿ​ಯಾದ ಸಚ್ಚಿ​ದಾ​ನಂದ​ಮೂರ್ತಿಯನ್ನು ವಿಚಾ​ರಣೆಗೆ ಒಳಪಡಿ​ಸಿ​ದರು. ಪ್ರಕರಣದಲ್ಲಿ ಈಗಾಗಲೇ ಬಂಧಿತ ಮೂವರು ಆರೋಪಿಗಳು ಸ್ವಾಮೀಜಿಯನ್ನು ಹನಿಟ್ರ್ಯಾಪ್‌ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದನಿಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾ​ಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನ​ಲಾ​ಗಿ​ದೆ.

Latest Videos
Follow Us:
Download App:
  • android
  • ios