ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್, ಮೂವರ ಬಂಧನ
ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ಗೆ ಕೊನೆಗೂ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಭಂದ, ಸ್ವಾಮೀಜಿ, ಯುವತಿ, ವಕೀಲ ಸೇರಿದಂತೆ ಮೂವರನ್ನು ಖಾಕಿ ಬಂಧಿಸಿದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಾಗಡಿ (ಅ.30): ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ಗೆ ಕೊನೆಗೂ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಭಂದ, ಸ್ವಾಮೀಜಿ, ಯುವತಿ, ವಕೀಲ ಸೇರಿದಂತೆ ಮೂವರನ್ನು ಖಾಕಿ ಬಂಧಿಸಿದೆ. ದಾಯಾದಿ ಕಲಹಕ್ಕೆ ಸ್ವಾಮೀಜಿಯನ್ನು ಸಹೋದರನೇ ಹನಿಟ್ರ್ಯಾಪ್ ಮಾಡಿಸುವ ಮೂಲಕ ಖೆಡ್ಡಾಗೆ ಕೆಡುವಿರೋ ರೋಚಕ ಮಾಹಿತಿ ಹೊರಗೆ ಬಿದ್ದಿದೆ. ಕ್ಷಣಕ್ಷಣಕ್ಕೂ ಬಿಗ್ ಟ್ವಿಸ್ಟ್, ದಿನದಿಂದ ದಿನಕ್ಕೆ ರೋಚಕತೆ ಪಡೆದಿದ್ದ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಶ್ರೀ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಪಟ್ಟಂತೆ ಮಾಗಡಿ ಪೋಲಿಸರು ಮೂವರನ್ನ ಬಂಧಿಸಿದ್ದಾರೆ. ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರದ ದ್ವೀತಿಯ ವರ್ಷಯ ಇಂಜಿನಿಯರಿಂಗ್ ವಿಧ್ಯಾರ್ಥಿನಿ ನಿಲಾಂಬಿಕೆ ಅಲಿಯಾಸ್ ಚಂದು, ತುಮಕೂರಿನ ನಿವೃತ್ತ ಶಿಕ್ಷಕ ವಕೀಲನಾಗಿರುವ ಮಹದೇವಯ್ಯ ಬಂಧಿತ ಆರೋಪಿಗಳು, ಅಂದಹಾಗೆ ಅಕ್ಟೋಬರ್ 24 ರಂದು ಬಂಡೇಮಠದ ಶ್ರೀಗಳು ತಮ್ಮ ವೈಯಕ್ತಿಕ ಕೊಠಡಿಯಲ್ಲಿ 8 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರ ಭಕ್ತ ಸಮೂಹದಲ್ಲಿ ಸಾಕಷ್ಟು ಆತಂಕಕ್ಕೂ ಕಾರಣವಾಗಿತ್ತು. ಆ ನಂತರ ಶಿಕ್ಷಕ ರಮೇಶ್ ದೂರಿನ ಮೇರೆಗೆ ಕುದೂರು ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು.
ಆ ನಂತರ ಕೊಠಡಿಯಲ್ಲಿ ಡೆತ್ ನೋಟ್ ಸಿಕ್ಕಂತಹ ಹಿನ್ನಲೆಯಲ್ಲಿ ಕುದೂರು ಠಾಣೆ ಪೋಲಿಸರು ಐಪಿಸಿ 306 ಅಡಿಯಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ಅದರ ಬೆನ್ನಲ್ಲೇ ಸ್ವಾಮೀಜಿಯವರ ಅರೆ ನಗ್ನ ಹಾಗೂ ಬೆತ್ತಲಾಗಿರುವ ವಿಡಿಯೋ ಗಳು ಸಹ ವೈರಲ್ ಆಗಿತ್ತು. ಎರಡನೇ ವಿಡಿಯೋದಲ್ಲಿ ಯುವತಿಯ ವಿಡಿಯೋ ಕೂಡ ರಿವಿಲ್ ಆಗಿತ್ತು. ಈ ನಿಟ್ಟಿನಲ್ಲೂ ಕೂಡ ಪೋಲಿಸರು ತನಿಖೆ ನಡೆಸುತ್ತಿದ್ದರು. ಜೊತಗೆ ಡೆತ್ ನೋಟ್ ನಲ್ಲಿ ಕಣ್ಣೂರು ಮಠದ ಸ್ವಾಮೀಜಿ ಹಾಗೂ ಯುವತಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಅಂಶಗಳನ್ನು ಇಟ್ಟುಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿ ಕೊನೆಗೂ ಮೂವರನ್ನು ಬಂಧಿಸಿದ್ದಾರೆ.
ಅಂದಹಾಗೆ ಸ್ವಾಮೀಜಿಯನ್ನ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುವುದರ ಹಿಂದೆ ದಾಯಾದಿ ಕಲಹ, ಮಠದ ಮೇಲೆ ಹಿಡಿತ ಸಾಧಿಸೋದು ಹಳೆ ದ್ವೇಷವೇ ಕಾರಣವಾಗಿತ್ತು. ಬಂಡೇ ಮಠದ ಬಸವಲಿಂಗ ಶ್ರೀ ಹಾಗೂ ಆರೋಪಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಇಬ್ಬರು ಕೂಡ ಅಣ್ಣತಮ್ಮಂದಿರು, ಇಬ್ಬರು ಕೂಡ ಬಂಡೇಮಠದ ಗ್ರಾಮದವರು. ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಜೊತೆ ಕಣ್ಣೂರು ಸ್ವಾಮೀಜಿ ಸಾಕಷ್ಟು ಅನ್ಯೋನ್ಯವಾಗಿದ್ದರು. ಸಿದ್ದಗಂಗಾ ಮಠದ ಎಲ್ಲಾ ವ್ಯವಹಾರಗಳನ್ನು ಕಣ್ಣೂರು ಶ್ರೀಗಳೇ ನೋಡಿಕೊಳ್ಳುತ್ತಿದ್ದರು. ಜೊತೆಗೆ ಸಂಸ್ಕೃತ ಶಿಕ್ಷಕನಾಗಿ ಕೂಡ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದ್ರೆ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಪಟ್ಟಾಧಿಕಾರ ವಹಿಸಿಕೊಂಡ ಸಿದ್ದಲಿಂಗ ಶ್ರೀಗಳು ಕಣ್ಣೂರು ಸ್ವಾಮೀಜಿಯನ್ನು ಮಠದಿಂದ ದೂರ ಇಟ್ಟಿದ್ದರು.
ಸಿದ್ದಲಿಂಗ ಶ್ರೀಗಳ ಜೊತೆ ಬಂಡೇಮಠದ ಬಸವಲಿಂಗ ಶ್ರೀ ಸಾಕಷ್ಟು ಆಪ್ತರಾಗಿದ್ದರು. ಈಗಾಗಿ ಬಂಡೇಮಠದ ಶ್ರೀಗಳ ಮೇಲೆ ಕಣ್ಣೂರು ಶ್ರೀಗಳಿಗೆ ಅಸೂಯೆ ಬೆಳೆದಿತ್ತು. ಅಲ್ಲದೇ ಬಂಡೇಮಠದ ಗ್ರಾಮದ ಪೂರ್ವಾಶ್ರಮದ ಜಮೀನು ವಿಚಾರವಾಗಿ ಇಬ್ಬರ ನಡುವೆ ವ್ಯಾಜ್ಯ ಇದ್ದು, ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಕ್ಕೂ ಕೂಡ ಹಲವು ಬಾರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈಗಾಗಿ ಹೇಗಾದರೂ ಮಾಡಿ ಬಸವಲಿಂಗ ಶ್ರೀಗಳ ಹೆಸರನ್ನು ಕೆಡಿಸೋದಕ್ಕೆ ಕಣ್ಣೂರು ಶ್ರೀ ಪ್ಲಾನ್ ಮಾಡಿದ್ದರು. ಈಗಾಗಿ ಸ್ವಾಮೀಜಿ ಜೊತೆ ಅನ್ಯೋನ್ಯತೆ ಇದ್ದ ದೊಡ್ಡಬಳ್ಳಾಪುರ ಮೂಲದ ನಿಲಾಂಬಿಕೆಯನ್ನು ಬಳಸಿಕೊಂಡಿದ್ದರು.
ಇನ್ನೂ ದೊಡ್ಡಬಳ್ಳಾಪುರದಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ್ ಮಾಡ್ತಿದ್ದ ನಿಲಾಂಬಿಕೆ ಅಲಿಯಾಸ್ ಚಂದು ಆಗಾಗ್ಗೆ ತನ್ನ ಅಜ್ಜಿಯ ಮನೆಯಾದ ತುಮಕೂರಿನ ಮನೆಗೆ ಬರ್ತಾ ಇದ್ದಳು. ಆ ಮನೆ ಸಿದ್ದಗಂಗಾ ಮಠದ ಸಮೀಪವೇ ಇರೋದ್ರಿಂದ ಮಠದ ಭಕ್ತೆಯಾಗಿದ್ದಳು. ಹಲವು ಸ್ವಾಮೀಜಿಯ ಪರಿಚಯ ಕೂಡ ಇತ್ತು. ಆದ್ರೆ ಇದೇ ವೇಳೆ ಕೆಲ ಮಠಾಧೀಶರ ಬಗ್ಗೆ ನಿಲಾಂಬಿಕೆ ಕೆಟ್ಟದಾಗಿ ಮಾತನಾಡಿರೊದನ್ನ ಬಂಡೇಮಠದ ಸ್ವಾಮೀಜಿ ವಿಡಿಯೋ ಮಾಡಿಕೊಂಡು ಸಿದ್ದಗಂಗಾ ಮಠದ ಶ್ರೀಗಳಿಗೆ ತೋರಿಸಿದ್ದರು.
ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕಣ್ಣೂರು ಮಠದ ಸ್ವಾಮಿ ಬಂಧನ
ಇದೇ ವಿಚಾರವಾಗಿ ಮಠದಿಂದ ಆಕೆಯನ್ನು ದೂರ ಇಟ್ಟಿದ್ದರು. ಇದೇ ವಿಚಾರವಾಗಿ ಬಸವಲಿಂಗ ಶ್ರೀಗಳ ಮೇಲೆ ದ್ವೇಷ ಇತ್ತು. ಮತ್ತೊಂದೆಡೆ ಮಠದಲ್ಲಿ ಶಿಕ್ಷಣನಾಗಿ ಕೆಲಸ ಮಾಡ್ತಿದ್ದ ಆರೋಪಿ ಮಹದೇವಯ್ಯನಿಗೆ ಕೂಡ ಕೆಲವೊಂದು ವಿಚಾರಗಳಲ್ಲಿ ಬಸವಲಿಂಗ ಶ್ರೀಗಳ ಮೇಲೆ ಕೋಪ ಇತ್ತು. ಈಗಾಗಿ ಮೂವರು ಕೂಡ ಜೊತೆಗೂಡುತ್ತಾರೆ. ಬಸವಲಿಂಗ ಶ್ರೀಗಳ ಜೊತೆ ಅನ್ಯೋನ್ಯವಾಗಿ ವಿಡಿಯೋ ಮಾಡಿಕೊಡುವಂತೆ ಕಣ್ಣೂರು ಶ್ರೀಗಳು ನಿಲಾಂಬಿಕೆಗೆ ತಿಳಿಸಿರುತ್ತಾರೆ. ಅದರಂತೆ ಕಳೆದ ಫೆಬ್ರವರಿಯಿಂದ ಪ್ಲಾನ್ ಮಾಡಿ ಏಪ್ರೀಲ್ ನಿಂದ ವಿಡಿಯೋವನ್ನು ಮಾಡಿಕೊಳ್ಳಲು ಶುರು ಮಾಡ್ತಾರೆ, ಆನಂತರ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿರುವ ವಿಡಿಯೋಗಳನ್ನು ಕಣ್ಣೂರು ಸ್ವಾಮೀಜಿಗೆ ನಿಲಾಂಬಿಕೆ ಕಳಿಸಿರುತ್ತಾಳೆ. ಅದನ್ನ ವಕೀಲ ಮಹದೇವಯ್ಯನಿಗೆ ಕಣ್ಣೂರು ಶ್ರೀ ಕಳಿಸಿಕೊಟ್ಟು ಎಡಿಟ್ ಮಾಡಿ ಸಿಡಿಗಳಾಗಿ ಪರಿವರ್ತಿಸುವಂತೆ ಕೊಟ್ಟಿರುತ್ತಾರೆ. ಅದರಂತೆ ಮಹದೇವಯ್ಯ ತುಮಕೂರಿನಲ್ಲೇ ಕುಳಿತು ನಿಲಾಂಬಿಕೆಯ ಮುಖ ಬರದಂತೆ ಎಡಿಟ್ ಮಾಡಿ ಸಿಡಿಗಳನ್ನು ಮಾಡಿ ಕೆಲ ವೀರಶೈವ ಮುಖಂಡರಿಗೆ ಕಳಿಸಿರುತ್ತಾನೆ. ಈ ವಿಚಾರ ಸ್ವಾಮೀಜಿ ಕಿವಿಗೆ ವೀರಶೈವ ಮುಖಂಡರು ತಿಳಿಸಿರುತ್ತಾರೆ. ಇದರಿಂದ ಬೆದರಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವು, ಡೆತ್ ನೋಟ್ ನಲ್ಲಿ ಮಹಿಳೆ ಬಗ್ಗೆ ಉಲ್ಲೇಖ!
ಪ್ರಕರಣ ಸಂಭಂದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿದ್ದು, ಇನ್ನೂಳಿದ ಇಬ್ಬರು ಆರೋಪಿಗಳನ್ನು ಶೀಘ್ರವೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ. ಒಟ್ಟಾರೆ ಸ್ವಾಮೀಜಿ ವಿರುದ್ದ ಷಡ್ಯಂತ್ರ ನಡೆಸಿರೋದು ಬೆಳಕಿಗೆ ಬಂದಿದ್ದು ಮೂವರನ್ನು ಬಂಧಿಸಿದ್ದಾರೆ.