ಬೆಂಗಳೂರು(ಜ.21): ಹಲ್ಲೆ ಯತ್ನ ನಡೆಸುತ್ತಿದ್ದ ಕುಖ್ಯಾತ ದರೋಡೆ ಕೇಸ್ ಆರೋಪಿ ರಾಜೇಶ್ ಅಲಿಯಾಸ್ ಲೂಸ್‌ ಬಲಗಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಬ್ರಹ್ಮದೇವರಗುಡ್ಡದಲ್ಲಿ ನಡೆದಿದೆ.

ರಾಜೇಶ್ ಅಲಿಯಾಸ್ ಲೂಸ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ತಲೆ ಮರೆಸಿಕೊಂಡಿದ್ದ ಈ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೀಗ ಕೊನೆಗೂ ಪೊಲೀಸರು ಆತನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಗೆ ಆಸ್ಪತ್ರೆಯೊಂದರಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ. 

ಎದುರಾಳಿಯ ಹತ್ಯೆಗೆ ಸಂಚು ರೂಪಿಸಿದ್ದ ಕಿಡಿಗೇಡಿಗೆ ಗುಂಡೇಟು

ಆಗಿದ್ದೇನು?  

ಹಲವು ದರೋಡೆ ಕೇಸ್‌ನಲ್ಲಿ ಬೇಕಾಗಿದ್ದ ಆರೋಪಿ ರಾಜೇಶ್​ ಹಾಗೂ ಇನ್ನಿತರ ಮೂವರು ಆರೋಪಿಗಳು ಜ.17ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿಂಜಾ ಕಾರ್ಟ್ ಕಂಪನಿಯಲ್ಲಿ ದರೋಡೆ ನಡೆಸಿದ್ದರು. ಏಕಾಏಕಿ ಕಂಪನಿಗೆ ನುಗ್ಗಿದ್ದ ಆರೋಪಿಗಳು ಚಾಕು ತೋರಿಸಿ ದರೋಡೆ ನಡೆಸಿದ್ದರು. ಇದಕ್ಕೂ ಮೊದಲು ಹಲವಾರು ಕಡೆ ಈತ ಮೊಬೈಲ್ ಕಳ್ಳತನವನ್ನೂ ಮಾಡಿದ್ದ. 

ಅತ್ಯಾಚಾರಕ್ಕೊಳಗಾಗಿ ಯುವತಿ ಸಾವು: ಶವ ಸಾಗಿಸಲು ನೆರವಾದ ಪೊಲೀಸರು

ಹೀಗಿರುವಾಗ ಈ ಮಾಹಿತಿ ಪಡೆದ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಬ್ಯಾಡರಹಳ್ಳಿ ಇನ್ಸ್ ಪೆಕ್ಟರ್ ರಾಜೀವ್ ಗೌಡ, ಆರೋಪಿ ರಾಜೇಶ್ ಬಲಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.