ಬೆಂಗಳೂರು(ಡಿ.19): ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಯುವತಿಯ ಶವ ಸಾಗಿಸಲು ಪೊಲೀಸರು ನೆರವಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ. 

ಕಳೆದ 16 ರಂದು ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಸ್ಸಾಂ ಮೂಲದ ಯುವತಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಗೂ ಹಣವಿಲ್ಲದೆ ಯುವತಿಯ ಪೋಷಕರು ಕಣ್ಣೀರಿಟ್ಟಿದ್ದರು. ಯುವತಿ ಶವವನ್ನು ಅಸ್ಸಾಂಗೆ ತೆಗೆದುಕೊಂಡು ಹೋಗಲು ಯುವತಿ ಪೋಷಕರು ಪರದಾಡುತ್ತಿದ್ದರು. 

ಆಟೋದಲ್ಲಿ ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ಹೀಗಾಗಿ ಯುವತಿ ಪೋಷಕರಿಗೆ ನೆರವಾದ ಬ್ಯಾಡರಹಳ್ಳಿ ಪೊಲೀಸರು ಸ್ಥಳದಲ್ಲೇ 15 ಸಾವಿರ ಹೊಂದಿಸಿ  ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ವಿಜಯನಗರ ಉಪ‌ವಿಭಾಗ ಎಸಿಪಿ ನಂಜುಂಡೇಗೌಡ ಹಾಗೂ ಬ್ಯಾಡರಹಳ್ಳಿ ಪಿಎಸ್ ಐ ವಸೀಂವುಲ್ಲಾ ಮತ್ತು ತಂಡದಿಂದ ಆರ್ಥಿಕ‌ನೆರವಿನ ಮೂಲಕ ಯುವತಿಯ ಶವವನ್ನ ಅಂಬ್ಯುಲೆನ್ಸ್ ಮೂಲಕ ಅಸ್ಸಾಂಗೆ ಕರೆದೊಯ್ಯಲಾಗಿದೆ.