ಇಸ್ಲಾಮಾಬಾದ್(ನ.  11)   ಪಾಕಿಸ್ತಾನದಲ್ಲಿ ಧರ್ಮಾಂಧರು ಕ್ರೌರ್ಯ ಮೆರೆದಿದ್ದಾರೆ. ಧರ್ಮನಿಂದನೆ ಆರೋಪದ ಮೇಲೆ ಗುಂಪೊಂದು ಕ್ರಿಶ್ಚಿಯನ್ ಗೆ  ಸೇರಿದ ತಾಯಿ ಮತ್ತು ಮಗನನ್ನು ನಿರ್ದಯವಾಗಿ ಹತ್ಯೆ ಮಾಡಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್ವಾಲಾ ಪಟ್ಟಣದಲ್ಲಿ ಘೋರ ಘಟನೆ ನಡೆದಿದೆ.   ತಾಯಿ ಯಾಸ್ಮಿನ್ ಮತ್ತು ಪುತ್ರ ಉಸ್ಮಾನ್ ಮಾಸಿಹ್  ರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಸ್ಲಿಂ ಸಮುದಾಯದವರೊಂದಿಗೆ ಘಟನೆಗೂ ಮುನ್ನ ವಾಗ್ವಾದ ನಡೆದಿತ್ತು.

ಬೈಡನ್ ಬಂದ ಮೇಲೆ ಪಾಕಿಸ್ತಾನದ ಕತೆ ಏನು?

ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳೀ ಬಗ್ಗೆ ಮಾತನಾಡುತ್ತಲೇ ಬಂದಿವೆ. ಭಾಋತ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯುವ ಕೆಲಸ ಮಾಡುತ್ತಿದೆ.  ಆದರೆ ಪಾಕಿಸ್ತಾನ ಮಾತ್ರ ತನಗೆ ಏನೂ ಗೊತ್ತಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ.

ಕ್ರಿಶ್ಚಿಯನ್ ಕುಟುಂಬದ ಮೇಲಿನ ದಾಳಿ ನಂತರ ಪ್ರತಿಕ್ರಿಯಿಸಿರುವ  ಅಕಾಲಿ ದಳದ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ, 'ಪಾಕಿಸ್ತಾನ ಸರ್ಕಾರ ಇಂತಹ ಘಟನೆಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ನಾವು ಮತ್ತೆ ಮತ್ತೆ ನೋಡಿದ್ದೇವೆ. ಯುಎನ್ ಮಧ್ಯಪ್ರವೇಶಿಸಲು ಸರಿಯಾದ ಕಾಲ ಇದು'  ಎಂದಿದ್ದಾರೆ.

ಇನ್ನೊಂದು ಕಡೆ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿಸಿಕೊಂಡು ಕ್ರಿಶ್ಚಿಯನ್ ಹುಡುಗಿಯೊಬ್ಬಳನ್ನು  ಮದುವೆ ಮಾಡಿದ್ದನ್ನು ಅಸಿಂಧುಗೊಳಿಸಿದ್ದ ಕರಾಚಿಯ ಪಾದ್ರಿ ಮೇಲೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.