ಮಕ್ಕಳಾಗಲು ಸಹಾಯ ಮಾಡುವೆ ಎಂದು ಅತ್ಯಾಚಾರಕ್ಕೆ ಯತ್ನ: ಮುಸ್ಲಿಂ ಧರ್ಮಗುರುವಿನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಮಹಿಳೆ
ಅಸ್ಸಾಂ: ಅತ್ಯಾಚಾರವೆಸಗಲು ಬಂದ ಮುಸ್ಲಿಂ ಧರ್ಮಗುರುವಿನ ಮರ್ಮಾಂಗವನ್ನು ಮಹಿಳೆಯೊಬ್ಬರು ಕತ್ತರಿಸಿದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಬರಲಿಮರಿ ( Baralimari)ಗ್ರಾಮದಲ್ಲಿ ನಡೆದಿದೆ. ಹೀಗೆ ಮಹಿಳೆ ಮೇಲೆ ಅತ್ಯಚಾರಕ್ಕೆ ಮುಂದಾಗಿ ಮರ್ಮಾಂಗ ಕಳೆದುಕೊಂಡ ವ್ಯಕ್ತಿಯನ್ನು ಉಸ್ಮನ್ ಆಲಿ ಎಂದು ಗುರುತಿಸಲಾಗಿದೆ.
ಉಸ್ಮಾನ್ ಆಲಿ ಅಸ್ಸಾಂನ ದರ್ರಾಂಗ್ (Darrang) ಜಿಲ್ಲೆಯ ಧುಲಾ (Dhula) ಗ್ರಾಮದವನಾಗಿದ್ದು, ಮಕ್ಕಳಿಲ್ಲದ ದಂಪತಿಗೆ ಮಕ್ಕಳಾಗುವುದಕ್ಕೋಸ್ಕರ ಸಹಾಯ ಮಾಡಲು ಬಂದಿದ್ದ ಎಂದು ವರದಿ ಆಗಿದೆ. ಆದರೆ ಮನೆಗೆ ನುಗ್ಗುತ್ತಿದ್ದಂತೆ ಆತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದು, ದಂಗಾದ ಮಹಿಳ ಮಾನ ಉಳಿಸಿಕೊಳ್ಳಲು ಹರಿತವಾದ ವಸ್ತುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಈ ಕೃತ್ಯವೆಸಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಈ ವಿಚಾರ ಊರಲ್ಲಿ ಸುದ್ದಿಯಾಗುತ್ತಿದ್ದಂತೆ ಉಸ್ಮಾನ್‌ನನ್ನು ಮೊದಲಿಗೆ ಮೊರಿಗಾಂವ್‌ನಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಗುವಾಹಟಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತನ್ನ ಮರ್ಮಾಂಗವನ್ನೇ ಕೊಯ್ದುಕೊಂಡ ಭೂಪ!
ಜೂನ್ 2021ರಲ್ಲಿ ಉತ್ತರಪ್ರದೇಶ ಮುಜಾಫರ್‌ನಗರ (Muzaffarnagar) ಜಿಲ್ಲೆಯ ಶಿಕಾರ್‌ಪುರದಲ್ಲಿಯೂ (Shikarpur) ಇಂತಹದ್ದೇ ಘಟನೆಯೊಂದು ನಡೆದಿತ್ತು. ಮೂರನೇ ಮದ್ವೆಯಾಗಲು ಮುಂದಾಗಿದ್ದ ಮುಸ್ಲಿಂ ಧರ್ಮಗುರು ಮೌಲ್ವಿ ವಕೀಲ್ ಅಹ್ಮದ್ ಎಂಬಾತನ ಮರ್ಮಾಂಗಕ್ಕೆ ಆತನ ಪತ್ನಿಯೇ ಕತ್ತರಿ ಹಾಕಿದ್ದಳು. ಹೀಗೆ ಗಂಡನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಮಹಿಳೆಯನ್ನು ಹಝ್ರಾ ಎಂದು ಗುರುತಿಸಲಾಗಿತ್ತು. ಆಕೆ ಮೌಲ್ವಿಯ ಮೊದಲ ಹೆಂಡತಿ ಆಗಿದ್ದಳು.
ಪತ್ನಿ ಹಜ್ರಾ (Hajra) ತನ್ನ ಅವಿವಾಹಿತ ಮಗಳಿಗೆ ಮದ್ವೆ ಮಾಡಿಸಲು ಮುಂದಾದ ಸಂದರ್ಭದಲ್ಲಿ ಇತ್ತ ಮೌಲ್ವಿ ಮೂರನೇ ಬಾರಿ ಮದ್ವೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದ, ಇದರಿಂದ ದಂಪತಿ ಮಧ್ಯೆ ವಾಗ್ಯುದ್ಧ ಶುರುವಾಗಿತ್ತು. ಈ ವೇಳೆ ಕುಪಿತಗೊಂಡ ಪತ್ನಿ ಮರ್ಮಾಂಗ ಇದ್ದರೆ ತಾನೇ ಮದ್ವೆ ಆಟ ಎಂದು ಆತನ ಖಾಸಗಿ ಭಾಗಕ್ಕೆ ಕತ್ತರಿ ಹಾಕಿದ್ದಳು. ಘಟನೆ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಆಯುಧವನ್ನು ವಶಕ್ಕೆ ಪಡೆದು ಆಕೆಯನ್ನು ಜೈಲಿಗಟ್ಟಿದ್ದರು.
