ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನು ಕುಡುಕ ಭೂಪನೊಬ್ಬ ತಾನೇ ಕೊಯ್ದುಕೊಂಡಿದ್ದಾನೆ. ತಾಲೂಕಿನ ಗಾವಡಗೆರೆ ಹೋಬಳಿ ತೊಂಡಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗೋವಿಂದಶೆಟ್ಟರ ಪುತ್ರ ರಾಜಶೆಟ್ಟಿ(45) ಕಳೆದ ರಾತ್ರಿ ಕುಡಿದು ಮನೆಗೆ ಬಂದು ಸಂಯಮ ಕಳೆದುಕೊಂಡು ಅವಾಂತರ ಸೃಷ್ಟಿಸಿಕೊಂಡಿದ್ದಾನೆ.

 ಹುಣಸೂರು: ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನು ಕುಡುಕ ಭೂಪನೊಬ್ಬ ತಾನೇ ಕೊಯ್ದುಕೊಂಡಿದ್ದಾನೆ. ತಾಲೂಕಿನ ಗಾವಡಗೆರೆ ಹೋಬಳಿ ತೊಂಡಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗೋವಿಂದಶೆಟ್ಟರ ಪುತ್ರ ರಾಜಶೆಟ್ಟಿ(45) ಕಳೆದ ರಾತ್ರಿ ಕುಡಿದು ಮನೆಗೆ ಬಂದು ಸಂಯಮ ಕಳೆದುಕೊಂಡು ಅವಾಂತರ ಸೃಷ್ಟಿಸಿಕೊಂಡಿದ್ದಾನೆ.

ಪಾನಮತ್ತರಾಗಿ ಚಾಕುವಿನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡು ಕಿರುಚಿಕೊಂಡಿದ್ದಾರೆ. ಗ್ರಾಮಸ್ಥರು ಇವನ ಕಿರುಚಾಟ ಕಂಡು ಓಡಿಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಅಮಲಲ್ಲಿ ಸ್ನೇಹಿತನ ಮರ್ಮಾಂಗಕ್ಕೆ ಕತ್ತರಿ

ಒಡಿಶಾ: ಯುವಕನೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಮರ್ಮಾಘಾತ ನೀಡಿದ್ದಾನೆ. ಕುಡಿದ ಮತ್ತಿನಲ್ಲಿ ಸ್ನೇಹಿತನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ 30 ವರ್ಷದ ಅಕ್ಷಯ್ ರೌತ್ ಎಂಬಾತ ತನ್ನ 32 ವರ್ಷದ ಸ್ನೇಹಿತ ಭಾಗ್ಬಾತ್ ದಾಸ್‌ ಖಾಸಗಿ ಭಾಗಕ್ಕೆ ಕತ್ತರಿ ಹಾಕಿದ್ದಾನೆ. ಕೇಂದ್ರಪಾರಾ ಜಿಲ್ಲೆಯಲ್ಲಿ ಬರುವ ರಾಜ್ನಾಗರ್ ಪೊಲೀಸ್ ಠಾಣೆ ಪ್ರದೇಶ ವ್ಯಾಪ್ತಿಗೆ ಬರುವ ಪೆಂಥಾ ಬೀಚ್‌ನಲ್ಲಿ ಕುಡಿದು ಪಾರ್ಟಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಭಗ್ಬಾತ್ ದಾಸ್‌ ಹಾಗೂ ಸ್ನೇಹಿತ ಅಕ್ಷಯ್ ರೌತ್ ( Akshya Rout) ಬೀಚ್‌ನಲ್ಲಿ ಪಾರ್ಟಿ ಮಾಡಲು ಹೋಗಿದ್ದಾರೆ. ನಂತರ ಬೀಚ್‌ನಲ್ಲಿ ಕುಡಿಯುತ್ತಾ ಕುಳಿತ ಇವರಿಗೆ ಕಿಕ್ ಏರಿದ್ದು, ಇಬ್ಬರೂ ಮಾತಿನ ಚಕಮಕಿ ನಡೆಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಇವರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಅಕ್ಷಯ್ ರೌತ್ ಹರಿತವಾದ ಆಯುಧದಿಂದ ಭಗ್ಬಾತ್ ದಾಸ್‌ನ (Bhagabat Das) ಮರ್ಮಾಂಗವನ್ನು ಕತ್ತರಿಸಿದ್ದಾನೆ. 

ಇವರಿಬ್ಬರು ಆಟೋ ಬುಕ್ ಮಾಡಿ ಜೊತೆಯಾಗಿ ಬೀಚ್‌ಗೆ ಪಾರ್ಟಿ ಮಾಡಲು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇವರನ್ನು ಬೀಚ್‌ಗೆ ಬಿಟ್ಟ ಆಟೋ ಚಾಲಕನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾನೆ. ಇತ್ತ ಗಾಯಗೊಂಡ ಭಗ್ಬಾತ್ ದಾಸ್‌ನನ್ನು ರಾಜ್ನಾನಗರದಲ್ಲಿರುವ (Rajnagar) ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ನಂತರ ಆತನನ್ನು ಕಥಕ್‌ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 307 (ಕೊಲೆಗೆ ಯತ್ನಿಸಿದ ಪ್ರಕರಣ) ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ

5 ಮದ್ವೆಯಾದವ 5ನೇ ಹೆಂಡ್ತಿಯಿಂದ ಬರ್ಬರವಾಗಿ ಹತ್ಯೆಯಾದ: ಮರ್ಮಾಂಗ ಕತ್ತರಿಸಿ ಎಸೆದ ಪತ್ನಿ

ಐದು ಮದ್ವೆಯಾದ ವ್ಯಕ್ತಿಯನ್ನು ಆತನ 5ನೇ ಹೆಂಡ್ತಿಯೊಬ್ಬಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೂಲಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ. ಐದು ಮದ್ವೆಯಾಗಿದ್ದ ಈತನನ್ನು ಈತನ 5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ ಆತನ ದೇಹವನ್ನು ದೂರ ಎಸೆಯುವ ಮೊದಲು ಆತನ ಮರ್ಮಾಂಗವನ್ನು ಕತ್ತರಿಸಿ ಎಸೆದಿದ್ದಾಳೆ.