* ಮನೆ ಮಾರಾಟದ ಹಣ ಹಂಚಿಕೆ ವಿಚಾರವಾಗಿ ಪತಿ ಜೊತೆ ಅರ್ಚನಾ ಜಗಳ* ಕಿರುಕುಳ ನೀಡುತ್ತಿದ್ದಾನೆಂದು ಪತಿ ವಿರುದ್ಧ ದೂರು* ಮೃತಳ 2ನೇ ಪತಿ ಸೇರಿ ಮೂವರ ಬಂಧನ
ಬೆಂಗಳೂರು(ಡಿ.30): ಹೊಸ ರೋಡ್ ಜಂಕ್ಷನ್ ಸಮೀಪ ಮಂಗಳವಾರ ರಾತ್ರಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅರ್ಚನಾ ರೆಡ್ಡಿ(Archana Reddy) ಕೊಲೆ(Murder) ಪ್ರಕರಣ ಸಂಬಂಧ ಮೃತಳ ಎರಡನೇ ಪತಿ ಸೇರಿದಂತೆ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ನಿವಾಸಿ ನವೀನ್(33), ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಸಂತೋಷ್(35) ಹಾಗೂ ಅನೂಪ್(32) ಬಂಧಿತರಾಗಿದ್ದು(Arrest), ಹಣಕಾಸು ವಿವಾದ ಹಾಗೂ ವೈಯಕ್ತಿಕ ಕಾರಣಕ್ಕೆ ಪತ್ನಿ ಅರ್ಚನಾಳನ್ನು ತನ್ನ ಸಹಚರರ ಜತೆ ಸೇರಿ ನವೀನ್ ಹತ್ಯೆ ಮಾಡಿದ್ದ ಎಂದು ಪೊಲೀಸರು(Police) ಹೇಳಿದ್ದಾರೆ.
Bengaluru Crime: ಕುಖ್ಯಾತ ರೌಡಿಯೊಂದಿಗೆ ಕುಚ್ ಕುಚ್.. ಗಂಡನಿಂದಲೇ ಬೀದಿ ಹೆಣವಾದ 400 ಕೋಟಿ ಒಡತಿ !
ಹಣದ ಗಲಾಟೆ:
ನಾಲ್ಕು ವರ್ಷಗಳ ಹಿಂದೆ ಜಿಮ್ ತರಬೇತುದಾರ ನವೀನ್ ಜತೆ ಅರ್ಚನಾ ಎರಡನೇ ವಿವಾಹವಾಗಿದ್ದರು. ಇತ್ತೀಚಿಗೆ ಹಣಕಾಸು ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಈ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿ ತನ್ನ ಇಬ್ಬರು ಮಕ್ಕಳ ಜತೆ ಬೆಳ್ಳಂದೂರಿನಲ್ಲಿ ಆಕೆ ನೆಲೆಸಿದ್ದಳು. ಅರ್ಚನಾ ತಂದೆ ಭೂ ಒಡೆಯರಾಗಿದ್ದು, ತಂದೆಯಿಂದ ಆಕೆಗೆ ಕೋಟ್ಯಂತರ ಮೌಲ್ಯದ ಆಸ್ತಿ ಬಂದಿತ್ತು. ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳ ಬಾಡಿಗೆ ರೂಪದಲ್ಲೇ ಆಕೆಗೆ ಮಾಸಿಕ ಲಕ್ಷಾಂತರ ಆದಾಯ(Revenue) ಬರುತ್ತಿತ್ತು ಎಂದು ತಿಳಿದು ಬಂದಿದೆ.
ರಾಮನಗರ(Ramanagara) ಜಿಲ್ಲೆ ಚನ್ನಪಟ್ಟಣ(Channapatna) ತಾಲೂಕಿನಲ್ಲಿ 12 ಎಕರೆ ಜಮೀನು(Land), ಜಿಗಣಿ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಅರ್ಚನಾ ಹೆಸರಿನಲ್ಲಿ ಮನೆಗಳಿದ್ದವು. ಇತ್ತೀಚಿಗೆ ಎಚ್‌ಎಸ್‌ಆರ್ ಲೇಔಟ್‌ನ ಮನೆ ಮಾರಾಟ ಮಾಡಿದ ಹಣದ ಹಂಚಿಕೆ ವಿಚಾರವಾಗಿ ಪತಿ ಜತೆ ಅರ್ಚನಾ ಜಗಳ ಮಾಡಿಕೊಂಡಿದ್ದಳು. ತನಗೆ ಪತಿ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ಜಿಗಣಿ ಠಾಣೆಯಲ್ಲಿ ಆಕೆ ದೂರು ಕೂಡಾ ದಾಖಲಿಸಿದ್ದಳು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕೆರಳಿದ ನವೀನ್, ಪತ್ನಿ ಕೊಲೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.
ಪುತ್ರಿ ಜತೆ ಸಲುಗೆಯೇ ಕೊಲೆಗೆ ಕಾರಣ?
ತನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಹಿರಿಯಳಾದ ಅರ್ಚನಾ ಜತೆ ಎರಡನೇ ವಿವಾಹವಾಗಿದ್ದ ನವೀನ್, ಮದುವೆ ಬಳಿಕ ಆಕೆಯ 20 ವರ್ಷದ ಮಗಳ ಜತೆ ಸಲುಗೆ ಬೆಳಸಿಕೊಂಡಿದ್ದ ಎನ್ನಲಾಗಿದೆ. ಮೊದಲ ಗಂಡನಿಂದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಅರ್ಚನಾ ಪಡೆದಿದ್ದಳು. ಅಲ್ಲದೆ, ಮಗಳ ಹೆಸರಿನಲ್ಲಿ ಆಕೆ ಕೋಟ್ಯಂತರ ರು. ವ್ಯವಹಾರ ನಡೆಸುತ್ತಿದ್ದಳು. ಮಗಳ ಜತೆ ನವೀನ್ ಆತ್ಮೀಯತೆಗೆ ಅರ್ಚನಾ ಕಿಡಿಕಾರಿದ್ದಳು ಎನ್ನಲಾಗಿದೆ. ಕೊಲೆಯಲ್ಲಿ ಪಾತ್ರದ ಶಂಕೆ ಮೇರೆಗೆ ಮೃತಳ ಪುತ್ರಿ ಸೇರಿದಂತೆ ಐವರನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೀನ್ ಮುನ್ನ ಮತ್ತೊಂದು ಮದುವೆ?
ಇನ್ನು ಜಿಮ್ ತರಬೇತುದಾರ ನವೀನ್ ಜತೆ ವಿವಾಹಕ್ಕೂ ಮುನ್ನ ಅರ್ಚನಾ ಮತ್ತೊಂದು ಮದುವೆ ಆಗಿದ್ದಳು ಎನ್ನಲಾಗಿದೆ. ಹತ್ತು ವರ್ಷದ ಸಂಸಾರ ನಡೆಸಿ ಮೊದಲ ಗಂಡನಿಂದ ವಿವಾಹ ವಿಚ್ಛೇದನ(Divorce) ಪಡೆದ ಆಕೆ, ಆನಂತರ ಬೇರೊಬ್ಬ ವ್ಯಕ್ತಿಯನ್ನು ವರೆಸಿದ್ದಳು. ಆದರೆ ಭಿನ್ನಾಭಿಪ್ರಾಯ ವ್ಯಕ್ತವಾಗಿ ಆತನಿಂದ ಪ್ರತ್ಯೇಕವಾಗಿ ಕೊನೆಗೆ ನವೀನ್ ಜತೆ ಹಸೆಮಣೆ ಏರಿದ್ದಳು ಎಂದು ಮೂಲಗಳು ಹೇಳಿವೆ.
Dhabha Set on Fire: ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!
ಎಣ್ಣೆ ಹಾಕಲು ಹಣ ಕೊಡದ ಸಂಗಾತಿ ಮೂಗು ಕತ್ತರಿಸಿದ ಪಟೇಲ!
ಇದು ಒಂದು ವಿಚಿತ್ರ ಪ್ರಕರಣ. ಮಧ್ಯಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮದ್ಯ (Liquor) ಖರೀದಿಸಲು ಹಣ ನೀಡಲು ನಿರಾಕರಿಸಿದ್ದಕ್ಕೆ ತನ್ನ 35 ವರ್ಷದ ಲಿವ್-ಇನ್ ಪಾರ್ಟನರ್ (Live In Relationship) ಮೂಗನ್ನೇ ಕತ್ತರಿಸಿ ಹಾಕಿದ ಘಟನೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಡಿ. 28 ರಂದು ನಡೆದಿತ್ತು. ಮೂಗು ಕತ್ತರಿಸಿದ ಆರೋಪದ ಮೇಲೆ ಲವ್ ಕುಶ್ ಪಟೇಲ್ ಎಂಬಾತನ ಬಂಧನವಾಗಿತ್ತು.
ಪಟೇಲ್ ಕಳೆದ ಎರಡು ವರ್ಷಗಳಿಂದ ಸೋನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ. ಮದ್ಯ ಖರೀದಿಸಲು 400 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆತ ಅಲ್ಲೇ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಸೋನುವಿನ ಮೂಗನ್ನು ಕತ್ತರಿಸಿದ್ದನು. ಆಕೆಯ ಕೂಗು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
