Asianet Suvarna News Asianet Suvarna News

Nepali Gang Arrest: ಬೆಂಗ್ಳೂರಲ್ಲಿ ನೇಪಾಳಿ ಗಾರ್ಡ್‌ಗಳಿಂದ ಅಪಾರ್ಟ್‌ಮೆಂಟ್‌ ಲೂಟಿ

*   ಬೀಗ ಹಾಕಿದ್ದ ಪ್ಲ್ಯಾಟ್‌ಗಳ ಗುರುತಿಸಿ ಸ್ಕೆಚ್‌
*   ಹೊರ ರಾಜ್ಯಗಳಿಂದ ಸಹಚರರ ಕರೆಸಿ ಕಳ್ಳತನ
*   9 ಲಕ್ಷ ನಗದು, 19 ಲಕ್ಷ ಮೌಲ್ಯದ ಚಿನ್ನಾಭರಣ ವಶ
 

Apartments Loot From Nepali Gang in Bengaluru grg
Author
Bengaluru, First Published Dec 10, 2021, 6:42 AM IST

ಬೆಂಗಳೂರು(ಡಿ.10):  ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌(Security Guard) ಕೆಲಸಕ್ಕೆ ಸೇರಿಕೊಂಡು ಬೀಗ ಹಾಕಿದ ಪ್ಲ್ಯಾಟ್‌ಗಳನ್ನು ಗುರುತಿಸಿ ಹೊರರಾಜ್ಯಗಳಿಂದ ಸಹಚರರನ್ನು ಕರೆಸಿ ಕಳ್ಳತನ ಮಾಡುತ್ತಿದ್ದ ನೇಪಾಳಿ ಗ್ಯಾಂಗ್‌ವೊಂದನ್ನು(Nepali Gang)  ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ(Nepal) ಮೂಲದ ಕರಣ್‌ ಬಿಸ್ತಾ, ರಾಜು, ಜೀವನ್‌ ಹಾಗೂ ಮುಂಬೈನ ಗೋರಖ್‌ ಕಾಲು, ಹಿಕ್ಮತ್‌ ಶಾಹಿ ಬಂಧಿತರು. ಐವರು ನೇಪಾಳ ಮೂಲದವರಾಗಿದ್ದಾರೆ. ಆರೋಪಿಗಳಿಂದ(Accused) 9.3 ಲಕ್ಷ ರು. ನಗದು ಮತ್ತು 19 ಲಕ್ಷ ರು. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ(Arrest) ಐವರು ಆರೋಪಿಗಳ ಪೈಕಿ ಕರಣ್‌, ಜೀವನ್‌, ರಾಜು ನಗರದಲ್ಲಿ ಶ್ರೀಮಂತರ ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ(Apartments) ಸೆಕ್ಯೂರಿ ಗಾರ್ಡ್‌ ಕೆಲಸಕ್ಕೆ ಸೇರುತ್ತಿದ್ದರು. ಮನೆ ಮಾಲೀಕರು ಕೆಲಸ ಕಾರ್ಯಗಳ ಮೇಲೆ ಎರಡು-ಮೂರು ದಿನ ಹೊರಗೆ ಹೋಗುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿರುವ ತಮ್ಮ ಸಹಚರರಿಗೆ ಮಾಹಿತಿ ನೀಡಿ ಬೆಂಗಳೂರಿಗೆ ಕರೆಸಿಕೊಂಡು ಕಳ್ಳತನ ಮಾಡಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

Drugs Racket in Bengaluru: ಅಂತಾರಾಜ್ಯ ಪೆಡ್ಲರ್‌ ಸೆರೆ: 11 ಕೋಟಿ ಡ್ರಗ್ಸ್‌ ವಶ

ಹೊರರಾಜ್ಯದಿಂದ ಬರುವ ಸಹಚರರು ಕಳವು ಮಾಡಿ ಮಾಲು ಸಮೇತ ಸುರಕ್ಷಿತವಾಗಿ ನಿಗದಿತ ಸ್ಥಳ ತಲುಪಿದ ಬಳಿಕ ಮನೆಯ ಮಾಲೀಕರಿಗೆ ಕಳ್ಳತನವಾಗಿರುವ(Theft) ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ತಮ್ಮ ಮೇಲೆ ಯಾವುದೇ ಅನುಮಾನ ಬಾರದ ಹಾಗೆ ವರ್ತಿಸಿ ಅದೇ ಜಾಗದಲ್ಲಿ ಕೆಲಸ ಮುಂದುವರಿಸುತ್ತಿದ್ದರು. ಕೆಲ ದಿನಗಳ ಬಳಿಕ ಎಲ್ಲ ಆರೋಪಿಗಳು ಒಂದೆಡೆ ಸೇರಿ ಕದ್ದ ಮಾಲುಗಳನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕದ್ದವನೇ ಮಾಲೀಕನಿಗೆ ಕರೆ ಮಾಡಿದ!:

ಹೊರಮಾವಿನ ಕೋಕನೆಟ್‌ ಗ್ರೋ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಕರಣ್‌ ಬಿಸ್ತಾ ಕೆಲ ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದ. ಈ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ(Flat) ನೆಲೆಸಿದ್ದ ಉದ್ಯಮಿ ರಾಮಚಂದ್ರ ರೆಡ್ಡಿ ಅ.14ರಂದು ಅಣ್ಣನ ಮಗಳ ಸಾವಿನ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಹಿತ ಆಂಧ್ರದ ನಲ್ಲೂರಿಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಕರಣ್‌ ಬಿಸ್ತಾ, ರಾಜು, ಜೀವನ್‌ ಹಾಗೂ ಮುಂಬೈನ ಗೋರಖ್‌ ಕಾಲು ಮತ್ತು ಹಿಕ್ಮತ್‌ ಶಾಹಿಗೆ ಮಾಹಿತಿ ಕರೆಸಿಕೊಂಡು ಕಳ್ಳತನ ಮಾಡಿಸಿದ್ದ.

ಬಳಿಕ ಅ.16ರಂದು ಉದ್ಯಮಿ ರಾಮಚಂದ್ರ ರೆಡ್ಡಿಗೆ ಕರೆ ಮಾಡಿ ಮನೆ ಬಾಗಿಲು ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ರೆಡ್ಡಿ ಅವರು ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ನಾಲ್ಕು ಕಳ್ಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Assault on Police: ಪೊಲೀಸರಿಗೇ ಹೊಡೆದ ಅಣ್ತಮ್ಮ ಅರೆಸ್ಟ್‌

ಮೊಬೈಲ್‌ ಕರೆ ಆಧರಿಸಿ ಪತ್ತೆ

ಕಳ್ಳತನ ಮಾಡಿ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮುಂದುವರಿಸಿದ್ದ ಕರಣ್‌ ಬಿಸ್ತಾ ಪೊಲೀಸ್‌(Police) ವಿಚಾರಣೆ ವೇಳೆ ಅಮಾಯಕನಂತೆ ವರ್ತಿಸಿದ್ದ. ಮೊಬೈಲ್‌ ಟವರ್‌ ಮಾಹಿತಿ ಪಡೆದು ಪರಿಶೀಲಿಸಿದಾಗ ಕರಣ್‌ ಬಿಸ್ತಾ ಮೊಬೈಲ್‌ ನಂಬರ್‌ಗೆ ಮುಂಬೈನಿಂದ ಕರೆ ಬಂದಿರುವುದು ಗೊತ್ತಾಗಿದೆ. ಈ ಕರೆಗಳ ಜಾಡು ಹಿಡಿದು ಪೊಲೀಸರು ಒಬ್ಬೊಬ್ಬರನ್ನೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಾವೇ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಫೇಸ್ಬುಕ್‌ ಮೆಸೆಂಜರ್‌ನಲ್ಲಿ ಸ್ಕೆಚ್‌!

ಆರೋಪಿಗಳು ಫೇಸ್‌ಬುಕ್‌ ಮೆಸೆಂಜರ್‌(Facebook Messenger) ಬಳಸಿಕೊಳಸಿಕೊಂಡು ಕಳ್ಳವು ಮಾಡಲು ಸ್ಕೆಚ್‌ ಹಾಕುತ್ತಿದ್ದರು ಎಂಬುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಉದ್ಯಮಿ ರಾಮಚಂದ್ರ ರೆಡ್ಡಿ ಅವರು ಕುಟುಂಬ ಸಹಿತ ಆಂಧ್ರಗೆ ಹೋಗುತ್ತಿರುವ ಬಗ್ಗೆ ಸೆಕ್ಯೂರಿಟಿ ಗಾರ್ಡ್‌ ಕರಣ್‌ ಬಿಸ್ತಾ, ಮೆಸೆಂಜರ್‌ನಲ್ಲಿ ಇತರೆ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಇದಕ್ಕೂ ಮುನ್ನ ಆರೋಪಿಗಳಿಗೆ ಮೊಬೈಲ್‌ನಲ್ಲಿ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ. ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲು ಫೇಸ್‌ಬುಕ್‌ ಮೆಸೆಂಜರ್‌ ಬಳಕೆಗೆ ಮುಂದಾಗಿದ್ದರು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
 

Follow Us:
Download App:
  • android
  • ios