Drugs Racket in Bengaluru: ಅಂತಾರಾಜ್ಯ ಪೆಡ್ಲರ್ ಸೆರೆ: 11 ಕೋಟಿ ಡ್ರಗ್ಸ್ ವಶ
* ಕೇರಳ, ಕರ್ನಾಟಕ, ಆಂಧ್ರ ಪೊಲೀಸರಿಗೆ ತಲೆನೋವಾಗಿದ್ದ ಆರೋಪಿ
* ತಪ್ಪಿಸಿಕೊಂಡಿರುವ ಅನೂಪ್ ಸಹಚರರ ಪತ್ತೆಗೆ ಜಾಲ ಬೀಸಿದ ಪೊಲೀಸರು
* ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಬಂಧಿತ ಆರೋಪಿ
ಬೆಂಗಳೂರು(ಡಿ.09): ನಗರದಲ್ಲಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಅಂತಾರಾಜ್ಯ ಪೆಡ್ಲರ್‌ವೊಬ್ಬನನ್ನು(Interstate Peddler) ಸೆರೆ ಹಿಡಿದು ಸುಮಾರು 11 ಕೋಟಿ ಮೌಲ್ಯದ ಡ್ರಗ್ಸ್(Drugs) ಅನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಕೆ.ಆರ್.ಪುರ ಸಮೀಪದ ಆವಲಹಳ್ಳಿ ನಿವಾಸಿ ಅನೂಪ್ ಮ್ಯಾಥ್ಯುವ್ಸ್ ಬಂಧಿತ(Arrest). ಆರೋಪಿಯಿಂದ(Accused) 11 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಹಾಗೂ 250 ಗ್ರಾಂ ಗಾಂಜಾ(Marijuana) ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಅನೂಪ್ ಸಹಚರರ ಪತ್ತೆಗೆ ತನಿಖೆ(Investigation) ನಡೆದಿದೆ. ಹೆಬ್ಬಾಳ ಮೇಲ್ಸೇತುವೆ ಸಮೀಪ ತನ್ನ ಗ್ರಾಹಕರಿಗೆ(Customers) ಅನೂಪ್ ಡ್ರಗ್ಸ್ ಪೂರೈಸುವ ವೇಳೆ ಖಚಿತ ಮಾಹಿತಿ ಪಡೆದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!
3 ರಾಜ್ಯಗಳಲ್ಲಿ ಹಾವಳಿ:
ಅನೂಪ್ ಮೂಲತಃ ಕೇರಳ(Kerala) ರಾಜ್ಯದವನಾಗಿದ್ದು, ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ(Drugs Racket) ತೊಡಗಿದ್ದಾನೆ. ಆಂಧ್ರಪ್ರದೇಶದಲ್ಲಿ(Andhra Pradesh) ಹ್ಯಾಶಿಶ್ ಆಯಿಲ್ ಖರೀದಿಸಿ ಬಳಿಕ ಆತ ಕೇರಳ, ಕರ್ನಾಟಕ(Karnataka) ಹಾಗೂ ಆಂಧ್ರಪ್ರದೇಶದ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ಅಲ್ಲದೆ ಕೆಲವು ಕಡೆ ತಾನೇ ನೇರವಾಗಿ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಆತನ ಮೇಲೆ ನಗರ ಹಾಗೂ ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಒಂದೆಡೆ ನೆಲೆ ನಿಲ್ಲದ ಅನೂಪ್, ಡ್ರಗ್ಸ್ ಅನ್ನು ಗ್ರಾಹಕರಿಗೆ ಪೂರೈಸಿದ ಬಳಿಕ ನಗರ ತೊರೆಯುತ್ತಿದ್ದ. ಅಂತೆಯೇ ಬೆಂಗಳೂರಿಗೆ(Bengaluru) ಕೂಡಾ ಆಗಾಗ್ಗೆ ಡ್ರಗ್ಸ್ ತಂದು ಮಾರಾಟ ಮಾಡಿ ಆತ ಪರಾರಿಯಾಗುತ್ತಿದ್ದ. ಕೆಲ ದಿನಗಳಿಂದ ಆತನ ಮೇಲೆ ನಿಗಾವಹಿಸಿ ಖಚಿತ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಲಾಯಿತು ಎಂದು ಡಿಸಿಪಿ ತಿಳಿಸಿದ್ದಾರೆ.
ಪಾರ್ಟ್ ಟೈಂ ಕೆಲಸದ ಆಸೆ ತೋರಿಸಿ 72000 ಗುಳುಂ
ಬೆಂಗಳೂರು: ಆನ್‌ಲೈನ್‌ನಲ್ಲಿ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದ ಮಹಿಳೆಯೊಬ್ಬರು(Woman) ಅಪರಿಚಿತ ವ್ಯಕ್ತಿಯ ಸೂಚನೆ ಮೇರೆಗೆ ಬ್ಯಾಂಕ್ ಖಾತೆಗೆ ಲಿಂಕ್‌ವೊಂದರಲ್ಲಿ ನೋಂದಣಿ ಮಾಡಿ 72 ಸಾವಿರ ರು. ಕಳೆದುಕೊಂಡಿದ್ದಾರೆ.
Winter Session: ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಹೊಂದಿದ್ದರೆ ಅಪರಾಧ ಅಲ್ಲ!
ದೇವನಹಳ್ಳಿ ಸಮೀಪದ ಬೈಚಾಪುರ ನಿವಾಸಿ ಅರ್ಪಿತಾ(23) ಹಣ ಕಳೆದುಕೊಂಡವರು. ಇತ್ತೀಚೆಗೆ ಪಾರ್ಟ್ ಟೈಂ ಕೆಲಸಕ್ಕಾಗಿ(Part Time Job) ಗೂಗಲ್‌ನಲ್ಲಿ(Google) ಹುಡುಕುತ್ತಿದ್ದಾಗ ಪ್ಲಿಫ್ ಕಾರ್ಟ್(Flipkart) ಪಾರ್ಟ್ ಟೈಂ ಜಾಬ್ ಎಂಬ ಎರಡು ಮೊಬೈಲ್ ಸಂಖ್ಯೆಗಳು ಸಿಕ್ಕಿವೆ. ಈ ನಂಬರ್‌ಗೆ ಅರ್ಪಿತಾ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಕರೆ ಸ್ವೀಕರಿಸಿದ್ದು, ರೀಚಾರ್ಜ್ ಮಾಡಿದರೆ ಕಮಿಷನ್ ಬರಲಿದೆ ಎಂದು ಹೇಳಿದ್ದಾನೆ. ಅಂತೆಯೆ ಲಿಂಕ್‌ವೊಂದನ್ನು ಮೊಬೈಲ್ ನಂಬರ್‌ಗೆ ಕಳುಹಿಸಿ, ಈ ಲಿಂಕ್‌ಗೆ ಬ್ಯಾಂಕ್ ಖಾತೆ ನೋಂದಣಿ ಮಾಡುವಂತೆ ಸೂಚಿಸಿದ್ದಾನೆ.
ಆತನ ಸೂಚನೆಯಂತೆ ಅರ್ಪಿತಾ ತಮ್ಮ ಐಸಿಐಸಿಐ ಬ್ಯಾಂಕ್(ICICI Bank) ಖಾತೆಯನ್ನು ಲಿಂಕ್ ಮುಖಾಂತರ ನೋಂದಣಿ ಮಾಡಿದ್ದಾರೆ. ಈ ವೇಳೆ ಖಾತೆಯಲ್ಲಿದ್ದ 72,547 ರು. ಕಡಿತವಾಗಿದೆ. ತಕ್ಷಣ ಅಪರಿಚಿತನಿಗೆ ಕರೆ ಮಾಡಿದ್ದು, ಆತ ಮೊಬೈಲ್ ಸ್ಥಗಿತಗೊಳಿಸಿದ್ದಾನೆ. ಈ ವೇಳೆ ಅರ್ಪಿತಾಗೆ ತಾನು ವಂಚನೆಗೆ(Fraud) ಒಳಗಾಗಿರುವುದು ಅರಿವಾಗಿದೆ. ಬಳಿಕ ಈಶಾನ್ಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ವಂಚಕರು(Cyber Fraudsters) ಈ ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಅರ್ಪಿತಾ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.