ಪತಿ ತೀರಿಕೊಂಡ ದಿನವೇ, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ

ಪತಿ ತೀರಿಕೊಂಡಿದ್ದರಿಂದ ತೀವ್ರವಾಗಿ ಮನನೊಂದಿದ್ದ ಮಹಿಳೆ ಪತಿಯ ಪುಣ್ಯತಿಥಿ ದಿನವೇ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Andhra Pradesh lady jump to Sakalavara lake with her son in Bengaluru sat

ಬೆಂಗಳೂರು (ಆ.13): ಕಳೆದ ಎರಡು ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಗಂಡನ ಪುಣ್ಯತಿಥಿ ದಿನವೇ ತನ್ನ ಮಗುವಿನೊಂದಿಗೆ ಕರೆಗೆ ಹಾರಿ ಸಾವಿಗೆ ಶರಣಾಗಿರುವ ಕರುಣಾಜನಕ ಘಟನೆ ಬೆಂಗಳೂರಿನ ಹೊರವಲಯ ಸಕಲವಾರ ಕೆರೆಯಲ್ಲಿ ನಡೆದಿದೆ.

ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ ಮಗುವನ್ನ ಸೊಂಟಕ್ಕೆ ಕಟ್ಟಕೊಂಡು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮಿ (35) ಹಾಗೂ ಪುತ್ರ ಹರಿಹರನ್ (7) ಎಂದು ಗುರುತಿಸಲಾಗಿದೆ. ಇವರು ಸಿ.ಕೆ. ಪಾಳ್ಯದಲ್ಲಿ ವಾಸವಾಗಿದ್ದರು. ಕಳೆದ ಎರಡು ವರ್ಷಗಳಿಂದ ಗಂಡನಿಲ್ಲದೇ ಮಗುವಿನೊಂದಿಗೆ ವಾಸವಾಗಿದ್ದ ಮಹಿಳೆ ಮನನೊಂದು, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ್ದಾಳೆ. 

'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ

ಇವರು ಆಂಧ್ರ ಪ್ರದೇಶ ಮೂಲದವರಾಗಿದ್ದು, ಕುಟುಂಬ ಸಮೇತವಾಗಿ ಕೆಲವು ವರ್ಷಗಳ ಹಿಂದೆ ದುಡಿಮೆಗಾಗಿ ಬೆಂಗಳೂರಿಗೆ ಬಂದಿದ್ದು, ಸಿ.ಕೆ. ಪಾಳ್ಯದಲ್ಲಿ ವಾಸವಿದ್ದರು. 2 ವರ್ಷದ ಹಿಂದೆ ನಡೆದ ಅಪಘಾತದಲ್ಲಿ ವಿಜಯಲಕ್ಷ್ಮೀ ಅವರ ಪತಿ ತೀರಿಕೊಂಡಿದ್ದರು. ಇದಾದ ಬಳಿಕ ವಿಜಯಲಕ್ಷ್ಮೀ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪತಿ ತೀರಿಕೊಂಡು ಇಂದಿಗೆ ಸರಿಯಾಗಿ 2 ವರ್ಷ ಕಳೆದಿವೆ. ಇದೀಗ ಪತಿ ತೀರಿಕೊಂಡ ದಿನವೇ ಮಗುವಿನ ಜತೆಗೆ ವಿಜಯಲಕ್ಷ್ಮೀ ಸಾವಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆಯಲಾಗಿದೆ.

ರೇಪ್‌ ಮಾಡಲು ಯತ್ನಿಸಿದಾಗ ವಿರೋಧಿಸಿದಕ್ಕೆ ಉಸಿರುಗಟ್ಟಿಸಿ ಕೊಂದ ಸೆಕ್ಯೂರಿಟಿ!: ಬೆಂಗಳೂರು (ಆ.13): ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಯುವತಿ ಮುಂಜಾನೆ ಮನೆ ಆವರಣದಲ್ಲೇ ಶವವಾಗಿ ಪತ್ತೆಯಾಗಿದ್ದ ಪ್ರಕರಣ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲೇ ನೆಲೆಸಿದ್ದ ಕೊಲೆಗಾರನನ್ನು ಬಂಧಿಸಿದ್ದಾರೆ. ಮಹೇಶ್ವರಿನಗರ ನಿವಾಸಿ ಕೃಷ್ಣ ಚಂದ್ರ ಸೇತಿ (28) ಬಂಧಿತ. ಆರೋಪಿಯು ಗುರುವಾರ ರಾತ್ರಿ ಪಕ್ಕದ ಮನೆಯ ಮಹಾನಂದಾ (21)ಳನ್ನು ಮನೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಚೀರಾಡಿ ಪ್ರತಿರೋಧವೊಡ್ಡಿದಾಗ ಆಕೆ ಕುತ್ತಿಗೆಗೆ ಧರಿಸಿದ್ದ ದಾರವನ್ನೇ ಬಿಗಿಯಾಗಿ ಹಿಡಿದು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮುಂಜಾನೆ ಮೃತದೇಹವನ್ನು ಆಕೆಯ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಪೆಟ್ರೋಲ್‌ ಬಂಕ್‌ ಯುವತಿ ಎಳೆದೊಯ್ದ ಕಾಮುಕ, ಕೊಲೆ ಮಾಡಿ ಮನೆಮುಂದೆ ಎಸೆದ

ಪಾದಗಳು ನೀಡಿದ ಸುಳಿವು!: ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಮೃತದೇಹವನ್ನು ಕೂಲಂಕಷವಾಗಿ ತಪಾಸಣೆ ಮಾಡಿದಾಗ, ಮಹಾನಂದಾಳ ಚಪ್ಪಲಿಗಳು ಮನೆ ಬಳಿಯೇ ಇದ್ದವು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಇಲ್ಲದಿರುವುದು ಕಂಡು ಬಂದಿದೆ. ಮನೆಯ ಸುತ್ತಮುತ್ತ ಮಹಾನಂದಾಳ ಕೊಲೆಯಾಗಿದ್ದು, ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ ಪೊಲೀಸರು, ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದಾಗ, ನೆರೆ ಮನೆಯ ಕೃಷ್ಣ ಚಂದ್ರ ಸೇತಿ ನಡವಳಿಕೆ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios