ಮತಾಂತರ ಆರೋಪ: ವೈದ್ಯೆ ಸೇರಿದಂತೆ ಮೂವರ ವಿರುದ್ಧ ಕೇಸ್
ಮನೆಗೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇರೆಗೆ ಮಂಗಳೂರಿನ ಪ್ರಸಿದ್ಧ ಹೆರಿಗೆ ತಜ್ಞೆ ಸೇರಿದಂತೆ ಮೂರು ಮಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.
ಮಂಗಳೂರು (ನ.27) : ಮನೆಗೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇರೆಗೆ ಮಂಗಳೂರಿನ ಪ್ರಸಿದ್ಧ ಹೆರಿಗೆ ತಜ್ಞೆ ಸೇರಿದಂತೆ ಮೂರು ಮಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.
ಮೊಬೈಲ್ ರಿಚಾಜ್‌ರ್‍ಗೆ ಅಂಗಡಿಗೆ ಬರುತ್ತಿದ್ದ ಮಂಗಳೂರು ನಗರದ ಯುವತಿಯೊಬ್ಬಳಿಗೆ ಕೆಲಸ ನೀಡುವುದಾಗಿ ಪುಸಲಾಯಿಸಿದ ಅನ್ಯಕೋಮಿನ ಬೂತ್ ಮಾಲೀಕ ಖಲೀಲ್ ಎಂಬಾತ ಕಲ್ಲಾಪಿನ ತನ್ನ ಕುಟುಂಬಸ್ಥರಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದ. ಅಲ್ಲಿ ಆಕೆಯನ್ನು ಮತಾಂತರಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರಲ್ಲದೆ ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ ಈಕೆಯ ಹೆಸರನ್ನೂ ಆಯಿಷಾ ಆಗಿ ಬದಲಾಯಿಸಿದ್ದರು. ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದರು. ಬಳಿಕ ಯುವತಿಯನ್ನು ಕಾಸರಗೋಡಿನ ಮುಸ್ಲಿಂ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು. ಬಳಿಕ ಯೇನೆಪೋಯ ಆಸ್ಪತ್ರೆಯ ಮಾಲೀಕರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯನ್ನು ಡಾ.ಜಮೀಲಾ, ಡಾ.ಸೈಯ್ಯದ್ ಎಂಬವರ ಮನೆಯಲ್ಲಿ ಕೆಲಸ ಸೇರಿಸಲಾಗಿತ್ತು.
'ಆತ್ಮಾಹುತಿ ಬಾಂಬ್' ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್: ಶಾರೀಕ್ ಜೊತೆ ಲಿಂಕ್?
ಸುಮಾರು ಎಂಟು ತಿಂಗಳು ಯುವತಿ ಮನೆ ಕೆಲಸ ಮಾಡುತ್ತಿದ್ದು, ಈ ವೇಳೆ ವೈದ್ಯರು ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಲ್ಲದೆ, ಮಾನಸಿಕ ಒತ್ತಡ ಹೇರಿದ್ದಾರೆ. ಅಕ್ಟೋಬರ್‌ನಲ್ಲಿ ಅಲ್ಲಿ ಕೆಲಸ ಬಿಟ್ಟಬಳಿಕ ಭದ್ರಾವತಿಯ ಐಮಾನ್ ಎಂಬಾತ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಸಲು ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆದ್ದರಿಂದ ಈ ಮೂವರು ಸೇರಿದಂತೆ ಇನ್ನಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ಮಹಿಳಾ ಪೊಲೀಸರಿಗೆ ಶನಿವಾರ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 354, 354(ಎ), 505, 34 ಹಾಗೂ ಕರ್ನಾಟಕ ಮತಾಂತರ ನಿಷೇಧ ಕಾಯಿದೆ 2022ರ ಕಲಂ 3 ಮತ್ತು 5ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ: ಕಾಡಾನೆ ದಾಳಿ, ಕೃಷಿ ನಾಶ
ಸುಮಾರು ಎರಡು ತಿಂಗಳ ಬಳಿಕ ಬೆಳ್ತಂಗಡಿ ಪರಿಸರದಲ್ಲಿ ಮತ್ತೆ ಕಾಡಾನೆಗಳ ಉಪಟಳ ಶುರುವಾಗಿದೆ. ಕಳೆದೊಂದು ವಾರದಿಂದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ, ಕುಂಚಾಡಿ, ಮುದ್ದಿನಡ್ಕ ಮೊದಲಾದ ಪ್ರದೇಶಗಳ ಕೃಷಿ ತೋಟಗಳಿಗೆ ದಾಳಿ ಇಟ್ಟಿರುವ ಕಾಡಾನೆಗಳು, ಅಡಕೆ, ತೆಂಗು, ಬಾಳೆ ಕೃಷಿಗೆ ಹಾನಿ ಉಂಟು ಮಾಡಿವೆ.
ಮಂಗಳೂರು ಬಾಂಬ್ ಸ್ಫೋಟ: ಲಷ್ಕರ್ ಸಂಪರ್ಕಿಸಿ ಎಕೆ47 ತರಿಸಲು ಶಾರೀಕ್ ಯತ್ನ..!
ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಹಾಗೂ ಸಿಬ್ಬಂದಿ ಆನೆ ದಾಳಿ ನಡೆಸಿರುವ ಸ್ಥಳ ಹಾಗೂ ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಅಥವಾ ಹೆಚ್ಚಿನ ಆನೆಗಳ ಗುಂಪು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಚಾರ್ಮಾಡಿ-ಕನಪಾಡಿ, ಮುಂಡಾಜೆ- ಕಾಪು ರಕ್ಷಿತಾರಣ್ಯ ಪ್ರದೇಶದ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ಮುಂಡಾಜೆ, ನೆರಿಯ, ಕಡಿರುದ್ಯಾವರ ಮೊದಲಾದ ಕಡೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಗೆ ಹಲವಾರು ಎಕರೆ ಕೃಷಿ ಭೂಮಿ ಈಗಾಗಲೇ ನಾಶವಾಗಿದೆ.