ಮಧ್ಯಪ್ರದೇಶದ ರೇವಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿದ್ದಾನೆ. ರಾಮ್‌ಲಾಲ್ ಎಂಬಾತನೇ ಈ ಭಯಾನಕ ಕೃತ್ಯವೆಸಗಿದ ವ್ಯಕ್ತಿ.
ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿದ್ದಾನೆ. ರಾಮ್‌ಲಾಲ್ ಎಂಬಾತನೇ ಈ ಭಯಾನಕ ಕೃತ್ಯವೆಸಗಿದ ವ್ಯಕ್ತಿ. ರಾಮ್‌ಲಾಲ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಮಗು ಗಂಡಾಗಿ ಜನಿಸಿದೆ. ಈತ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುತ್ತೇನೆ ಎಂದು ಗ್ರಾಮ ದೇವತೆಗೆ ಪ್ರಾರ್ಥನೆ ಸಲ್ಲಿಸಿದ್ದ. ಕಾಕಾತಾಳೀಯ ಎಂಬಂತೆ ಗಂಡು ಮಗುವಿಗೆ ಆತನ ಪತ್ನಿ ಜನ್ಮ ನೀಡಿದ್ದು, ಮಗುವಿನ ಜನನದ ಬಳಿಕ ಆತ ದೇಗುಲದಲ್ಲಿ ಯುವಕನ ತಲೆ ಕಡಿದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 32 ವರ್ಷದ ಪ್ರಾಯದ ರಾಮ್‌ಲಾಲ್ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ದುರಾಸೆಗಾಗಿ ಕಿಯೋತಿ ನಿವಾಸಿ 19 ವರ್ಷ ಪ್ರಾಯದ ದಿವ್ಯಾಂಶು ಕೊಲ್ ಎಂಬಾತನನ್ನು ಬಲಿ ನೀಡಿದ್ದ. ರಾಮಲಾಲ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ಅವರಿಗೆ ಗಂಡು ಮಗು ಬೇಕಿತ್ತು. ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುತ್ತೇನೆ ಎಂದು ಆತ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ್ದ ಎನ್ನಲಾಗಿದೆ.
ನೆಲಮಂಗಲ: ಬಾಲಕಿಯನ್ನು ನರಬಲಿ ನೀಡಲು ಪೂಜೆ ನಡೆಸಿರುವ ಶಂಕೆ, ಸ್ಥಳೀಯರಿಂದ ರಕ್ಷಣೆ
ಇದಾದ ನಂತರ ಕಳೆದ ತಿಂಗಳು, ಅವನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು ಮತ್ತು ಅವನು ತನ್ನ ಪ್ರಾರ್ಥನೆಯಂತೆ ದೇವಿಗೆ ಬಲಿ ನೀಡಲು ಯುವಕನನ್ನು ಹುಡುಕುತ್ತಿದ್ದ. ಜುಲೈ 6 ರಂದು, ರಾಮ್‌ಲಾಲ್, ತನ್ನ ತಮ್ಮ ಮೇಕೆಗಳನ್ನು ಮೇಯಿಸುತ್ತಿದ್ದ ದಿವ್ಯಾಂಶು ಅವರನ್ನು ನೋಡಿದ್ದಾನೆ. ನಂತರ ಸಹಾಯ ಮಾಡುವಂತೆ ದಿವ್ಯಾಂಶುವನ್ನು ಕರೆದ ರಾಮ್‌ಲಾಲ್ ಆತನನ್ನು ಉಪಾಯವಾಗಿ ಗ್ರಾಮದ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ರಾಮಲಾಲ್ ಮಾತು ನಂಬಿ ಆತನಿಗೆ ಸಹಾಯ ಮಾಡಲು ದೇಗುಲಕ್ಕೆ ತೆರಳಿದ ದಿವ್ಯಾಂಶುವಿನ ತಲೆ ಕಡಿದು ಆತನ ಶವವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ರೇವಾ ಸಿರ್ಮೌರ್‌ನ ಉಪವಿಭಾಗಾಧಿಕಾರಿ ನವೀನ್ ತಿವಾರಿ ಹೇಳಿದ್ದಾರೆ.
ಇತ್ತ ದಿವ್ಯಾಂಶು ನಾಪತ್ತೆಯಾದ ಬಗ್ಗೆ ಆತನ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಜುಲೈ 6 ರಂದು ದೇಗುಲದಲ್ಲಿ ದಿವ್ಯಾಂಶು ಶವ ಪತ್ತೆ ಮಾಡಿದರು. ನಂತರ ತನಿಖೆ ಮಾಡಿದಾಗ ದಿವ್ಯಾಂಶು ಅವರು ಕೊನೆಯದಾಗಿ ರಾಮಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ಆಯುಧ, ಇರಾನ್ ವಿಜ್ಞಾನಿ ನರಬಲಿ: ಸ್ಯಾಟಲೈಟ್ ಮರ್ಡರ್ ಸೀಕ್ರೆಟ್!
ನಂತರ ಪೊಲೀಸರು ರಾಮ್‌ಲಾಲ್ ಅವರನ್ನು ವಿಚಾರಣೆ ನಡೆಸಿದಾಗ, ಅವರು ದಾರಿತಪ್ಪಿಸಲು ಪ್ರಯತ್ನಿಸಿದರು. ಆದರೆ ಕೊನೆಗೆ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ತನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಮತ್ತು ತನಗೆ ಗಂಡು ಮಗು ಬೇಕೆಂಬ ಆಸೆ ಇತ್ತು. ಗಂಡು ಮಗುವಿಗಾಗಿ ಹಲವು ವಿಧಿವಿಧಾನಗಳನ್ನು ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ.
ಈ ಮಧ್ಯೆ ಗಂಡು ಮಗುವಿಗಾಗಿ ಯುವಕನೋರ್ವನನ್ನು ಬಲಿಕೊಡಬೇಕು ಎಂದು ಭೂತೋಚ್ಚಾಟಕರೊಬ್ಬರು ಹೇಳಿದ್ದರು ಎಂದು ಆತ ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಕಳೆದ ತಿಂಗಳು ಆತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಹೀಗಾಗಿ ದೇವಿಗೆ ಬಲಿ ಕೊಡಲು ಆತ ಗಂಡು ಮಗುವನ್ನು ಹುಡುಕುತ್ತಿದ್ದ. ಈತನ ಕಣ್ಣಿಗೆ ದಿವ್ಯಾಂಶು ಕೋಲ್ ಕಂಡಿದ್ದು ಆತನನ್ನು ಬಲಿ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರಾಮಲಾಲ್ ಮಾಟಮಂತ್ರವನ್ನು ಕೂಡ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭೂತೋಚ್ಚಾಟಕನ ಪಾತ್ರವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
