ಅವರಿಬ್ಬರು ಸ್ನೇಹಿತರು ದೂರದ ದೇಶದಿಂದ ಸಿಲಿಕಾನ್​ ಸಿಟಿಗೆ ಬಂದು ಬದುಕು ಕಟ್ಟಿಕೊಳ್ಳೋ ಕನಸು ಕಂಡಿದ್ದರು. ಕನಸನ್ನ ನನಸು ಮಾಡಿಕೊಳ್ಳಲು ನಗರಕ್ಕೆ ಬಂದವರು ಇಲ್ಲಿ ಜೀವನ ಕಟ್ಟಿಕೊಳ್ಳುವ ಬದಲು ಯುವತಿಗಾಗಿ ಬಡಿದಾಡಿಕೊಂಡು ಓರ್ವ ಸತ್ತರೆ ಮತ್ತೋರ್ವ ಜೈಲು ಸೇರಿದ್ದಾನೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್. ಬೆಂಗಳೂರು

ಬೆಂಗಳೂರು (ಅ.11): ಅವರಿಬ್ಬರು ಸ್ನೇಹಿತರು ದೂರದ ದೇಶದಿಂದ ಸಿಲಿಕಾನ್​ ಸಿಟಿಗೆ ಬಂದು ಬದುಕು ಕಟ್ಟಿಕೊಳ್ಳೋ ಕನಸು ಕಂಡಿದ್ದರು. ಕನಸನ್ನ ನನಸು ಮಾಡಿಕೊಳ್ಳಲು ನಗರಕ್ಕೆ ಬಂದವರು ಇಲ್ಲಿ ಜೀವನ ಕಟ್ಟಿಕೊಳ್ಳುವ ಬದಲು ಯುವತಿಗಾಗಿ ಬಡಿದಾಡಿಕೊಂಡು ಓರ್ವ ಯಮಲೋಕ ಸೇರಿದ್ರೆ ಮರ್ತೋರ್ವ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ತಮ್ಮದೇ ಉದ್ಯಮ ಆರಂಭಿಸಿ ಜೀವನದಲ್ಲಿ ಒಂದೊಳ್ಳೆ ಮಟ್ಟಕ್ಕೆ ಬೆಳೆಯುವ ಕನಸು ಕಂಡಿದ್ದ ಆ ಇಬ್ಬರು ವಿದೇಶಿ ಸ್ನೇಹಿತರು ಬೆಂಗಳೂರಿಗೆ ಬಂದಿದ್ದರು. ಈ ಫೋಟೋದಲ್ಲಿರುವ ಸೊಲೊಮನ್​ ಹಾಗೂ ಒಬೆರ ವಿಕ್ಟರ್​ ಆಫ್ರಿಕಾದಿಂದ ಇಲ್ಲಿಗೆ ಬ್ಯುಸಿನೆಸ್​ ಮಾಡಲು ಬಂದಿದ್ದರು. ಮೊದಲು ಒಟ್ಟಿಗೆ ಇದ್ದವರಿಗೆ ಭಾರತೀಯ​ ಯುವತಿಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ನಂತರ ವಿಕ್ಟರ್​ ಜತೆ ಪ್ರೀತಿಯಾಗಿ ಬದಲಾಗಿತ್ತು. ಈ ಕಾರಣದಿಂದಲೇ ಕಳೆದ 3 ವರ್ಷಗಳಿಂದ ವಿಕ್ಟರ್​ ಹಾಗೂ ಆ ಯುವತಿ ಲಿವಿಂಗ್​ ರಿಲೇಷನ್​ನಲ್ಲಿದ್ದರು. ಅಮೃತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಹಳ್ಳಿಯ ಮುನಿಕೆಂಪಣ್ಣ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಕ್ಟರ್​ ಹಾಗೂ ಯುವತಿಯನ್ನ ನೋಡಲು ಸ್ನೇಹಿತ ಸೊಲೊಮನ್​ ಆಗಾಗ ಬರುತ್ತಿದ್ದ. 

ವಿಕ್ಟರ್​ ಜತೆ ಲಿವಿಂಗ್​ ರಿಲೇಶನ್​ ಶಿಪ್​ಗೆ ಬರುವ ಮೊಲದು ಸೊಲೊಮನ್​ ಹಾಗೂ ಯುವತಿ ತುಂಬಾ ಕ್ಲೋಸ್​ ಆಗಿದ್ದರಂತೆ. ಈ ಕಾರಣದಿಂದಲೇ ಈ ಮೂವರ ನಡುವೆ ಆಗಾಗ ಜಗಳ ಸಹ ಆಗುತ್ತಿತ್ತಂತೆ. ಇದರಿಂದಲೇ ಈ ಯುವತಿ ಕೊನೆಗೆ ಇಬ್ಬರಿಂದಲೂ ದೂರುವಾಗಿದ್ಲು. ನಂತರ ಮತ್ತೆ ವಿಕ್ಟರ್​ ಜತೆ ವಾಸ ಮಾಡುತ್ತಿದ್ದಳು.

Bengaluru: ತಡರಾತ್ರಿ ಭೀಕರ ಅಪಘಾತ; ನಿವೃತ್ತ ಯೋಧ ಸ್ಥಳದಲ್ಲೇ ಸಾವು

ಮೊನ್ನೆ ಸಂಜೆ ಯುವತಿ ವಿಕ್ಟರ್​ ಇದ್ದ ಮನೆಗೆ ಹೋಗಿದ್ದಳು. ಈ ವಿಚಾರ ಸೊಲೊಮನ್​ ಸಹ ಅಲ್ಲಿಗೆ ಹೋಗಿದ್ದಾನೆ. ಇಬ್ಬರು ಒಟ್ಟಿಗೆ ಇರುವುದುನ್ನು ಕಂಡ ಸೊಲೊಮನ್​ ಗಲಾಟೆ ಮಾಡಿದ್ದಾನೆ. ಈ ಜಗಳದಲ್ಲಿ ವಿಕ್ಟರ್​ ತನ್ನ ಸ್ನೇಹಿತ ಸೊಲೂಮನ್​ಗೆ ಹಲ್ಲೆ ಮಾಡಿ ಬಳಿಕ ಚಾಕು ಹೊಟ್ಟೆ, ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ.

ಹಬ್ಬದಂದು ಮುಸ್ಲಿಂ ಯುವಕರ ಪುಂಡಾಟ, ಮಾರಕಾಸ್ತ್ರ ಹಿಡಿದು ಹಿಂದೂ ವಿರೋಧಿ ಭಾಷಣದ ತುಣುಕಿಗೆ ಡಾನ್ಸ್!

ಕೊಲೆ ಮಾಡಿದ ಬಳಿಕ ಆರೋಪಿ ವಿಕ್ಟರ್ ತನ್ನ ಸ್ನೇಹಿತನ ಮನಗೆ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತ್ ಹಳ್ಳಿ ಪೊಲೀಸರು ಒಬೆರ ವಿಕ್ಟರ್​ನನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಯುವತಿ ಕುರಿತಾದ ವಿಚಾರಿ ಬಾಯಿ ಬಿಟ್ಟಿದ್ದಾನೆ. ಒಟ್ನಲ್ಲಿ ಇಬ್ಬರು ಸ್ನೇಹಿತರು ಒಟ್ಟಿಗೆ ವಿದೇಶದಿಂದ ಬಂದು ಈ ರೀತಿ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸ.