ಶಾಂತಿ-ಸೌಹಾರ್ದತೆ,  ಭಾವೈಕ್ಯತೆಗೆ ಹೆಸರಾಗಬೇಕಿದ್ದ ಈದ್ ಮಿಲಾದ್ ಹಬ್ಬದಂದು ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಮ್ಯೂಸಿಕ್​ ಹಾಕಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲಿ  ಮುಸ್ಲಿಂ ಯುವಕರ ಗುಂಪು ಡ್ಯಾನ್ಸ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಅ.11): ಶಾಂತಿ-ಸೌಹಾರ್ದತೆ, ಭಾವೈಕ್ಯತೆಗೆ ಹೆಸರಾಗಬೇಕಿದ್ದ ಈದ್ ಮಿಲಾದ್ ಹಬ್ಬದಂದು ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಮ್ಯೂಸಿಕ್​ ಹಾಕಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲಿ ಮುಸ್ಲಿಂ ಯುವಕರ ಗುಂಪು ಡ್ಯಾನ್ಸ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಈ ವಿಡಿಯೋದಲ್ಲಿ ಲಾಂಗ್, ಮಚ್ಚುಗಳನ್ನ ಹಿಡಿದು ಮನಸ್ಸಿಗೆ ಬಂದಂತೆ ಡಾನ್ಸ್. ಮಾಡುತ್ತಿರುವ ಈ ಗುಂಪು, ರಸ್ತೆಗೆ ಅಡ್ಡವಾಗಿ ನಿಂತು, ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಸೌಂಡ್ ಮಿಕ್ಸ್ ಮಾಡಿ ಪುಂಡಾಟ ಮೆರೆದಿದ್ದಾರೆ. ಇಂಥದೊಂದು ಘಟನೆ ನಡೆದಿರೋದು ನಗರದ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ. ಈದ್ ಮಿಲಾದ್ ಹಬ್ಬದ ದಿನ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಬ್ಬದ ಸಂಭ್ರಮದಲ್ಲಿ ನಗರದ ವಿವಿಧ ಭಾಗಗಳಲ್ಲಿ ಅಂದು ಸಾವಿರಾರು ಸಂಖ್ಯೆಯಲ್ಲಿ ಒಂದು‌ ಕಡೆ ಸೇರಿದ್ದ ಮುಸಲ್ಮಾನರು ಹಬ್ಬ ಆಚರಣೆ ಮಾಡ್ತಿದ್ರು‌. ಆದ್ರೆ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ ಮಾತ್ರ, ಮುಸ್ಲಿಂ ಯುವಕರು, ಕೈಯಲ್ಲಿ ಲಾಂಗ್, ಮಚ್ಚು , ಡ್ರ್ಯಾಗರ್ ‌ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಹಿಡಿದು ಡಾನ್ಸ್ ಮಾಡ್ತಿದ್ರು. ಅಲ್ಲದೆ ಮುಸ್ಲಿಂ ನಾಯಕರು ಮಾಡಿರುವ ಹಿಂದೂ ವಿರೋಧಿ ಭಾಷಣಕ್ಕೆ ಜೊರು ಡಿಜೆ ಸೌಂಡ್ ಹಾಕಿ ಮಾರಕಾಸ್ತ್ರಗಳನ್ನು ಹಿಡಿದು ಪ್ರಚೋದಕಾರಿಯಾಗಿ ನಡುರಸ್ತೆಯಲ್ಲೇ ಡಾನ್ಸ್ ಮಾಡಿ ಪುಂಡಾಟ ಮೆರೆದಿದ್ದಾರೆ. 

14 ಅಪ್ರಾಪ್ತರು ಸೇರಿದಂತೆ 19 ಮಂದಿಯ ಬಂಧನ: ಈ ಘಟನೆ ನಡೆದ ನಂತರ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ ತೊಡಗಿತ್ತು. ಈ ವಿಡಿಯೋಗಳನ್ನು ನೋಡಿದ ಸಿದ್ದಾಪುರ ಪೊಲೀಸರು, ತಕ್ಷಣ ಅಲರ್ಟ್ ಆಗಿ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತರಾಗಿ ಎಫ್ ಐಆರ್ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಮುಂದಾದ್ರು. ಈ ಪ್ರಚೋದನಾಕಾರಿ ವಿಡಿಯೋಗಳ ಆಧಾರದ ಮೇಲೆ 14 ಜನ ಅಪ್ರಾಪ್ತರು ಸೇರಿಸಂತೆ ಒಟ್ಟು 19 ಮಂದಿಯನ್ನ ಬಂಧಿಸಿದ್ದಾರೆ.

ಬೆಂಗಳೂರು: ತಿಂಗಳಾದ್ರೂ ರೇವ್‌ ಪಾರ್ಟಿ ರಹಸ್ಯ ನಿಗೂಢ..!

ಈ ವಿಚಾರ ತಿಳಿಯುತ್ತಿದ್ದಂತೆಯೇ ಬಂಧಿತರ ಪೋಷಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ನಮ್ಮ ಮಕ್ಕಳು, ಅಮಾಯಕರು, ಪೊಲೀಸರು ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ಪೊಲೀಸ್ ಠಾಣೆ ಮುಂದೆ ಬಂದು ನಮ್ಮ ಮಕ್ಕಳು ಅಮಾಯಕರು, ಅಪ್ರಾಪ್ತರು ಅನ್ನೋ ಪೋಷಕರು, ಮಾರಕಾಸ್ತ್ರಗಳನ್ನು ಹಿಡಿದು ನಡುರಸ್ತೆಯಲ್ಲಿ ಡಾನ್ಸ್ ಮಾಡುವಾಗ ಏನ್ ಮಾಡ್ತಿದ್ರು ಅನ್ನೋದು ಪೋಲಿಸರ ಪ್ರಶ್ನೆ. ಇನ್ನು ಈ ಪ್ರಕರಣದಲ್ಲಿ‌ ಮತ್ತಷ್ಟು ಜನರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.