Asianet Suvarna News Asianet Suvarna News

ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಿದ್ರಾ ನಟ ಯಶಸ್ ಸೂರ್ಯ?

ನಟ ದರ್ಶನ್ ಜೊತೆಗೆ ಪಾರ್ಟಿ ಮಾಡಿದ ಮತ್ತೊಬ್ಬ ನಟ ಯಶಸ್ ಸೂರ್ಯ ಅವರಿಂದ ರೇಣುಕಾಸ್ವಾಮಿ ಕೊಲೆ ಕೇಸಿನ ಕುರಿತು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

actor Yashas Surya witness against actor Darshan about Renuka swamy murder case sat
Author
First Published Aug 13, 2024, 3:39 PM IST | Last Updated Aug 13, 2024, 3:39 PM IST

ಬೆಂಗಳೂರು (ಆ.13): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೆಂಗಳೂರು ಪೊಲೀಸರು ನಟ ದರ್ಶನ್ ಜೊತೆಗೆ ಪಾರ್ಟಿ ಮಾಡಿದ ಮತ್ತೊಬ್ಬ ನಟನ ಸಾಕ್ಷಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. 

ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ನಟ ಯಶಸ್ ಸೂರ್ಯ ಅವರಿಂದ ಸಿಆರ್ ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಯಶಸ್ ಸೂರ್ಯ ವಿಚಾರಣೆ ಮಾಡಲಾಗಿದೆ. ಬಳಿಕ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲು ಮಾಡಲಾಗಿದೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಪಾರ್ಟಿಯಲ್ಲಿ ನಟ ದರ್ಶನ್‌ನೊಂದಿಗೆ ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದನು. ಇನ್ನು ಪಾರ್ಟಿ ವೇಳೆ ಮಧ್ಯದಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಲು ದರ್ಶನ್ ಎದ್ದು ಹೋಗಿದ್ದನು ಎಂದು ಹೇಳಲಾಗುತ್ತಿದೆ. ಜೊತೆಗೆ, ಪಾರ್ಟಿಯ ವೇಳೆ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ವಿಚಾರದ ಬಗ್ಗೆ ದರ್ಶನ್ ಏನಾದರೂ ಮಾತನಾಡಿದ್ದಾನಾ ಎಂಬುದರ ಬಗ್ಗೆ ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. 

ನಟ ಚಿಕ್ಕಣ್ಣ ಸೆಕ್ಷನ್ 164 ಹೇಳಿಕೆಯಲ್ಲಿ ಏನಿದೆ?: ದರ್ಶನ್‌ಗೆ ಮುಳುವಾಗುತ್ತಾ ಹಾಸ್ಯ ನಟನ ಹೇಳಿಕೆ?

ಸ್ಟೋನಿ ಬ್ರೂಕ್ ಹೋಟೆಲ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಾದ ದಿನ ನಟ ದರ್ಶನ್, ನಟ ಪ್ರದೂಷ್, ವಿನಯ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗೆ ನಟ ಯಶಸಸ್ ಸೂರ್ಯ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದನು. ಕೊಲೆ ಆರೋಪಿಗಳ ಜೊತೆ ಪಾರ್ಟಿಯಲ್ಲಿ ಭಾಗಿ ಹಿನ್ನೆಲೆಯಲ್ಲಿ  ಪೊಲೀಸರು ನಟ ಯಶಸ್ ಸೂರ್ಯಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಪ್ರತಿ ತಲುಪುತ್ತಿದ್ದಂತೆಯೇ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಆನಂತರ ಯಶಸ್ ಸೂರ್ಯನ 164 ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.

ನಟ ದರ್ಶನ್ ಬಗ್ಗೆ 'ಗರಡಿ' ಹೀರೋ ಸೂರ್ಯ ಹೀಗೆ ಹೇಳಿದ್ರಾ; ಭಾರೀ ವೈರಲ್ ಆಯ್ತು ನ್ಯೂಸ್!

ಪೊಲೀಸರ ವಿಚಾರಣೆಗೆ ಹಾಜರಾದ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 164 ಅಡಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಯಶಸ್ ಸೂರ್ಯ ವಿಟ್ನೆಸ್ ಎಂದು ಪರಿಗಣಿಸಿ ಹೇಳಿಕೆ ದಾಖಲಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದ ಮತ್ತೊಬ್ಬ ನಟನಿಂದ ಕೊಲೆ ಆರೋಪಿ ನಟ ದರ್ಶನ್ ಕುರಿತಂತೆ ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ. ಈ ಮೊದಲು ನಟ ಚಿಕ್ಕಣ್ಣನಿಂದ ಪೊಲೀಸರು 164 ಹೇಳಿಕೆ ದಾಖಲು ಮಾಡಿಕೊಂಡಿದ್ದರು. ಈಗ ಒಬ್ಬರ ಹೇಳಿಕೆಗಳನ್ನೂ ತಾಳೆ ನೋಡಿ ಸಾಮ್ಯತೆ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ.

Latest Videos
Follow Us:
Download App:
  • android
  • ios