ಕೊಲೆಪಾತಕಿಗಳ ಸಂಘ ಸೇರಿದ ಪೊರ್ಕಿ; ದರ್ಶನ್‌ನಿಂದ ವಿಡಿಯೋ ಕಾಲ್ ಮಾಡಿಸಿದ ರೌಡಿಶೀಟರ್ ಧರ್ಮ!
ನಟ ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಈ ಕರೆ ಮಾಡಿಸಿದ್ದು ಕೊಲೆ ಕೇಸಿನಲ್ಲಿ ಜೈಲು ಸೇರಿರುವ ರೌಡಿಶೀಟರ್ ಧರ್ಮ ಎಂಬುದು ತಿಳಿದುಬಂದಿದೆ.
ಬೆಂಗಳೂರು (ಆ.25): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋ ಕಾಲ್ ಮಾಡಿಸಿದ್ದು, ಕೊಲೆ ಕೇಸಿನಲ್ಲಿ ಜೈಲು ಸೇರಿರುವ ರೌಡಿಶೀಟರ್ ಧರ್ಮ ಎಂಬುದು ರಿವೀಲ್ ಆಗಿದೆ.
ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಚಹಾ ಸೇವಿಸುತ್ತಾ, ಸಿಗರೇಟ್ ಸೇದುತ್ತಾ ಐಷಾರಾಮಿ ಜೀವನ ಕಳೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಆದರೆ, ದರ್ಶನ್ ಕಡೆಯಿಂದ ವಿಡಿಯೋ ಕಾಲ್ ಮಾಡಿಸಿದ ವ್ಯಕ್ತಿ ಮಾಡಿಸಿದವನು ಕೂಡ ಕೊಲೆ ಪಾತಕಿ ರೌಡಿಶೀಟರ್ ಬಾಣಸವಾಡಿ ರೌಡಿಶೀಟರ್ ಧರ್ಮ ಎಂಬಾತನಾಗಿದ್ದಾನೆ.
ನಟ ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್: ಐಷಾರಾಮಿ ಜೀವನಕ್ಕೆ ಮತ್ತಷ್ಟು ಸಾಕ್ಷಿ!
ಬೆಂಗಳೂರಿನ ಬಾಣಸವಾಡಿಯಲ್ಲಿ ಮೇ 7ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಈ ರೌಡಿಶೀಟರ್ ಧರ್ಮ ಕೂಡ ಭಾಗಿಯಾಗಿದ್ದನು. ಕಾರ್ತಿಕೇಯನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಧರ್ಮನನ್ನು ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ಈಗ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದರೂ ಹಣ ಹಾಗೂ ತೋಳ್ಬಲದಿಂದ ಧರ್ಮ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದನು. ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ದರ್ಶನ್‌ಗೆ ಅಭಿಮಾನಿಯೂ ಆಗಿರುವ ಧರ್ಮ ಜೈಲಿನಲ್ಲಿ ತುಸು ಹೆಚ್ಚಾಗಿಯೇ ಪರಿಚಿತನಾಗಿದ್ದಾನೆ.
ಜೈಲಿನಲ್ಲಿರುವ ಬಹುತೇಕರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದವರೇ ಇರುತ್ತಾರೆ. ಅವರೊಂದಿಗೆ ಅನಿವಾರ್ಯವಾಗಿ ಬೆರೆಯಲೇಬೇಕಿರುವ ಪರಿಸ್ಥಿತಿ ಇರುತ್ತದೆ. ಆದರೆ, ಇಲ್ಲಿಯೂ ದರ್ಶನ್ ಕೂಡ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್‌ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ಅದರಲ್ಲಿ ಧರ್ಮನೂ ಒಬ್ಬನಾಗಿರಬಹುದು. ಇನ್ನು ದರ್ಶನ್ ಪರಿಚಯವನ್ನು ತೀರಾ ಸಲುಗೆಗೆ ತೆಗೆದುಕೊಂಡ ರೌಡಿಶೀಟರ್ ಧರ್ಮ ಜೈಲಿನಲ್ಲಿ ತನ್ನ ಆಪ್ತನಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಡಿಯೀ ಕರೆ ಮಾಡಿ ಮಾತನಾಡಿದ್ದಾನೆ. ನಂತರ, ತನ್ನ ಬಳಿ ನಟ ದರ್ಶನ್ ಕೂಡ ಇದ್ದಾನೆ ಮಾತನಾಡು ಎಂದು ಹೇಳಿದ್ದಾನೆ. ಆಗ ದರ್ಶನ್‌ನೊಂದಿಗೆ ಹೊರಗಿನ ವ್ಯಕ್ತಿ ಮಾತನಾಡುತ್ತಾ ಕುಶಲೋಪರಿ ವಿಚಾರಿಸಿದ್ದಾನೆ.
ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.!
ಆದರೆ, ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ರೌಡಿಶೀಟರ್ ಧರ್ಮನ ಆಪ್ತ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ, ದರ್ಶನ್ ಜೊತೆಗೆ ಮಾತನಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಇದು ವೈರಲ್ ಆಗಿದೆ. ಆದರೆ, ಈ ವಿಡಿಯೋ ವೈರಲ್ ಆದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದರ ಅರಿವು ಕೂಡ ಈತನಿಗಿರಲಿಲ್ಲ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಸ್ಟೇಟಸ್‌ನಿಂದ ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಜೈಲಿನಲ್ಲಿರುವ ದರ್ಶನ್ ವಿಡಿಯೋ ಕಾಲ್‌ನಲ್ಲಿ ಬೇರೆಯವರೊಂದಿಗೆ ಮಾತನಾಡಿರುವುದು ಬೇರೆಡೆ ವೃಲ್ ಆಗಿತ್ತು.